• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಸಿದ್ದರಾಮಯ್ಯ ವರ್ಸಸ್​ ಡಿಕೆ ಶಿವಕುಮಾರ್​.. ಗೆಲ್ಲೋದ್ಯಾರು ಗೊತ್ತಾ..?

ಕೃಷ್ಣ ಮಣಿ by ಕೃಷ್ಣ ಮಣಿ
May 17, 2023
in ಅಂಕಣ
0
ಸಿದ್ದರಾಮಯ್ಯ ವರ್ಸಸ್​ ಡಿಕೆ ಶಿವಕುಮಾರ್​.. ಗೆಲ್ಲೋದ್ಯಾರು ಗೊತ್ತಾ..?
Share on WhatsAppShare on FacebookShare on Telegram

ಕಾಂಗ್ರೆಸ್​ನಲ್ಲಿ ಇಷ್ಟು ದಿನಗಳ ಕಾಲ ಒಟ್ಟಾಗಿಯೇ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್​ ಇದೀಗ ದೆಹಲಿಯ ಹೈಕಮಾಂಡ್​ ಅಂಗಳದಲ್ಲಿ ಅಜಾತ ಶತ್ರುಗಳ ರೀತಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ತನ್ನದೇ ಆದ ರೀತಿಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ. ಸರಣಿ ಸಭೆಗಳ ಬಳಿಕವೂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್​ ಹೈಕಮಾಂಡ್​, ಯಾರನ್ನು ಸಿಎಂ ಮಾಡಿದರೂ ಮುಂದಿನ ದಿನಗಳಲ್ಲಿ ಸರ್ಕಾರದಲ್ಲೇ ಸಂಕಷ್ಟ ಎದುರಾಗುವ ಸಂದೇಶ ರವಾನೆ ಆಗಿದೆ. ಇದೀಗ ಅಳೆದೂ ತೂಗಿ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿರುವ ಕಾಂಗ್ರೆಸ್​​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್​ ಜೊತೆಗೆ ವೈಯಕ್ತಿಕವಾಗಿ ಪ್ರತ್ಯೇಕ ಚರ್ಚೆ ನಡೆಸಿದ್ದಾರೆ. ಆದರೆ ಉಭಯ ನಾಯಕರೂ ಸಿಎಂ ಸ್ಥಾನಕ್ಕಾಗಿಯೇ ಪಟ್ಟು ಹಿಡಿದಿದ್ದು, ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ಕೂಡ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ.

ADVERTISEMENT

ನಾನೇ ಸಿಎಂ ಆಗಬೇಕು, ಶಾಸಕರ ನಿರ್ಧಾರ ಕೇಳಿ..

ಮಾಜಿ ಸಿಎಂ ಸಿದ್ದರಾಮಯ್ಯನೇ ಮುಖ್ಯಮಂತ್ರಿ ಆಗ್ತಾರೆ ಅನ್ನೋ ಮಾತಿತ್ತು. ಆದರೆ ಇದೀಗ ಅಸಲಿ ಆಟ ಬದಲಾಗಿದೆ. ಡಿ.ಕೆ ಶಿವಕುಮಾರ್​ ನಾನೂ ಕೂಡ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಹೇಳಿದಂತೆ ನಿರ್ಧಾರ ತೆಗೆದುಕೊಳ್ಳಿ. ಶಾಸಕರ ಬಲ ಯಾರ ಪರವಾಗಿ ಹೆಚ್ಚಿದೆ..? ಅವರನ್ನೇ ಶಾಸಕಾಂಗ ಪಕ್ಷದ ನಾಯಕನಾಗಿ ಘೋಷಣೆ ಮಾಡಿ. ಬಹುತೇಕ ಶಾಸಕರು ನನ್ನ ಪರವಾಗಿ ಅಭಿಪ್ರಾಯ ತಿಳಿಸಿದ್ದಾರೆ. ಹೀಗಾಗಿ ಶಾಸಕರು ನನ್ನ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ ಎಂದೇ ಅರ್ಥ. ಶಾಸಕರ ಅಭಿಪ್ರಾಯವನ್ನು ಗೌರವಿಸುವಂತೆ ಮಲ್ಲಿಕಾರ್ಜುನ ಖರ್ಗೆಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಕಾಂಗ್ರೆಸ್​ ಹೈಕಮಾಂಡ್​ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ನಾಳೆ ಮತ್ತೊಂದು ಸುತ್ತಿನ ಸಭೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ನಡುವೆ ಸಿದ್ದರಾಮಯ್ಯ, ಮಂಗಳವಾರ ರಾತ್ರಿ ವೇಣುಗೋಪಾಲ್​ ಜೊತೆಗೆ ಚರ್ಚೆ ನಡೆಸಿದ ಬಳಿಕ ಸುರ್ಜೇವಾಲ ಭೇಟಿ ಮಾಡಿದ್ದಾರೆ.

ಸೋನಿಯಾ ಗಾಂಧಿ ಹೇಳಿದವರು ಸಿಎಂ ಆಗೋಣ..!

ನಾನು ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಸಾಕಷ್ಟು ಶ್ರಮ ಪಟ್ಟಿದ್ದೇನೆ. ನಾನು ಸಿಎಂ ಆಗ್ತೇನೆ ಎನ್ನುವ ಕಾರಣಕ್ಕೇ ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಜನರು ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಿದ್ದಾರೆ. ಈಗ ನಾನು ಹೇಳಿದಂತೆ ಕಾಂಗ್ರೆಸ್​ ಪಕ್ಷಕ್ಕೆ ಜನರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ನಾನು ಮುಖ್ಯಮಂತ್ರಿ ಆಗಲೇಬೇಕು. ಒಂದು ವೇಳೆ ನಾನು ಮುಖ್ಯಮಂತ್ರಿ ಆಗುವುದು ಬೇಡ ಅನ್ನೋದಾದ್ರೆ ನೀವೇ ಮುಖ್ಯಮಂತ್ರಿ ಆಗಿ, ನಾನು ನಿಮ್ಮನ್ನು ಬೆಂಬಲಿಸ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲಿಸಿದ್ದಾರೆ ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೆ ಸಿದ್ದರಾಮಯ್ಯ ಕಾಂಗ್ರೆಸ್​ ಸೇರಿದ ಬಳಿಕ ಯಾವೆಲ್ಲಾ ಅಧಿಕಾರ ಅನುಭವಿಸಿದ್ದಾರೆ..? ಪಕ್ಷ ಹಾಗು ಸರ್ಕಾರದಲ್ಲಿ ಮಾಡಿರುವ ಎಡವಟ್ಟುಗಳು ಏನು..? ಅನ್ನೋ ಬಗ್ಗೆ ಕಂಪ್ಲೀಟ್​ ಮಾಹಿತಿಯ ಪಟ್ಟಿಯನ್ನೇ ನೀಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕಾಂಗ್ರೆಸ್​ ಶಾಸಕರ ಗುಂಪಿನ ಜೊತೆಗೆ ಸಿದ್ದರಾಮಯ್ಯ ಸಭೆ ನಡೆಸಿರುವುದೂ ಕೂಡ ವಿರೋಧಕ್ಕೆ ಕಾರಣವಾಗಿದೆ.

ಯಾರು ಸಿಎಂ ಆದರೆ ಏನಾಗಲಿದೆ ಭವಿಷ್ಯ..?

ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆದರೆ ಬಿಜೆಪಿ ಪಾಲಿಗೆ ಅಷ್ಟೊಂದು ದೊಡ್ಡ ಪ್ರಮಾಣದ ಅಸ್ತ್ರ ಸಿಕ್ಕಂತೆ ಆಗುವುದಿಲ್ಲ. ಅಷ್ಟು ಮಾತ್ರವಲ್ಲದೆ ಸಿದ್ದರಾಮಯ್ಯ ಈಗಾಗಲೇ ಮುಖ್ಯಮಂತ್ರಿ ಆಗಿ ಕೆಲಸ ಮಾಡಿರುವ ಅನುಭವ ಇದ್ದು, ಅಧಿಕಾರಿಗಳ ಜೊತೆಗೆ ಹೇಗೆ ಕೆಲಸ ಮಾಡಬೇಕು ಅನ್ನೋ ಚಾಕಚಕ್ಯತೆ ಇದೆ. ಆದರೆ ಡಿಕೆ ಶಿವಕುಮಾರ್​ ಒಂದು ವೇಳೆ ಮುಖ್ಯಮಂತ್ರಿ ಆದರೆ ಕೇಸರಿ ಪಾಳಯಕ್ಕೆ ಹಾಲು ಅನ್ನ ಉಂಡಂತೆ ಆಗುವುದು ಶತಸಿದ್ಧ. ಡಿ.ಕೆ ಶಿವಕುಮಾರ್​ ವಿರುದ್ಧ ಈಗಾಗಲೇ ಜಾರಿನಿರ್ದೇಶನಾಲಯ, ಸಿಬಿಐ, ಐಟಿ ಹೀಗೆ ಸಾಕಷ್ಟು ಕೇಸ್​ಗಳಿದ್ದು, ಯಾವ ಸಮಯದಲ್ಲಿ ಆದರೂ ವಿಚಾರಣೆಗೆ ಕರೆಯಬಹುದು. ಒಂದು ವೇಳೆ ವಿಚಾರಣೆ ನೆಪದಲ್ಲಿ ಬಂಧಿಸಿದರೂ ಅಚ್ಚರಿಯಿಲ್ಲ. ಸಿದ್ದರಾಮಯ್ಯ ಬಿಟ್ಟು ಡಿ.ಕೆ ಶಿವಕುಮಾರ್​ ಆಯ್ಕೆ ಮಾಡುವುದು ಹೈಕಮಾಂಡ್​ಗೂ ಕಷ್ಟ. ಸಿದ್ದರಾಮಯ್ಯ ಮನವೊಲಿಕೆ ಕಷ್ಟ ಎನ್ನುವ ಕಾರಣಕ್ಕಾದರೂ ಡಿ.ಕೆ ಶಿವಕುಮಾರ್​ ಮನವೊಲಿಸಲು ಹೈಕಮಾಂಡ್​ ಭಾರೀ ಸರ್ಕಸ್​ ನಡೆಸುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಇಬ್ಬರನ್ನೂ ಮುಖಾಮುಖಿ ಕೂರಿಸಿ ಮಾತನಾಡುವ ನಿರ್ಧಾರ ಹೊರ ಬಿದ್ದಿದೆ.

ಕೃಷ್ಣಮಣಿ

Tags: AICCDKShivakumarKPCC presidentmallikarjunkhargerahulgandhisiddaramaiah
Previous Post

ಕರ್ನಾಟಕ ಏಕೆ ಬಿಜೆಪಿಯನ್ನು ತಿರಸ್ಕರಿಸಿದೆ?

Next Post

ನೆಚ್ಚಿನ ಶಾಸಕನಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳಿಂದ ರಕ್ತದಲ್ಲಿ ಪತ್ರ

Related Posts

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ
ಅಂಕಣ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

by ಪ್ರತಿಧ್ವನಿ
April 25, 2026
0

ನಾ ದಿವಾಕರ                             ಭಾಗ 2 ಧಾರ್ಮಿಕ ನಂಬಿಕೆ-ಸಮಾನತೆ...

Read moreDetails
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post
ನೆಚ್ಚಿನ ಶಾಸಕನಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳಿಂದ ರಕ್ತದಲ್ಲಿ ಪತ್ರ

ನೆಚ್ಚಿನ ಶಾಸಕನಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳಿಂದ ರಕ್ತದಲ್ಲಿ ಪತ್ರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada