• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕನ್ನಡ ಸಿನಿಮಾ ನಟರು ಬಿಜೆಪಿಯತ್ತ ಒಲವು.. ಹೆದರಿಕೆಯೋ..? ಹಣದಾಸೆಯೋ..?

ಕೃಷ್ಣ ಮಣಿ by ಕೃಷ್ಣ ಮಣಿ
April 5, 2023
in Top Story, ಕರ್ನಾಟಕ, ರಾಜಕೀಯ
0
ಕನ್ನಡ ಸಿನಿಮಾ ನಟರು ಬಿಜೆಪಿಯತ್ತ ಒಲವು.. ಹೆದರಿಕೆಯೋ..? ಹಣದಾಸೆಯೋ..?
Share on WhatsAppShare on FacebookShare on Telegram

ಬೆಂಗಳೂರು:ಏ.೦೪: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ 1.30ಕ್ಕೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದಾರೆ. ಮಧ್ಯಾಹ್ನ 1.30ಕ್ಕೆ ನಟ ಸುದೀಪ್​ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎನ್ನಲಾಗ್ತಿದೆ. ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕಿಚ್ಚ ಸುದೀಪ್​ ಬಿಜೆಪಿ ಸೇರುತ್ತಿರುವ ಸಾಕಷ್ಟು ಅಭಿಮಾನಿಗಳಿಗೆ ಸಂತಸ ಮೂಡಿಸಿದ್ರೆ ಇನ್ನಷ್ಟು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದಂತಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಉತ್ತಮ ಒಡನಾಟ ಹೊಂದಿರುವ ನಟ ಕಿಚ್ಚ ಸುದೀಪ್, ತಮ್ಮ ಅಭಿಮಾನಿಗಳ ಜೊತೆಗೆ ಬಿಜೆಪಿ ಸೇರಲಿದ್ದಾರೆ ಎನ್ನುವುದು ಬಿಜೆಪಿ ಮೂಲಗಳ ಮಾಹಿತಿ. ಈ ಮೂಲಕ ಬಿಜೆಪಿ ವಾಲ್ಮೀಕಿ ಸಮುದಾಯವ ಮತಗಳನ್ನು ಸೆಳೆಯಲು ತಂತ್ರಗಾರಿಕೆ ಮಾಡಿದೆ ಎನ್ನಲಾಗ್ತಿದೆ. ಕ್ಯಾಪಿಟಲ್ ಹೋಟೆಲ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ನಟ ಸುದೀಪ್​ ಬಿಜೆಪಿ ಸೇರ್ಪಡೆಗೆ ವೇದಿಕೆ ಸಜ್ಜಾಗಿದೆ.

ADVERTISEMENT

ಬಿಜೆಪಿ ಸೇರುತ್ತಿರೋ ಉದ್ದೇಶ ಆದ್ರು ಏನು..?

ನಟ ಸುದೀಪ್​ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ..? ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ. ನಟ ಸುದೀಪ್ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕಾಗಿಯೇ ಸಚಿವ ಶ್ರೀರಾಮುಲು ಕ್ಷೇತ್ರ ಬಿಟ್ಟು ಕೊಟ್ಟರಾ..? ಎನ್ನುವ ಅನುಮಾನಗಳ ಸೃಷ್ಟಿ ಆಗಿವೆ. ನಟ ಸುದೀಪ್ ಸಹೋದರಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾಹಿತಿಗಳು ಹೊರಬಿದ್ದಿದ್ದವು. ಆದರೆ ಕಾಂಗ್ರೆಸ್​ ಬಿಜೆಪಿ ಶಾಸಕರಾಗಿದ್ದ ವೈ.ಎನ್​ ಗೋಪಾಲಕೃಷ್ಣ ಅವರಿಗೆ ಟಿಕೆಟ್​ ಘೋಷಣೆ ನೀಡುವ ನಿರ್ಧಾರ ಮಾಡಿದೆ. ಇದೇ ಕಾರಣಕ್ಕೆ ವೈಎನ್​ ಗೋಪಾಲಕೃಷ್ಣ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್​ ಸೇರ್ಪಡೆ ಆಗಿದ್ದಾರೆ. ಇದೀಗ ಕಾಂಗ್ರೆಸ್​ನಲ್ಲಿ ಟಿಕೆಟ್​ ಸಿಗದ ಕಾರಣ ಬಿಜೆಪಿ ಸೇರ್ಪಡೆ ಆಗಿ ಸ್ವತಃ ತಾವೇ ಅಖಾಡಕ್ಕೆ ಧುಮುಕುತ್ತಾರಾ..? ಅಥವಾ ಸಹೋದರಿಯನ್ನು ಕಣಕ್ಕಳಿಸಿ ಬಿಜೆಪಿಗೆ ಸ್ಟಾರ್​ ಪ್ರಚಾರಕರ ರೀತಿಯಲ್ಲಿ ಕೆಲಸ ಮಾಡ್ತಾರಾ..? ಅನ್ನೋ ಗೊಂದಲ ಸೃಷ್ಟಿಯಾಗಿದೆ.

ಬೆಂಗಳೂರಿನ ಚಿಕ್ಕಪೇಟೆ ಮೇಲೂ ಕಿಚ್ಚನ ಕಣ್ಣು..!

ಮೊಳಕಾಲ್ಮೂರು ಕ್ಷೇತ್ರದ ಜೊತೆಗೆ ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಆಪ್ತ ನಿರ್ಮಾಪಕ ಜಾಕ್ ಮಂಜುಗೆ ಟಿಕೆಟ್ ಕೇಳಿದ್ದಾರೆ ಎನ್ನಲಾಗ್ತಿದೆ. ಬಿಜೆಪಿಯಲ್ಲಿ ಗುರ್ತಿಸಿಕೊಳ್ಳಲು ಮುಂದಾಗಿರುವ ನಟ ಕಿಚ್ಚ ಸುದೀಪ್​ ರಾಜಕೀಯ ಲೆಕ್ಕಾಚಾರ ಹಾಕಿದ್ದಾರೆ ಅನ್ನೋ ಮಾಹಿತಿ ಇದೆ. ಇಂದಿನ ಸಭೆಯಲ್ಲಿ ಕೇವಲ ಬೆಂಬಲ ಘೋಷಣೆ ಮಾಡಿ ಟಿಕೆಟ್​ ಘೋಷಣೆ ಆಗುವ ತನಕ ಸುಮ್ಮನಿರ್ತಾರಾ..? ಅಥವಾ ನೇರವಾಗಿಯೇ ಬಿಜೆಪಿ ಸೇರ್ಪಡೆ ಆಗ್ತಾರ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಹೋಟೆಲ್​ನಲ್ಲಿ ಸಿಎಂ ಕರೆದಿರುವ ಸುದ್ದಿಗೋಷ್ಠಿಯಲ್ಲಿ ನಟ ಸುದೀಪ್​ ಉಪಸ್ಥಿತರಿರುತ್ತಾರೆ. ಇದಕ್ಕೂ ಮೊದಲು ಜೆಪಿ ನಗರದ ನಿವಾಸದಲ್ಲಿ ತಂದೆ ತಾಯಿ ಹಾಗು ಹಿತೈಷಿಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ ಅನ್ನೋ ಮಾಹಿತಿಯೂ ಇದೆ.

ಇತ್ತೀಚಿಗಷ್ಟೇ ನಟ ಸುದೀಪ್​ ಮೇಲೆ ಐಟಿ ರೇಡ್​..!

ಸಿನಿಮಾ ನಟ, ನಟಿಯರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಅಂದರೆ ಹಣ ಪಡೆಯದೆ ಸುಖಾಸುಮ್ಮನೆ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ. ಹಣ ಕೊಟ್ಟರೆ ಪ್ರಚಾರ ಅನ್ನೋದು ಅವರ ಲೆಕ್ಕಾಚಾರ. ಆದರೆ ಕೆಲವೊಮ್ಮೆ ಸ್ನೇಹಕ್ಕೆ ಕಟ್ಟುಬಿದ್ದು ಪ್ರಚಾರ ಮಾಡುವುದು ಬೆರಳೆಣಿಕೆಯಷ್ಟು ಮಾತ್ರ. ಇನ್ನು ಕೆಲವು ಸಮಯದಲ್ಲಿ ಕಾನೂನು ಸಮಸ್ಯೆಗೆ ಸಿಲುಕುವ ಭೀತಿಯಿಂದಲೂ ಪ್ರಭಾವಿ ಪಕ್ಷವನ್ನು ಬೆಂಬಲಿಸುವ ಅನಿವಾರ್ಯತೆ ಎದುರಾಗುತ್ತದೆ. ಕೆಲವೊಂದು ಕೇಸ್​ಗಳಿಂದ ಅವರಿಗೆ ಮುಕ್ತಿ ಸಿಗಬೇಕಾದ ಅನಿವಾರ್ಯತೆಯೂ ಇರುತ್ತದೆ. ಇದರ ಭಾಗವಾಗಿ ನೆನಪಿಸಿಕೊಳ್ಳಬೇಕು ಅಂದರೆ ನಟ ಸುದೀಪ್​ ನಿವಾಸದ ಮೇಲೆ ಇತ್ತೀಚಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಆ ಕೇಸ್​ನಿಂದ ಹೊರ ಬರುವ ಉದ್ದೇಶಕ್ಕೆ ಬಿಜೆಪಿ ಬೆಂಬಲಿಸುವ ನಿರ್ಧಾರ ಮಾಡಿದ್ದಾರೆ ಅನ್ನೋದನ್ನು ಹೇಳದಿದ್ದರೂ ಕೆಲವೊಮ್ಮೆ ಈ ರೀತಿ ಆಗುತ್ತದೆ ಅನ್ನೋದು ನಮ್ಮ ಅನಿಸಿಕೆ.

ಕೃಷ್ಣಮಣಿ

Tags: BJPBJP Governmentbjpjoinbsbommaibsyediyurappacmbommaikarnatakanewskhichha sudeepkichhasudeeplatestnewssudeepನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಮನೆಯಲ್ಲಿದ್ದ ಸಿಲಿಂಡರ್​ ಸ್ಫೋಟ : ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮ

Next Post

ರಾಜ್ಯದಲ್ಲಿ ಸಾವಿರ ಅಧಿಕಾರಿಗಳು, ED, IT, CBI.. ಕಾಂಗ್ರೆಸ್​ ಟಾರ್ಗೆಟ್​..!

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
Next Post
ರಾಜ್ಯದಲ್ಲಿ ಸಾವಿರ ಅಧಿಕಾರಿಗಳು, ED, IT, CBI.. ಕಾಂಗ್ರೆಸ್​ ಟಾರ್ಗೆಟ್​..!

ರಾಜ್ಯದಲ್ಲಿ ಸಾವಿರ ಅಧಿಕಾರಿಗಳು, ED, IT, CBI.. ಕಾಂಗ್ರೆಸ್​ ಟಾರ್ಗೆಟ್​..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada