ಅರೆಬೆತ್ತಲೆ ಉಡುಗೆ ತೊಡುಗೆಗಳಿಂದಲೇ ಫೇಮಸ್ ಆಗಿರೋ ನಟಿ ಉರ್ಫಿ ಜಾವೇದ್. ಇವರು ಧರಿಸುವಂತಹ ಎಷ್ಟೋ ಡ್ರೆಸ್ಗಳು ಚಿತ್ರ ವಿಚಿತ್ರವಾಗಿದ್ದರೂ, ವಿಚಿತ್ರ ಆಯ್ಕೆಗಳಿಂದಲೇ ಉರ್ಫಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಇನ್ಮುಂದೆ ನಟಿ ಉರ್ಫಿ ಬದಲಾಗುತ್ತಾರಂತೆ .. ಹೀಗಂತ ಬೇರೆ ಯಾರೂ ಹೇಳಿಲ್ಲ… ಖುದ್ದು ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತಾನು ಧರಿಸುವ ಬಟ್ಟೆಗಳಿಂದ ಇತರರ ಭಾವನೆಗಳಿಗೆ ನೋವುಂಟಾಗಿರೋದ್ರಿಂದ ಕ್ಷಮೆ ಯಾಚಿಸಿರೋದಾಗಿ ಉರ್ಫಿ ಟ್ವಿಟರ್ನಲ್ಲಿ ತಿಳಿಸಿದ್ದು, ನಾನು ಧರಿಸುವ ಬಟ್ಟೆಯಿಂದ ಪ್ರತಿಯೊಬ್ಬರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಇನ್ಮುಂದೆ ನೀವು ಬದಲಾದ ಉರ್ಫಿಯನ್ನು ನೋಡುತ್ತೀರಿ.” ಎಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಟಿ ಉರ್ಫಿ ಜಾವೇದ್ ಬರೆದುಕೊಂಡಿದ್ದಾರೆ.

ಇದರಿಂದ ನೆಟ್ಟಿಗರು ಶಾಕ್ ಆಗಿದ್ದು, ʻನೀವು ಇಷ್ಟಪಡುವುದನ್ನು ನೀವು ಧರಿಸುತ್ತೀರಿ, ನಿಮ್ಮಿಷ್ಟದಂತೆಯೇ ನೀವಿರಿ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲ ಸೋಶಿಯಲ್ ಮೀಡಿಯಾ ಬಳಕೆದಾರರು ಇದು ಏಪ್ರಿಲ್ ಫೂಲ್ ಹಾ..? ಎಂದು ತಮಾಷೆ ಮಾಡಿದ್ದಾರೆ. ಆದ್ರೆ ಉರ್ಫಿ ನಿಜವಾಗಿಯೂ ಕ್ಷಮೆ ಕೇಳಿದ್ದಾರಾ ಅಥವಾ ಏಪ್ರಿಲ್ ಫೂಲ್ ಮಾಡಿದ್ದಾರಾ ಅನ್ನೋದು ಮಾತ್ರ ಗೊತ್ತಿಲ್ಲ.







