• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ಏ.9ಕ್ಕೆ ಬಿಜೆಪಿ ಟಿಕೆಟ್ ಘೋಷಣೆ : ನನ್ನ ಹೆಸರೂ ಪರಿಗಣನೆಗೆ‌ ಕಳುಹಿಸಲಾಗಿದೆ : ಈಶ್ವರಪ್ಪ

Any Mind by Any Mind
April 6, 2023
in Uncategorized
0
ಏ.9ಕ್ಕೆ ಬಿಜೆಪಿ ಟಿಕೆಟ್ ಘೋಷಣೆ : ನನ್ನ ಹೆಸರೂ ಪರಿಗಣನೆಗೆ‌ ಕಳುಹಿಸಲಾಗಿದೆ : ಈಶ್ವರಪ್ಪ
Share on WhatsAppShare on FacebookShare on Telegram

ADVERTISEMENT

ಶಿವಮೊಗ್ಗ: ಏ.೦6: ಶಿವಮೊಗ್ಗದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಎಸ್ ಈಶ್ವರಪ್ಪ ಮಾತನಾಡಿ ನಾಳೆ ನಾಡಿದ್ದು ಟಿಕೆಟ್ ಸಂಬಂಧ ಸಭೆಗಳಿದ್ದು ಏ.9ಕ್ಕೆ ಎಲ್ಲಾ ಕ್ಷೇತ್ರಗಳಿಗೂ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದರು‌.

ಆಯನೂರು ಮಂಜುನಾಥ್ ಟೀಕೆ- ಟಿಕೆಟ ಪೈಪೋಟಿ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ 224 ಕ್ಷೇತ್ರದಲ್ಲೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಆಗಿದೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯದಂತೆ ನನ್ನ ಹೆಸರು ಕೂಡಾ ಹೋಗಿದೆ. ಯಾರೋ ಟೀಕೆ ಮಾಡಿದರೇ ಅದಕ್ಕೆ ನಾನು ಬೆಲೆ ಕೊಡ್ಲಾ..?
ಫ್ರೇಂಡ್ಲಿ ಫೈಟ್ ಆಗಬೇಕು. ಕ್ರೀಡಾ ಮನೋಭಾವನೆಯಿಂದ ಸ್ಪರ್ಧೆ ಆಗಲಿ. ಚುನಾವಣೆ ಮುಗಿದ ಮೇಲೆ ಎಲ್ರೂ ಜನರ ಸೇವೆ ಮಾಡಲೇ ಬೇಕು. ಆಯನೂರು ವಿರುದ್ಧ ಏಕವಚನದಲ್ಲಿ ನಾನು ಟೀಕೆ ಮಾಡಿಲ್ಲ.‌ ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು. ಚುನಾವಣೆ ಸಮಯದಲ್ಲಿ ಇದು ನಡೆಯುತ್ತೆ.‌ ಇದು ಪ್ರಜಾಪ್ರಭುತ್ವ.. ಅವರ ತತ್ವ – ಸಿದ್ದಾಂತ ಅವರು ನಿರ್ಧಾರ ಮಾಡಬಹುದು. ಅವರು ಪಕ್ಷದಲ್ಲೇ ಇದ್ದಾರೆ.. ಬಿಟ್ಟು ಹೋಗಿಲ್ಲ.. ಕರೆದು ಮಾತನಾಡೋರು ಮಾತನಾಡ್ತಾರೆ. ಪಟ್ಟಿಯನ್ನು ಏಕಾಏಕಿ ಬಿಡುಗಡೆ ಮಾಡಲ್ಲ.
ಜಾತಿ, ಧರ್ಮ, ನಾಯಕರ ಪ್ರಭಾವ ಆಧರಿಸಿ ಅಲ್ಲ. ಕಾರ್ಯಕರ್ತರ ಅಭಿಪ್ರಾಯದ ನಂತರ ಫೈನಲ್ ಅಗುತ್ತೆ.‌ ಟಿಕೆಟ್ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗೋರು ನಮ್ಮ ಕಾರ್ಯಕರ್ತರಲ್ಲ ಎಂದರು.

ಅಲೆಮಾರಿ ಸಿದ್ದರಾಮಯ್ಯ ಅವರು ಪದೇ ಪದೇ ಕ್ಷೇತ್ರದ ಬದಲಾವಣೆ ಮಾಡ್ತಾರೆ ; ಅವರು ಎಲ್ಲಿ ಹೋಗ್ತಾರೋ. ಎಲ್ಲಿ ಬರ್ತಾರೋ. ನಾನೇನು ಉತ್ತರ ಕೊಡಲಿ. ಯಾವುದೇ ಬದ್ಧತೆ ಇಲ್ಲ. ಕಾಂಗ್ರೆಸ್‌ ನ ನೀತಿ ನಿಯಮ ಸಿದ್ದುಗೆ ಇಲ್ಲ.‌ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲು ಖಚಿತ. ಒಂದು ಎರಡು ಯಾಕೇ. ದಶ ದಿಕ್ಕಿನಲ್ಲಿ ಒಂದರಂತೇ 10 ಕ್ಷೇತ್ರದಲ್ಲಿ ನಿಲ್ಲಲಿ. ಗ್ರಹಚಾರಕ್ಕೆ ಯಾವುದಾದರೂ ಒಂದರಲ್ಲಿ ಗೆಲ್ಲಬಹುದು ಎಂದರು. ಚುನಾವಣೆಯಲ್ಲಿ ಗೆಲ್ಲುತ್ತಾರೋ ಇಲ್ವೋ ಗೊತ್ತಿಲ್ಲ.‌ ಅವರು ಪಕ್ಷ ಬರುತ್ತೋ ಇಲ್ವೋ.. ಬಹುಮತ ಸಿಗುತ್ತೋ ಇಲ್ವೋ ಅನ್ನೋದೇ ಗೊತ್ತಿಲ್ಲ. ಹೀಗಿರುವಾಗ ತಾವೇ ಸಿಎಂ ಆಗುವುದಾಗಿ ಹೇಳಿಕೆ ನೀಡಲು ಅಧಿಕಾರ ಕೊಟ್ಟದ್ದು ಯಾರು….. ಅಧಿಕಾರವಿದ್ದಾಗ ಜಾತಿ, ಸಮಾಜ ಒಡೆಯುವ ಕೆಲಸ ಮಾಡಿದ್ರು. ಈಗ ಡಿಕೆಶಿ ಸಿಎಂ ಆಗುವುದಿಲ್ಲ ಎನ್ನುವ ಭವಿಷ್ಯ ಹೇಳಿದ್ದು ಯಾಕೇ.? ಜಾತಿ ಮೇಲೆ ಸಿಎಂ ಆಗುವುದಾಗಿ ಇಬ್ಬರು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕೃತ ವಿರೋಧ ಪಕ್ಷವಾಗಿಯೂ ರಾಜ್ಯದಲ್ಲಿ ಉಳಿಸುವುದಿಲ್ಲ ಎಂದ ಈಶ್ವರಪ್ಪ.

ಕಳೆದ ಎರಡು ದಿನ ರಾಜ್ಯ ಚುನಾವಣೆ ಸಮಿತಿ ಸಭೆ ನಡೆಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಮುಖ ಕಾರ್ಯಕರ್ತರು ಬಂದಿದ್ದರು. ಯಾರು ಅಭ್ಯರ್ಥಿ ಅಗಬೇಕು ಎಂದು ಮೊದಲು ವೋಟಿಂಗ್ ಮೂಲಕ ಕಳುಹಿಸಿದ್ದರು. ಅದನ್ನೆಲ್ಲಾ ಇಟ್ಟುಕೊಂಡು ಸಮಿತಿ ನಿರ್ಧಾರ ಮಾಡಿದೆ. ಚುನಾವಣೆ ಸಮಿತಿ ಉಸ್ತುವಾರಿಗಳು, ರಾಜ್ಯಾಧ್ಯಕ್ಷರು, ಸಿಎಂ, ಮಾಜಿ ಸಿಎಂ ಎಲ್ಲರೂ ಸೇರಿ ನಿರ್ಧಾರ ಮಾಡಿದ್ದಾರೆ. 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡಿ ಕಳುಹಿಸಲಾಗಿದೆ.
ಒಂದು ಕ್ಷೇತ್ರಕ್ಕೆ ಮೂರರಿಂದ ನಾಲ್ಕು ಜನ ಅಭ್ಯರ್ಥಿಗಳನ್ನು ರೆಡಿ ಮಾಡಿದ್ದಾರೆ. 7 ಮತ್ತು 8 ರಂದು ಎರಡು ದಿನಗಳ ಕಾಲ ದೆಹಲಿಯಲ್ಲಿ ಸಭೆ ನಡೆಸಿ, ತೀರ್ಮಾನ ಮಾಡಲಿದ್ದಾರೆ. ಇದೇ ತಿಂಗಳ 9 ರಂದು ಎಲ್ಲಾ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

ಸುದೀಪ್ ಬಿಜೆಪಿಗೆ ಬೆಂಬಲ- ಕಾಂಗ್ರೆಸ್ ವಿರೋಧ ವಿಚಾರ: ಅವರು ಯಾಕೇ ವಿರೋಧ ಮಾಡ್ತಾ ಇದ್ದಾರೆ ಎಂದು ಮೊದಲು ಹೇಳಲಿ.‌ ಅವರು ಜನ- ಸಾಮಾನ್ಯರ ನಡುವೆ ಇರುವ ಚಿತ್ರನಟರು. ಅವರು ಮೋದಿ ಸರ್ಕಾರ, ಸಿಎಂ ಕಾರ್ಯ ಮೆಚ್ಚಿ ಬೆಂಬಲ ನೀಡುತ್ತಿದ್ದಾರೆ. ಸುಮ್ಮನೆ ವಿರೋಧ ಮಾಡುವವರನ್ನು ಜನರು ಸಹ ಗುರುತಿಸುತ್ತಿದ್ದಾರೆ. ಇದೇ ಸುದೀಪ್ ಕಾಂಗ್ರೆಸ್ ಗೆ ಬೆಂಬಲ ಕೊಟ್ಟಿದ್ರೇ ಏನು ಮಾಡ್ತಿದ್ರು….?
ಎಲ್ಲದಕ್ಕೂ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ತುಂಬಾ ಅನ್ಯಾಯ ಇದು ಎಂದ ಈಶ್ವರಪ್ಪ.

Tags: 2023 electionassembly electionAyanur ManjunathBJPBJP GovernmentbjpkarnatakaBOMMAIBSYCMCmIbrahimctraviDKShivakumarElection CommissionHDDHDKJDSKannadaKarnataka ElectionKS EshwarappakumaraswamyNalin Kumar KateelNewsPancharatna YatreShikaripuraShivamoggasiddaramaiahState Election
Previous Post

ಬಿಜೆಪಿ ಕಚೇರಿ ಬಳಿಯೇ ನೂತನ ಕಚೇರಿ ತೆಗೆದ ಬಿಜೆಪಿ ಮುಖಂಡ ಆಯನೂರು ಮಂಜುನಾಥ್

Next Post

ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕೋರಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋದ ಎಎಪಿ

Related Posts

ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ
Uncategorized

ಬೆಂಗಳೂರು ಜನಗಣತಿ ಕಾರ್ಯಕ್ಕೆ ಚಾಲನೆ: ಮನೆಮನೆ ಸಮೀಕ್ಷೆ ಆರಂಭ

by ಪ್ರತಿಧ್ವನಿ
April 16, 2026
0

ಬೆಂಗಳೂರು: ಜನಗಣತಿ-2027ಕ್ಕೆ ಪೂರ್ವಸಿದ್ಧತೆಯ ಭಾಗವಾಗಿ ಬೆಂಗಳೂರಿನಲ್ಲಿ ಇಂದು ಮಹತ್ವದ ಜನಗಣತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. Greater Bengaluru Authority ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಮನೆಮನೆ ಸಮೀಕ್ಷೆ...

Read moreDetails
ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

April 13, 2026
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!

ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!

April 9, 2026
ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

April 9, 2026
Next Post
ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕೋರಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋದ ಎಎಪಿ

ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕೋರಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋದ ಎಎಪಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada