ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗುತ್ತಿದ್ದಂತೆ, ನಟ ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿವೆ. ಇತ್ತೀಚೆಗೆ ಬಿಜೆಪಿ ನಾಯಕರನ್ನು ಸುದೀಪ್ ಭೇಟಿಯಾಗಿದ್ದು, ಬಹುತೇಕ ಪಕ್ಷ ಸೇರ್ಪಡೆ ಪಕ್ಕಾ ಎನ್ನಲಾಗಿದೆ.
ಒಂದು ಮೂಲಗಳ ಪ್ರಕಾರ ಸುದೀಪ್ಗೆ ತನಿಖಾ ಸಂಸ್ಥೆಗಳಾದ ಐಟಿ, ಇಡಿಯಿಂದ ಬೆದರಿಕೆ ಇದ್ದು, ಅವರನ್ನು ಬೆದರಿಸಿ ಪಕ್ಷಕ್ಕೆ ಸೇರುವಂತೆ ಒತ್ತಡ ಹೇರಲಾಗ್ತಿದೆ ಎಂದು ಹೇಳಲಾಗಿದೆ.
ಬಸವರಾಜ ಬೊಮ್ಮಾಯಿ ಹಾಗೂ ಬಿಜೆಒಇ ನಾಯಕರ ಜೊತೆ ಕಿಚ್ಚ ಸುದೀಪ್ ಅವರು ಒಂದು ಸುತ್ತಿನ ಮಾತುಕತೆ ನಡೆದಿದ್ದು, ನಾಳೆ ಅಂದರೆ ಏಪ್ರಿಲ್ 5 ನೇ ತಾರಿಕನಂದು ಸುದೀಪ್ ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾಹಿತಿ ಹರಿದಾಡ್ತಿದೆ.
ಅಪಾರ ಅಭಿಮಾನಿಗಳನ್ನು ಹೊಂದಿರುವ ಸುದೀಪ್ ಅವರು ರಾಜಕೀಯ ನಿಲುವು ತಳೆಯಲಿದ್ದಾರಾ ಎನ್ನುವುದು ಅವರ ಕಡೆಯಿಂದ ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ಬಿಜೆಪಿ ಪರ ಮತ ಪ್ರಚಾರಕ್ಕೆ ಇಳಿಯುವ ಸಾಧ್ಯತೆ ಅಂತೂ ದಟ್ಟವಾಗಿದೆ.












