ಮಂಗಳೂರು : ಮಂಗಳೂರಿನಿಂದ ದುಬೈಗೆ ಟೇಕಾಫ್ ಆಗಿದ್ದ ವಿಮಾನದ ರೆಕ್ಕೆಗೆ ಹಕ್ಕಿಕೊಂದು ಡಿಕ್ಕಿ ಹೊಡೆದು ಅವಘಡ ಸಂಭವಿಸಿದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ. ಟ್ಯಾಕ್ಸಿ ವೇ ಟಾಟಿ ರನ್ವೇನಲ್ಲಿ ಸಾಗುತ್ತಿದ್ದ ವಿಮಾನದ ರೆಕ್ಕೆ ಹಕ್ಕಿ ಡಿಕ್ಕಿ ಹೊಡೆದಿದೆ.
ಇಂದು ಬೆಳಗ್ಗೆ 8:30ಕ್ಕೆ ಮಂಗಳೂರು ಏರ್ಪೋರ್ಟ್ನಿಂದ ವಿಮಾನ ಟೇಕಾಫ್ ಆಗಿತ್ತು. ಆದರೆ ಏಕಾಏಕಿ ಹಕ್ಕಿ ಬಂದು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದ ವಿಮಾನ ವಾಪಸ್ ಬಂದಿದೆ. ಪ್ರಯಾಣಿಕರನ್ನು ಕೂಡಲೇ ವಿಮಾನದಿಂದ ಇಳಿಸಲಾಗಿದ್ದು ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದೆ.
ಇನ್ನು ಬೆಂಗಳೂರಿನಿಂದ ಕರೆತರಲಾದ ವಿಮಾನದಿಂದ ಪ್ರಯಾಣಿಕರನ್ನು ದುಬೈಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಹಕ್ಕಿ ಡಿಕ್ಕಿ ಪ್ರಕರಣದಿಂದಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.