• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ʻಗುರುದೇವ್‌ ಹೊಯ್ಸಳʼ ಸಕ್ಸಸ್‌.. ಧನ್ಯವಾದ ತಿಳಿಸಿದ ಕೆಆರ್‌ಜಿ ಸ್ಟುಡಿಯೋಸ್‌

Any Mind by Any Mind
April 10, 2023
in ಸಿನಿಮಾ
0
ʻಗುರುದೇವ್‌ ಹೊಯ್ಸಳʼ ಸಕ್ಸಸ್‌.. ಧನ್ಯವಾದ ತಿಳಿಸಿದ ಕೆಆರ್‌ಜಿ ಸ್ಟುಡಿಯೋಸ್‌
Share on WhatsAppShare on FacebookShare on Telegram

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅಭಿನಯದ ʻಗುರುದೇವ್‌ ಹೊಯ್ಸಳʼ ಸಿನಿಮಾ, ಕಳೆದ ವಾರವಷ್ಟೇ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಈ ಚಿತ್ರ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿದೆ.  ಈ ಹಿನ್ನೆಲೆ ʻಗುರುದೇವ್‌ ಹೊಯ್ಸಳʼ ಸಿನಿಮಾ ನಿರ್ಮಿಸಿರುವ ಕೆಆರ್‌ಜಿ ಸ್ಟುಡಿಯೋಸ್‌ ಸಂಸ್ಥೆ, ಚಿತ್ರದ ಗೆಲ್ಲಲು ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದೆ.

ADVERTISEMENT

ಕಳೆದ ವಾರ ಬಿಡುಗಡೆಯಾದ ನಮ್ಮ ಸಂಸ್ಥೆ ನಿರ್ಮಿಸಿರುವ ‘ಗುರುದೇವ್ ಹೊಯ್ಸಳ’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಸಿಕ್ಕಿದ್ದು, ಚಿತ್ರ ಎರಡನೆಯ ವಾರಕ್ಕೆ ಕಾಲಿಟ್ಟಿದೆ. ರಾಜ್ಯದಲ್ಲಿ ಚುನಾವಣೆಗಳ ಕಾವು ಮತ್ತು ಐಪಿಎಲ್ ಜ್ವರದ ನಡುವೆಯೂ ಚಿತ್ರಕ್ಕೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ನೋಡಿ ಗೆಲ್ಲಿಸಿದ್ದಾರೆ. ಈ ಪ್ರಶಂಸೆಯಿಂದ ನಮ್ಮ ತಂಡಕ್ಕೆ ಸಾರ್ಥಕ್ಯದ ಭಾವ ಮೂಡಿದೆ.

ನಮ್ಮ ಕೆಆರ್‌ಜಿ  ಸ್ಟುಡಿಯೋಸ್‌ನ  ಮೊದಲ ಚಿತ್ರ ‘ರತ್ನನ್ ಪ್ರಪಂಚ’, ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಯಾದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಈಗ ನಮ್ಮ ಸಂಸ್ಥೆಯ ಎರಡನೆಯ ಚಿತ್ರಕ್ಕೂ ಜನಮನ್ನಣೆ ಸಿಕ್ಕಿರುವುದು ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚಿಸಿದೆ.

ಮರ್ಯಾದೆ ಹತ್ಯೆ ಎಂಬ ಗಹನವಾದ ಸಮಸ್ಯೆಯ ಕುರಿತ ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ನಮಗೆ ಈ ತರಹದ ಇನ್ನಷ್ಟು ಸೂಕ್ಷ್ಮ ಸಂವೇದನೆಯ ಚಿತ್ರಗಳನ್ನು ನಿರ್ಮಿಸುವುದಕ್ಕೆ ಪ್ರೇರೇಪಿಸಿದೆ. ಈ ಎರಡೂ ಚಿತ್ರಗಳ ಯಶಸ್ಸಿನಿಂದ ಸದ್ಯದಲ್ಲೇ ನಮ್ಮ ಸಂಸ್ಥೆಯ ಮೂರನೆಯ ಪ್ರಯತ್ನವಾದ ಉತ್ತರಕಾಂಡ ಚಿತ್ರವನ್ನು ಸದ್ಯದಲ್ಲೇ ಶುರು ಮಾಡಲಿದ್ದೇವೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ನಡೆಯುವ ಈ ಕಥೆಯಲ್ಲೂ ಧನಂಜಯ ನಟಿಸುತ್ತಿದ್ದಾರೆ. ಇದಲ್ಲದೆ ಇನ್ನಷ್ಟು ಚಿತ್ರಗಳನ್ನು ನಮ್ಮ ಸಂಸ್ಥೆಯಡಿ ನಿರ್ಮಿಸುತ್ತಿದ್ದು, ಸದ್ಯದಲ್ಲೇ ಈ ಬಗ್ಗೆ ಘೋಷಣೆಯಾಗಲಿದೆ.

ನಮ್ಮ ಈ ಗೆಲುವಿನಲ್ಲಿ ಸಿನಿಮಾ ಪ್ರೇಮಿಗಳು ಮತ್ತು ಮಾಧ್ಯಮದವರ ಪಾತ್ರ ಮಹತ್ವದ್ದಾಗಿದ್ದು, ನಮ್ಮ ಮುಂದಿನ ಕನಸುಗಳಿಗೆ ಅವರೇ ಸ್ಫೂರ್ತಿ ಎಂದರೆ ತಪ್ಪಿಲ್ಲ. ಜೊತೆಗೆ ವಿಮರ್ಶಕರು, ಸೋಷಿಯಲ್ ಮೀಡಿಯಾದ ಇನ್ಫ್ಲೂಯೆನ್ಸ್‌ ಪ್ರೋತ್ಸಾಹ ಮತ್ತು ಸಿನಿಮಾ ಪ್ರೀತಿ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ನಮಗೆ ಸಲಹೆ, ಸೂಚನೆ ಮತ್ತು ಅಪರಿಮಿತ ಪ್ರೀತಿ ತೋರಿಸುತ್ತಾ ಬಂದಿರುವ ಸಹೋದರರಾದ ವಿಜಯ್ ಕಿರಗಂದೂರು ಮತ್ತು ನನ್ನ ಎಲ್ಲ ಹಿತೈಷಿಗಳಿಗೂ ನಾನು ಚಿರಋಣಿ.

ಇಂದು ಕೆಆರ್‌ಜಿ ಸ್ಟುಡಿಯೋಸ್ ಮತ್ತು ಕೆಆರ್‌ಜಿ ಕನೆಕ್ಟ್ಸ್ ಈ ಹಂತಕ್ಕೆ ಬೆಳೆಯುತ್ತಿರುವುದಕ್ಕೆ ನಮ್ಮ ತಂಡದ ಪ್ರೀತಿ ಮತ್ತು ಪರಿಶ್ರಮ ಸಹ ಕಾರಣ. ಮುಂದಿನ ದಿನಗಳಲ್ಲಿ ನಿಮ್ಮನ್ನು ಇನ್ನಷ್ಟು ಮನರಂಜಿಸುವುದಕ್ಕೆ ಉತ್ಸುಕರಾಗಿದ್ದೇವೆ ಎಂದು ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ತಿಳಿಸಿದ್ದಾರೆ.

Tags: #sandalwood #kannadafilmindustry #gurudevhoysala #dollydhananjay #amrutaayangar #krgstudios #pratidhvani #pratidhvanidigital #pratidhvaninews
Previous Post

ತಗಡಿನ ಶೆಡ್​ ಮೇಲೆ ಬಿದ್ದ ಬೃಹತ್​ ಮರ : ಏಳು ಮಂದಿ ದಾರುಣ ಸಾವು, ಐವರಿಗೆ ಗಾಯ

Next Post

ಬಿಜೆಪಿ ಕುಟುಂಬ ರಾಜಕಾರಣಕ್ಕೆ ಹೈಕಮಾಂಡ್​ ಕಂಗಾಲು..! ಮತ್ತೊಂದು ಸರ್ವೇ

Related Posts

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ಸಿನಿಮಾ

ಡಾ. ರಾಜ್‌ಕುಮಾರ್ ಜಯಂತಿ ಸಂಭ್ರಮದ ನಡುವೆ ಚೇತನ್ ಅಹಿಂಸ ಹೇಳಿಕೆಗೆ ವಿವಾದ

by ಪ್ರತಿಧ್ವನಿ
April 24, 2026
0

ಬೆಂಗಳೂರು: ಕನ್ನಡದ ಹಿರಿಯ ನಟ ಡಾ. ರಾಜ್ ಕುಮಾರ್  ಅವರ ಜಯಂತಿಯನ್ನು ರಾಜ್ಯಾದ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಭೇಟಿ ನೀಡಿ...

Read moreDetails
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

April 16, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
Next Post
ಬಿಜೆಪಿ ಕುಟುಂಬ ರಾಜಕಾರಣಕ್ಕೆ ಹೈಕಮಾಂಡ್​ ಕಂಗಾಲು..! ಮತ್ತೊಂದು ಸರ್ವೇ

ಬಿಜೆಪಿ ಕುಟುಂಬ ರಾಜಕಾರಣಕ್ಕೆ ಹೈಕಮಾಂಡ್​ ಕಂಗಾಲು..! ಮತ್ತೊಂದು ಸರ್ವೇ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada