ಒಡಿಶಾ : ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಸಾವಿನ ಸಂಖ್ಯೆ 280ಕ್ಕೆ ಏರಿಕೆಯಾಗಿದೆ. ಇನ್ನು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕದ ಪ್ರಯಾಣಿಕರೆಲ್ಲರೂ ಸೇಫ್ ಆಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕದಿಂದ ತೆರಳಿದ್ದ ರೈಲಿಗೂ ಹಾನಿಯಾಗಿದೆ. 23 ಬೋಗಿಗಳಲ್ಲಿ ಮೂರು ಬೋಗಿಗಳಿಗೆ ಹಾನಿಯಾಗಿದ್ದು ಈ ಬೋಗಿಯಲ್ಲಿ ರಾಜ್ಯದ ಪ್ರಯಾಣಿಕರು ಇರಲಿಲ್ಲ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ಸಹಾಯವಾಣಿ ಕೂಡ ಆರಂಭಗೊಂಡಿದ್ದು ಕರ್ನಾಟಕದ ಪ್ರಯಾಣಿಕರಿಗೆ ಯಾವುದೇ ಹಾನಿ ಉಂಟಾದ ಬಗ್ಗೆ ಮಾಹಿತಿ ಬಂದಿಲ್ಲ. ಕರ್ನಾಟಕದ ಪ್ರಯಾಣಿಕರೆಲ್ಲರೂ ಸೇಫ್ ಆಗಿದ್ದಾರೆ ಎಂದು ಶಶಿಕುಮಾರ್ ಹೇಳಿದ್ದಾರೆ.