• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಕರುನಾಡ ಅಂಗಳದಲ್ಲಿ ಹೈಕಮಾಂಡ್‌ ಅಬ್ಬರ.. ತಪ್ಪಿದ ಮಹಾ ಎಡವಟ್ಟು..!

ಕೃಷ್ಣ ಮಣಿ by ಕೃಷ್ಣ ಮಣಿ
April 29, 2023
in ರಾಜಕೀಯ
0
ಕರುನಾಡ ಅಂಗಳದಲ್ಲಿ ಹೈಕಮಾಂಡ್‌ ಅಬ್ಬರ.. ತಪ್ಪಿದ ಮಹಾ ಎಡವಟ್ಟು..!
Share on WhatsAppShare on FacebookShare on Telegram

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ನಾಯಕರು ಕರ್ನಾಟಕದಲ್ಲಿ ಬೀಡುಬಿಟ್ಟಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಪ್ರಚಾರ ಮಾಡುತ್ತಿರುವ ನಾಯಕರು ಇವತ್ತೂ ಕೂಡ ಬಿಡುವಿಲ್ಲದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಇವತ್ತು ಬೆಳಗ್ಗೆ 10 ಗಂಟೆಗೆ ದಾವಣಗೆರೆಯಿಂದ ಹೊರಟು, ಕೊಡಗು ಜಿಲ್ಲೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಅಪ್ಪಚ್ಚು ರಂಜನ್​ ಪರವಾಗಿ ಮತಯಾಚನೆ ಮಾಡಿದ್ದಾರೆ. ಮಧ್ಯಾಹ್ನ ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್​ ಸುವರ್ಣ ಪರವಾಗಿ ಮತಯಾಚಿಸಿದ್ದಾರೆ. ಸಂಜೆ 4 ರಿಂದ 4.45ರ ತನಕ ಬೈಂದೂರು ಕ್ಷೇತ್ರದಲ್ಲಿ ಗುರುರಾಜ್​ ಗಂಟಿಹೊಳೆ ಪರವಾಗಿ ರೋಡ್​ಶೋ ಮಾಡಿದ್ದು, ಸಂಜೆ 5.40ಕ್ಕೆ ವೇದವ್ಯಾಸ್ ಕಾಮತ್​ ಪರವಾಗಿ ಮಂಗಳೂರಿನಲ್ಲಿ ರೋಡ್​ ಶೋ ಮುಗಿಸಿ ಗುಪ್ತ ಸಭೆ ಬಳಿಕ ದೆಹಲಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್‌ ನಾಯಕರ ಭಾಷಣದ ವೇಳೆ ಸಣ್ಣದೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ADVERTISEMENT

ಕರ್ನಾಟಕದಲ್ಲೇ ಬೀಡು ಬಿಟ್ಟಿರುವ ಬಿಜೆಪಿ ಅಧ್ಯಕ್ಷ ನಡ್ಡಾ..!

ಕರ್ನಾಟಕ ಪ್ರವಾಸದಲ್ಲೇ ಬೀಡು ಬಿಟ್ಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬೆಳಗ್ಗೆ 9.25ಕ್ಕೆ ಶಿವಮೊಗ್ಗದಿಂದ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ಧಾರವಾಡದ ಕಲಘಟಕಿ ಕ್ಷೇತ್ರದಲ್ಲಿ ನಾಗರಾಜ್​ ಛಬ್ಬಿ ಪರವಾಗಿ ರೋಡ್​ ಶೋ ಮಾಡಿದ್ದಾರೆ. ಮಧ್ಯಾಹ್ನ 1.15ಕ್ಕೆ ಗದಗದ ರೋಣಾ ಕ್ಷೇತ್ರದಲ್ಲಿ ಕಳಕಪ್ಪ ಬಂಡಿ ಪರವಾಗಿ ಸಾರ್ವಜನಿಕ ಸಭೆಯಲ್ಲಿ ಮತಯಾಚನೆ ಮಾಡಿದ್ದಾರೆ. ಸಂಜೆ 4 ಗಂಟೆಗೆ ದಾವಣಗೆರೆಯ ಮಾಯಕೊಂಡ ಕ್ಷೇತ್ರದಲ್ಲಿ ಬಸವರಾಜ ನಾಯಕ್​ ಪರವಾಗಿ ರೋಡ್​ ಶೋ ಕೂಡ ಮಾಡಿದ್ದಾರೆ. ಇನ್ನು ದಾವಣಗೆರೆಯಲ್ಲಿ ಸ್ಥಳೀಯ ನಾಯಕರ ಜೊತೆಗೆ ಸಭೆ ನಡೆಸಿ ದಾವಣೆಗೆರೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ. ಈ ನಡುವೆ ಮೈಸೂರಿನಲ್ಲಿ ಪ್ರಚಾರ ಮಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಒಕ್ಕಲಿಗರನ್ನು ಕೆರಳಿಸುವ ಹೇಳಿಕೆ ನೀಡಿದ್ದಾರೆ. ಆದರೂ ಕನ್ನಡಿಗರನ್ನು ಯಾಮಾರಿಸುವ ಕೆಲಸವನ್ನ ಬಿಜೆಪಿ ನಾಯಕರು ಚೆನ್ನಾಗಿಯೇ ಮಾಡಿದ್ದಾರೆ.

ಮತ್ತೆ ಒಕ್ಕಲಿಗರ ಸ್ವಾಭಿಮಾನ ಕೆಣಕಿದ ರಾಜನಾಥ್‌ ಸಿಂಗ್‌..

ಮೈಸೂರಿನಲ್ಲಿ ಅಬ್ಬರದ ಪ್ರಚಾರ ಮಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ತುಂಬಾ ದಿನದ ನಂತರ ನಾನು ಮೈಸೂರಿಗೆ ಬಂದಿದ್ದೇನೆ. ಮೈಸೂರಿನಲ್ಲಿ ಅನೇಕ ಜನ ಮಹಾಪುರುಷರು ಹುಟ್ಟಿದ್ದಾರೆ. 2018ರಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿರಲಿಲ್ಲ. ಈ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದಿದ್ದಾರೆ. ಇನ್ನು ಉರಿಗೌಡ, ನಂಜೇಗೌಡ ಬಗ್ಗೆ ಪ್ರಸ್ತಾಪ ಮಾಡಿದ್ದ ಭಾರತೀಯ ಜನತಾ ಪಾರ್ಟಿ ಯೂಟರ್ನ್‌ ತೆಗೆದುಕೊಂಡಿತ್ತು. ಆದರೆ ಇಂದಿನ ಸಭೆಯಲ್ಲಿ ರಾಜನಾಥ್‌ ಸಿಂಗ್‌ ತಮ್ಮ ಭಾಷಣದ ಆರಂಭದಲ್ಲೇ ಉರಿಗೌಡ, ನಂಜೇಗೌಡನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ರಾಜನಾಥ್ ಸಿಂಗ್. ಉರಿಗೌಡ ನಂಜೇಗೌಡರಂತಹ ವೀರರು ಹುಟ್ಟಿದ ನಾಡು ಎಂದು ಉಲ್ಲೇಖ ಮಾಡಿದ್ದಾರೆ. ಆದರೆ ಅನುವಾದ ಮಾಡುವುದಕ್ಕೆ ನಿಂತಿದ್ದ ಗೋ. ಮಧುಸೂಧನ್, ಈ ಹೇಳಿಕೆಯನ್ನು ಹೇಳದೆ ಮರೆ ಮಾಚುವ ಕೆಲಸ ಮಾಡಿದ್ದಾರೆ.

ಮಧ್ಯಪ್ರದೇಶ ಸಿಎಂ ತುಮಕೂರಿನಲ್ಲಿ ಅಬ್ಬರ..

ತುಮಕೂರಿನ‌ ಮಧುಗಿರಿಯಲ್ಲಿ ಚುನಾವಣಾ ಪ್ರಚಾರ ಮಾಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್, ಬೃಹತ್‌ ಚುನಾವಣಾ ಪ್ರಚಾರ ಸಭೆ ನಡೆಸಿದ್ದು, ಶಿರಾಗೇಟ್‌ನಿಂದ ಆರಂಭವಾಗಿ ದಂಡೂರು ಬಾಗಿಲು, ದೊಡ್ಡಪೇಟೆ, ಮಲ್ಲೇಶ್ವರಸ್ವಾಮಿ ದೇವಸ್ಥಾನ,  ಡೂಮ್ ಲೈಟ್ ಸರ್ಕಲ್ ಮುಖಾಂತರ ಪುರಸಭೆ ಮುಂಭಾಗದವರೆಗೂ ಬೃಹತ್ ರೋಡ್ ಶೋ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಲ್.ಸಿ‌ ನಾಗರಾಜು ಪರ ಮಧ್ಯಪ್ರದೇಶ ಸಿಎಂ  ಮತಯಾಚನೆ ಮಾಡಿದ್ದಾರೆ. ಕಳೆದ ವಾರವಷ್ಟೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೂಡ ಮಂಡ್ಯ, ಬೀದರ್‌ ಸೇರಿದಂತೆ ಸಾಕಷ್ಟು ಕಡೆ ಪ್ರಚಾರ ನಡೆಸಿದ್ದರು. ಇನ್ನು ಕಾಂಗ್ರೆಸ್‌ನಲ್ಲೂ ಹೈಕಮಾಂಡ್‌ ಅಬ್ಬರದ ಪ್ರಚಾರ ನಡೆಸುತ್ತಿದ್ದು, ರಾಹುಲ್‌ ಗಾಂಧಿ ಹಾಗು ಪ್ರಿಯಾಂಕಾ ಗಾಂಧಿ ನಿರಂತರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ಧಾರವಾಡ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಪ್ರಿಯಾಂಕಾ ಗಾಂಧಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸಿ ಶೆಟ್ಟರ್‌ ಗೆಲುವಿಗೆ ರಣತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಕಾಂಗ್ರೆಸ್‌ ಮತ್ತು ಬಿಜೆಪಿ ಹೈಕಮಾಂಡ್‌ ಮೊರೆ ಹೋಗಿದ್ದು, ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ.  

Tags: #bjp#campaign#congress#election2023#karnataka#karnatakaassemblyelection#pratidhvani#pratidhvanidigital#pratidhvaninews
Previous Post

ರಾಯಚೂರಿನಲ್ಲಿ ಟಗರುಗೆ ತಿರುಗೇಟು ಕೊಟ್ಟ ರಾಜಾಹುಲಿ..!

Next Post

ʻಕಾಂಗ್ರೆಸ್ ಪಕ್ಷವನ್ನು ಕ್ಷಮಿಸಬೇಡಿʼ: ಪ್ರಧಾನಿ ನರೇಂದ್ರ ಮೋದಿ

Related Posts

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು
ರಾಜಕೀಯ

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

by ಪ್ರತಿಧ್ವನಿ
April 24, 2026
0

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಭೇಟಿಗಳ ಕುರಿತು ಕುತೂಹಲ ಮೂಡಿಸುವ ಹೇಳಿಕೆ ನೀಡಿದ್ದಾರೆ. “ನಾನು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೇನೆ, ಆದರೆ ಯಾರು ಎಂಬುದನ್ನು...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

April 23, 2026
Next Post
ʻಕಾಂಗ್ರೆಸ್ ಪಕ್ಷವನ್ನು ಕ್ಷಮಿಸಬೇಡಿʼ: ಪ್ರಧಾನಿ ನರೇಂದ್ರ ಮೋದಿ

ʻಕಾಂಗ್ರೆಸ್ ಪಕ್ಷವನ್ನು ಕ್ಷಮಿಸಬೇಡಿʼ: ಪ್ರಧಾನಿ ನರೇಂದ್ರ ಮೋದಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada