ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಪರವಾಗಿ ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡ ಆನಂದ ಗೌಡ ಮತ್ತಿತರರು ದೊಡ್ಡತೇಕಹಳ್ಳಿ ಮತ್ತು ಬಾ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುಕ್ರವಾರ ಮನೆಮನೆಗೆ ತೆರಳಿ ಮತಯಾಚಿಸಿದರು.

ಮುಖಂಡ ಆನಂದ ಗೌಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಡಾ. ಎಎಂ.ಜಯರಾಮರೆಡ್ಡಿ ಸೇರಿದಂತೆ ಪ್ರಮುಖರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆನೆಮಡಗು, ಕಾಚನಾಯಕನಹಳ್ಳಿ, ಪಿಲ್ಲಗೊಂಡನಹಳ್ಳಿ, ಮರಿಹಳ್ಳಿ, ಚೌಡರೆಡ್ಡಿಹಳ್ಳಿ, ಪೆದ್ದನಹಳ್ಳಿ, ಚಿಕ್ಕ ತೇಕಹಳ್ಳಿ, ಗೋರಮಿರಹಳ್ಳಿ, ಅಜ್ಜಕದಿರೇನಹಳ್ಳಿ, ಮದ್ದೆಗಾರ ಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಮುಖಂಡ ಆನಂದಗೌಡ ಮಾತನಾಡಿ, ಶಿಡ್ಲಘಟ್ಟ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮತದಾರರು ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು ಶಿಡ್ಲಘಟ್ಟದ ಅಭಿವೃದ್ಧಿಗೆ ಮತದಾರರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಶಿಡ್ಲಘಟ್ಟ ಕ್ಷೇತ್ರದಾದ್ಯಂತ ಬಿಜೆಪಿ ಪಕ್ಷಕ್ಕೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದರು.

ಪ್ರಮುಖರಾದ ಗ್ರಾಮ ಪಂಚಾಯತಿ ಸದಸ್ಯ ಮುರುಳಿಧರ್, ನಾಗರಾಜು ಶ್ರೀನಾಥ್, ಆಂಜನೇಯ ರೆಡ್ಡಿ, ಕದಿರಪ್ಪ, ವೆಂಕಟೇಶ್, ಮಂಜುನಾಥ್, ದೇವರಾಜು, ಅಂಬರೀಶ್, ಮಹಿಳಾ ಮುಖಂಡರಾದ ಮುನಿರತ್ನಮ್ಮ, ವೆಂಕಟಲಕ್ಷ್ಮಮ್ಮ, ಕವಿತಾ, ಪುಷ್ಪ, ನರಸಮ್ಮ, ಗಾಯತ್ರಿ, ಕಾಂತಮ್ಮ, ಮತ್ತಿತರರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.