ಸೂಡಾನ್‌ನಲ್ಲಿ ಮೈಸೂರಿನ ಹಕ್ಕಿ ಪಿಕ್ಕಿ ಜನಾಂಗ ಸಿಲುಕಿಕೊಂಡಿದೆ. ಗಿಡಮೂಲಿಕೆ ವ್ಯವಹಾರದ ಮೇಲೆ ಸೂಡಾನ್‌ಗೆ ತೆರಳಿದ್ದ 380 ಮಂದಿ ಅಲ್ಲಿಯೇ ಉಳಿದುಬಿಟ್ಟಿದ್ದಾರೆ. ಹೆಚ್.ಡಿ. ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಮತ್ತು ಹುಣಸೂರು ತಾಲೂಕಿನ ಪಕ್ಷಿರಾಜಪುರ ನಿವಾಸಿಗಳು ಇವರಾಗಿದ್ದು, ನಮಗೆ ಕುಡಿಯಲು ನೀರು ಸಿಗುತ್ತಿಲ್ಲ. ಅಕ್ಕಪಕ್ಕದಲ್ಲೇ ಬಾಂಬ್‌ಗಳು ಸ್ಫೋಟಗೊಳ್ಳುತ್ತಿವೆ.
ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಹೇಗಾದರೂ ಮಾಡಿ ನಮ್ಮ ಜೀವ ಉಳಿಸಿ. ಮಹಿಳೆಯರು, ಮಕ್ಕಳು ಭಯದಿಂದ ಬದುಕುತ್ತಿದ್ದಾರೆ. ವಾಪಸ್ ನಮ್ಮನ್ನು ಊರಿಗೆ ಕರೆಸಿಕೊಳ್ಳಿ. ಊಟ ಸಿಗದೆ ಪರದಾಡುತ್ತಿದ್ದೇವೆ ಅಂತ ಟೈಗರ್ ಬ್ಲಾಕ್ ನಿಂದ ತೆರಳಿ ಸೂಡಾನ್‌ನಲ್ಲಿ ಸಿಲುಕಿಕೊಂಡವರ ಮಧ್ಯೆ ವಿಡಿಯೋ ಮಾಡಿ ಯುವಕನ ಅಳಲು ತೋಡಿಕೊಂಡಿದ್ದಾನೆ.