
ಮಂಡ್ಯ : ಮೇ 29, ರೆಬೆಲ್ ಸ್ಟಾರ್, ರಾಜಕಾರಣಿ ಅಂಬರೀಷ್ ಅವರ 71ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರ ಪತ್ನಿ ಸಂಸದೆ ಸುಮಲತಾ ಅಂಬರೀಷ್ ಹಾಗೂ ಇತರ ಕುಟುಂಬ ಸದಸ್ಯರು, ಆಪ್ತರು, ಬಂಧುಗಳು ನಗರದ ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಅಂಬರೀಷ್ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದರು.

ದೊಡ್ಡರಸಿನಕೆರೆ ಗ್ರಾಮದಲ್ಲಿ ಅಂಬರೀಶ್ ಸಮಾಧಿ ಬಳಿ ಕೇಕ್ ಕತ್ತರಿಸಿದ ಅಭಿಮಾನಿಗಳು

ರೆಬಲ್ ಸ್ಟಾರ್ ಅಂಬರೀಶ್ ಅವರ ಸಮಾಧಿಗೆ ಮಂಡ್ಯ ಸಂಸದೆ ಸುಮಲತಾ ಪೂಜೆ ಸಲ್ಲಿಸಿದರು, ಅಂಬರೀಶ್ ಹುಟ್ಟೂರಿನಲ್ಲಿರುವ ಸಮಾಧಿಗೆ ವಿಶೇಷ ಪೂಜೆಸಲ್ಲಿಸಿದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನನ ದೊಡ್ಡರಸಿನಕೆರೆ ಗ್ರಾಮದಲ್ಲಿ ಅಂಬರೀಶ್ ಸಮಾಧಿಗೆ ವಿವಿದ ಬಗೆಯ ಹೂಗಳಿಂದ ಅಲಾಂಕಾರ ಮಾಡಿದ್ದ ಅಭಿಮಾನಿಗಳು, ಅಂಬಿ ಸಮಾಧಿ ಮುಂದೆ ಕೇಕ್ ಕತ್ತರಿಸಿದರು. ಇದೇ ವೇಳೆ ರೆಬಲ್ ಸ್ಟಾರ್ ಅಂಬಿ ಇದ್ದ ವೇಳೆ ಆಚರಿಸುತ್ತಿದ್ದ ಹುಟ್ಟುಹಬ್ಬದ ದಿನಗಳನ್ನ ಸಂಸದೆ ಸುಮಲತಾ ಅವರು ಮೆಲಕು ಹಾಕಿದರು.