2023ರ ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈಗಾಗಲೇ ಕರ್ನಾಟದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಪಕ್ಷದ ನಾಯಕರು ಪ್ರಚಾರದ ಕಣಕ್ಕಿಳಿದು, ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಈ ಮಧ್ಯೆ ರಾಜಕಾರಣಿಗಳ ನಡುವೆ ಟಾಕ್ ವಾರ್ ಕೂಡ ಜೋರಾಗಿದೆ. ಎಂ ಶ್ರೀನಿವಾಸ್‌ರಂತಹ ಹಿರಿಯ ನಾಯಕರನ್ನು ಜೆಡಿಎಸ್ (JDS) ಸರಿಯಾಗಿ ನಡೆಸಿಕೊಂಡಿಲ್ಲ. 3 ಬಾರಿ ಎಂಎಲ್‌ಎ ಆಗಿದ್ದವರಿಗೆ ಜೆಡಿಎಸ್ ಅವಮಾನ ಮಾಡಿದೆ. ಸ್ವಾಭಿಮಾನ ಇರುವವರು ಯಾರು ಕೂಡಾ ಜೆಡಿಎಸ್‌ನಲ್ಲಿ ಇರಲ್ಲ ಅನ್ನೋದು ಮತ್ತೆ ಪ್ರೂವ್ ಆಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.

ಮಂಡ್ಯ (Mandya) ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಸುಮಲತಾ, ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಗೆ (BJP) ಉತ್ತಮ ವಾತಾವರಣ ಇದೆ. ಕೆಆರ್ ಪೇಟೆ ಕ್ಷೇತ್ರದಲ್ಲಿ 100% ಬಿಜೆಪಿಗೆ ಇದೆ. ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯೇ ಎಂಬುದು ಕಾಣಿಸುತ್ತಿದೆ. ಮಂಡ್ಯದಲ್ಲಿ ಬಿಜೆಪಿ ಇಲ್ಲ ಎನ್ನುವ ಕಾಂಗ್ರೆಸ್ (Congress), ಜೆಡಿಎಸ್‌ನವರು ಫಲಿತಾಂಶ ಬಂದ ಮೇಲೆ ಈ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು ಅಂತ ಸಂಸದೆ ಸುಮಲತಾ ಅಂಬರೀಶ್ ಟಾಂಗ್ ಕೊಟ್ಟರು.













