ರಾಜ್ಯ ಚುನಾವಣಾ(karnataka assembly election2023) ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ(narendra modi) ಮೊದಲ ಸಭೆಯಲ್ಲೇ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಡುವ ಮೂಲಕ ಕರುನಾಡ ಕುರುಕ್ಷೇತ್ರಕ್ಕೆ ರಣಕಹಳೆ ಊದಿದ್ದಾರೆ. ಹುಮ್ನಾಬಾದ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವ ಮೂಲಕ ಗಮನ ಸೆಳೆದರು. ಭಾರತ್ ಮಾತಾಕಿ ಜಯ್ ಎಂದು ಭಾಷಣ ಆರಂಭ ಮಾಡಿದ ಮೋದಿ, ಬಸವಣ್ಣ, ಶಿವಶರಣರ ಭೂಮಿಗೆ ನಮನಗಳು. ಇದು ನನ್ನ ಸೌಭಾಗ್ಯ, ಇಲ್ಲಿಗೆ ಬಂದಿದ್ದೇನೆ. ಈ ಬಾರಿಯ ಚುನಾವಣೆ(election) ಪ್ರಚಾರ ಯಾತ್ರೆ ಬಸವಣ್ಣನ ನಾಡಿನಿಂದ ಆರಂಭ ಆಗಿದೆ. ಈ ಬಾರಿಯ ನಿರ್ಧಾರ.. ಬಹುಮತದ ಬಿಜೆಪಿ ಸರ್ಕಾರ(BJP government) ಆಗಿರಬೇಕು. ಇದು ಕರ್ನಾಟಕವನ್ನು(karnataka) ದೇಶದಲ್ಲಿ ನಂ.1 ಮಾಡುವ ಉದ್ದೇಶಕ್ಕೆ ಕರ್ನಾಟಕದ ಜನರು ಬೆಂಬಲ ಕೊಡಬೇಕು ಎಂದಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ಗೂ ಮೋದಿ ಹೋಲಿಕೆ..!
ಕರ್ನಾಟಕ(karnataka) ಜನರ ಕನಸು ನನಸು ಮಾಡೋದು ಬಿಜೆಪಿ ಪಕ್ಷ ಮಾತ್ರ ಎಂದಿರುವ ಪ್ರಧಾನಿ ಮೋದಿ,(narendra modi) ಕರ್ನಾಟಕವನ್ನು ನಂ.1 ರಾಜ್ಯ ಮಾಡಲು ಡಬಲ್ ಇಂಜಿನ್ ಸರ್ಕಾರ ಪಣ ತೊಟ್ಟಿದೆ. ಕೇಂದ್ರ ಹಾಗು ರಾಜ್ಯದ ಡಬಲ್ ಶಕ್ತಿಯಿಂದ ಮಾತ್ರ ಇದು ಸಾಧ್ಯ. ಭ್ರಷ್ಟ ಕಾಂಗ್ರೆಸ್ ಪಕ್ಷವನ್ನ ಅಧಿಕಾರದಿಂದ ದೂರವಿಟ್ಟು, ಡಬಲ್ ಇಂಜಿನ್.. ಡಬಲ್ ಸ್ಪೀಡ್ನಲ್ಲಿ ಕೆಲಸ ಮಾಡುವ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಕರೆ ನೀಡಿದ್ರು. ಬಿಜೆಪಿ ಸರ್ಕಾರ(BJP government) ಇಲ್ಲದಿದ್ದಾಗ ಸಣ್ಣ ವಿಚಾರಗಳಿಗೂ ಕಷ್ಟವಿತ್ತು. ದಶಕಗಳಿಂದ ಆಗದ 100ಕ್ಕೂ ಹೆಚ್ಚು ಯೋಜನೆಗಳು ಈಗ ಆಗಿವೆ. ಅನೇಕ ಯೋಜನೆಗಳು ಕರ್ನಾಟಕದಲ್ಲೇ ಅಭಿವೃದ್ಧಿ ಆಗಿದೆ. ರೈತರು, ನೀರಾವರಿ ಯೋಜನೆಗಳಿಗೆ ಒತ್ತು ಕೊಡುತ್ತಿದ್ದೇವೆ. ರೈತರು ಸಣ್ಣ ಖರ್ಚುಗಳಿಗೆ ಅಲೆದಾಡುವ ಪರಿಸ್ಥಿತಿ ಇಲ್ಲ. ರೈತರ ಮನೆ ಬಾಗಿಲಿಗೆ ಸರ್ಕಾರದ ಯೋಜನೆಗಳು ತಲುಪುತ್ತಿವೆ. ದೇಶದಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿದೆ ಎಂದು ರಾಜ್ಯ ಸರ್ಕಾರಕ್ಕೆ ಶಹಬ್ಬಾಸ್ಗಿರಿ ಹೇಳಿದ್ದಾರೆ.
ಕಾಂಗ್ರೆಸ್ – ಜೆಡಿಎಸ್ ಎರಡೂ ಒಂದೇ.. ಇಬ್ಬರೂ ಜೊತೆಗಾರರು..!
ರಾಜ್ಯದಲ್ಲಿ 60 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಲಾಭ ಸಿಕ್ಕಿದೆ. ಸಣ್ಣ ಸಣ್ಣ ರೈತರಿಗೆ ಬ್ಯಾಂಕ್ನಲ್ಲಿ(bank) ಖಾತೆಯೇ ಇರಲಿಲ್ಲ. ಸಣ್ಣ ರೈತರಿಗೆ ಲೋನ್ಗಳೂ ಸಿಗುತ್ತಿರಲಿಲ್ಲ. ಇದೆಲ್ಲವನ್ನೂ ನಮ್ಮ ಸರ್ಕಾರ ಸಾಧ್ಯ ಮಾಡಿದೆ. ಕಾಂಗ್ರೆಸ್ ಈ ದೇಶದ ರೈತರಿಗೆ ಮೋಸ ಮಾಡಿದೆ. ಪೆಟ್ರೋಲ್ನಲ್ಲಿ ಶೇಕಡ 20ರಷ್ಟು ಎಥೆನಾಲ್ ಬಳಕೆಗೆ ಮುನ್ನುಡಿ ಬರೆಯಲಾಗಿದೆ. ಎಥೆನಾಲ್ ಬಳಕೆಯಿಂದ ರೈತರಿಗೆ ಉಪಯೋಗ ಆಗಲಿದೆ. ಕರ್ನಾಟಕ ರೈತರಿಗೆ ಭವಿಷ್ಯವನ್ನ ಕಟ್ಟಿಕೊಡುತ್ತಿದೆ. ರೈತರ ಮೇಲೆ ಕಾಂಗ್ರೆಸ್ ದೌರ್ಜನ್ಯ ನಿಲ್ಲಿಸಿದ್ದೇ ಬಿಜೆಪಿಯಿಂದ. ಜೆಡಿಎಸ್(JDS) ಒಲವೂ ಕಾಂಗ್ರೆಸ್ ಪರವೇ ಇದೆ. ಜೆಡಿಎಸ್ ಯಾವತ್ತೂ ಜನರ ಪರ ಇಲ್ಲ. ಕಾಂಗ್ರೆಸ್(Congress) ಮಾನವೀಯತೆ ವಿರುದ್ಧ ಕೆಲಸ ಮಾಡುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ. ಮಹಾ ಪುರುಷರನ್ನು ಕಾಂಗ್ರೆಸ್ ತೆಗಳಿದೆ. ಮಹಾ ಪುರುಷರನ್ನ ಬೈದವರು ಇಂದು ಮೋದಿಯನ್ನ ಬೈಯ್ಯುತ್ತಿದ್ದಾರೆ. ಅವರ ಬೈಗುಳಗಳೇ ನನಗೆ ಸನ್ಮಾನ ಅಂತ ಭಾವಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಮೋದಿ ಬೈಯ್ದಿದ್ದು ಬರೋಬ್ಬರಿ 91 ಬಾರಿ..
ಮಲ್ಲಿಕಾರ್ಜುನ ಖರ್ಗೆ(mallikarjuna kharge) ಹಾಗು ಸಿದ್ದರಾಮಯ್ಯ(siddaramaiah) ವಿರುದ್ಧ ವಾಗ್ದಾಳಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಬೈಗುಳಗಳ ಪಟ್ಟಿಯನ್ನೇ ಸಿದ್ಧಪಡಿಸಿಕೊಂಡಿದೆ. 91 ಬಾರಿ ನನ್ನ ವಿರುದ್ಧ ಬೈಗುಳಗಳ ಪ್ರಯೋಗ ಮಾಡಿದೆ. ಬೈಗುಳ ಡಿಕ್ಷನರಿಯನ್ನೇ ಕಾಂಗ್ರೆಸ್ ಪಕ್ಷ ಹೊಂದಿದೆ ಏಂದಿದ್ದಾರೆ. ಜೊತೆಗೆ ಕಾಂಗ್ರೆಸ್ ನನ್ನನ್ನು ಬೈದಷ್ಟೂ ಆ ಪಕ್ಷ ದುರ್ಗತಿಗೆ ಹೋಗ್ತಿದೆ. ಚೌಕಿದಾರ್ ಚೋರ್ ಅಂತಾ ಹೇಳಿದ್ರು. ಮೋದಿ ಸಮಾಜವೇ ಚೋರ್ ಅಂತಾ ಹೇಳಿದ್ರು. ಲಿಂಗಾಯತರನ್ನ ಭ್ರಷ್ಟಾಚಾರಿಗಳು ಅಂದ್ರು ಎಂದಿರುವ ನರೇಂದ್ರ ಮೋದಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೇ ಬೈದವರು ಕಾಂಗ್ರೆಸ್ ನಾಯಕರು. ರಾಷ್ಟ್ರದ್ರೋಹಿ, ರಾಕ್ಷಸ ಅಂದವರು ಕಾಂಗ್ರೆಸ್ ಟೀಕೆ ಮಾಡಿತ್ತು. ವೀರ್ ಸಾವರ್ಕರ್(veera savarkar) ಅವರನ್ನೂ ಬೈದವರು ಕಾಂಗ್ರೆಸ್ ಪಕ್ಷದ ನಾಯಕರು. ಒಟ್ಟಾರೆ ಕಾಂಗ್ರೆಸ್ ಮಹಾತ್ಮರನ್ನು ಬೈಯ್ಯುತ್ತದೆ ಎನ್ನುವ ಮೂಲಕ ನಾನೂ ಕೂಡ ಮಹಾತ್ಮ ಎಂದು ಷರಾ ಬರೆದುಕೊಂಡಿದ್ದಾರೆ.