ಚಿಕ್ಕಬಳ್ಳಾಪುರ : ನೂತನ ಸಚಿವ ಡಾ.ಎಂ.ಸಿ.ಸುಧಾಕರ್ ಟೆಂಪಲ್ ರನ್ ಆರಂಭಿಸಿದ್ದಾರೆ. ತವರು ಕ್ಷೇತ್ರದಲ್ಲಿ ಸಚಿವ ಡಾ.ಎಂ.ಸಿ ಸುಧಾಕರ್ ಗೆ ಅವರ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು. ಶಿಡ್ಲಘಟ್ಟ ತಾಲೂಕಿನ ಹೆಚ್ ಕ್ರಾಸ್ ನಿಂದ ಚಿಂತಾಮಣಿ ಕಡೆಗೆ ಸಾಗುವ ಪ್ರತಿ ಗ್ರಾಮಗಳಲ್ಲಿ ಅದ್ದೂರಿ ಸ್ವಾಗತ ಕೋರಿದರು.
ಕ್ಷೇತ್ರದಾದ್ಯಂತ ಟೆಂಪಲ್ ರನ್ ಮಾಡುತ್ತಿರುವ ಸಚಿವ ಡಾ ಎಂ ಸಿ ಸುಧಾಕರ್, ಹೆಚ್.ಕ್ರಾಸ್, ಕೈವಾರ, ಮುರಗಮಲ್ಲ ದರ್ಗಾ, ಮಿಂಡಗಲ್, ಸೇರಿದಂತೆ ಹಲವು ದೇವಸ್ಥಾನಗಳಿಗೆ ಭೇಟಿನೀಡಿದ್ದಾರೆ. ಕಳೆದ 20 ವರ್ಷಗಳ ಬಳಿಕ ಚಿಂತಾಮಣಿಗೆ ಒಲಿದ ಸಚಿವ ಸ್ಥಾನ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಶಾಸಕ ಹಾಗೂ ಸಚಿವ ಡಾ.ಎಂ.ಸಿ.ಸುಧಾಕರ್ ಭರ್ಜರಿ ಸ್ವಾಗತ.