ವಿಜಯಪುರ :ಬಬಲೇಶ್ವರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂಬಿ ಪಾಟೀಲ್ ಪರ ನಟಿ ರಮ್ಯಾ ಅಬ್ಬರದ ಪ್ರಚಾರ ನಡೆಸಿದ್ದಾರೆ. ಬಬಲೇಶ್ವರಿ ಅದ್ಧೂರಿ ಪ್ರಚಾರ ನಡೆಸಿದ ಬಳಿಕ ವಿಜಯಪುರ ನಗರದಲ್ಲಿರುವ ಎಂಬಿ ಪಾಟೀಲ್ ನಿವಾಸದಲ್ಲಿ ಮಾತನಾಡಿದ ನಟಿ ರಮ್ಯಾ , ಎಂ ಬಿ ಪಾಟೀಲ್ ಹಾಗೂ ಇತರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಬಂದಿದ್ದೇನೆ. ಇಲ್ಲಿ ನನಗೆ ಅದ್ಧೂರಿ ಸ್ವಾಗತ ಸಿಕ್ಕಿದೆ ಎಂದು ಹೇಳಿದರು,
ನಾನು ಇಂದು ಎಂಬಿ ಪಾಟೀಲ್ ಹಾಗೂ ಇತರೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಬಂದಿದ್ದೇನೆ. ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಂ ಬಿ ಪಾಟೀಲ್ ನನ್ನ ಪರವಾಗಿ ಪ್ರಚಾರ ಮಾಡಿದ್ದರು. ನನ್ನ ಗೆಲುವಿಗೆ ಸಾಥ್ ನೀಡಿದ್ದರು. ಎಂಬಿ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಅವರೊಬ್ಬ ಉತ್ತಮ ರಾಜಕಾರಣಿ ಎಂದು ಹಾಡಿ ಹೊಗಳಿದ್ರು .
ಎಂ ಬಿ ಪಾಟೀಲ್ ಜಿಲ್ಲೆಯಲ್ಲಿ ನೀರು ತಂದಿದ್ದಾರೆ, ನೀರು ಸಿಕ್ಕ ಕಾರಣ ರೈತರು ತೋಟಗಕಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ . ವಿವಿಧ ಕೃಷಿ ಕಾಯಕಗಳನ್ನು ಮಾಡುತ್ತಿದ್ದಾರೆ…ಕಾವೇರಿ ಜಲವಿವಾದದ ವೇಳೆ ಎಂ ಬಿ ಪಾಟೀಲರು ಕನ್ಸರ್ನ್ ಆಗಿ ಕೆಲಸ ಮಾಡಿದ್ದರು ಎಂದು ರಮ್ಯಾ ಹೇಳಿದ್ದಾರೆ.
ರಮ್ಯಾ ರಾಜಕಾರಣದಿಂದ ದೂರ ಉಳಿದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು 2017 ರಲ್ಲಿ ರಾಹುಲ್ ಗಾಂಧಿ ಸೂಚನೆ ಮೇರೆಗೆ ಎಐಸಿಸಿ ಸೋಷಿಯಲ್ ಮೀಡಿಯಾದ ನೇತೃತ್ವ ವಹಿಸಿದ್ದೆ.ಆಗ ದೆಹಲಿಯಲ್ಲಿದ್ದೆ . ನಂತರ ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದೆ. ಆರೋಗ್ಯ ಸುಧಾರಣೆಯಾದ ಬಳಿಕ ಸಿನಿಮಾ ಹಾಗೂ ರಾಜಕಾರಣದಲ್ಲಿ ಮತ್ತೆ ಸಕ್ರಿಯನಾಗಿದ್ದೇನೆ ಎಂದು ಹೇಳಿದರು.