• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಮ್ಮ ತಂದೆಯಂತೆ ನನ್ನ ಮೇಲೂ ನಂಬಿಕೆಯಿಡಿ ಉಳಿಸಿಕೊಳ್ಳುತ್ತೇನೆ: ದರ್ಶನ್‌ ಧ್ರುವನಾರಾಯಣ

ಪ್ರತಿಧ್ವನಿ by ಪ್ರತಿಧ್ವನಿ
March 29, 2023
in Top Story, ಕರ್ನಾಟಕ
0
ನಮ್ಮ ತಂದೆಯಂತೆ ನನ್ನ ಮೇಲೂ ನಂಬಿಕೆಯಿಡಿ ಉಳಿಸಿಕೊಳ್ಳುತ್ತೇನೆ: ದರ್ಶನ್‌ ಧ್ರುವನಾರಾಯಣ
Share on WhatsAppShare on FacebookShare on Telegram

ADVERTISEMENT

ಮೈಸೂರು : ಮಾ.29: ನಮ್ಮ ತಂದೆ ಧ್ರುವನಾರಾಯಣ ಈಗ ನಮ್ಮೊಂದಿಗೆ ದೈಹಿಕವಾಗಿ ಇಲ್ಲ‌. ಆದರೆ ಮಾನಸಿಕವಾಗಿ ಇದ್ದಾರೆ. ಅವರ ಜನ ಸೇವೆಯನ್ನು ನಮ್ಮ ಕುಟುಂಬ ಮುಂದುವರೆಸಿಕೊಂಡು ಹೋಗಲು ನಿರ್ಧಾರ ಮಾಡಿದೆ. ನಮ್ಮ ತಂದೆಯಂತೆ ನನ್ನ ಮೇಲೆ ನಂಬಿಕೆ, ವಿಶ್ವಾಸ ಇಡಿ. ಅದನ್ನು ನಾನು ಉಳಿಸಿಕೊಂಡು ಹೋಗುತ್ತೇನೆ ಎಂದು ದರ್ಶನ್‌ ಧ್ರುವನಾರಾಯಣ ಹೇಳಿದರು.


ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಶಾಸಕ ಧ್ರುವನಾರಾಯಣ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ತಂದೆ ನಮ್ಮೊಂದಿಗೆ ದೈಹಿಕವಾಗಿ ಇಲ್ಲ‌. ಆದರೆ ಮಾನಸಿಕವಾಗಿ ಇದ್ದಾರೆ. ನಮ್ಮ ತಂದೆಯವರ ಅಂತಿಮ ಕಾರ್ಯಕ್ಕೆ ರಾಜ್ಯಾದ್ಯಂತ ಜನ ಬಂದರು. ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಜಾರಕಿಹೊಳಿ ಸೇರಿದಂತೆ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಮಾರ್ಗದರ್ಶನ ನೀಡಿ ಕೈಹಿಡಿಯಿರಿ ಎಂದು ಕೋರುತ್ತೇನೆ ಎಂದು ಮನವಿ ಮಾಡಿದರು.


ಇನ್ನು ನಮ್ಮ ತಂದೆ ಯಾವತ್ತೂ ನನಗೆ ರಾಜಕೀಯ ಪಾಠ ಹೇಳಿಕೊಡಲಿಲ್ಲ‌. ಆದರೆ, ಅವರ ಜನ ಸೇವೆಯನ್ನು ನೋಡಿ ಬೆಳೆದಿದ್ದೇವೆ. ನಮ್ಮ ಇಡೀ ಕುಟುಂಬ ಜನ ಸೇವೆ ಮಾಡುತ್ತೇವೆ. ಈ ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡಲು ನಿಮ್ಮ ಆಶೀರ್ವಾದ ಇರಲಿ. ನಮ್ಮ ತಂದೆ ಮೇಲಿದ್ದ ನಂಬಿಕೆ, ವಿಶ್ವಾಸವನ್ನು ನಮ್ಮ ಮೇಲಿಟ್ಟರೆ ಅದನ್ನು ಉಳಿಸಿಕೊಂಡು ಹೋಗುತ್ತೇನೆ ಎಂದು ಎಚ್.ಡಿ. ಕೋಟೆಯಲ್ಲಿ ನಡೆದ ಧ್ರುವನಾರಾಯಣ ಅವರ ನುಡಿನಮನ ಕಾರ್ಯಕ್ರಮದಲ್ಲಿ ದರ್ಶನ್‌ ಧ್ರುವನಾರಾಯಣ ಮನವಿ ಮಾಡಿದರು.

ಎತ್ತರಕ್ಕೆ ಬೆಳೆಯುವ ಅವಕಾಶ ಕಿತ್ತುಕೊಂಡ ವಿಧಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಧ್ರುವನಾರಾಯಣ ಅವರಿಗೆ ರಾಜಕೀಯದಲ್ಲಿ ಬಹಳ ಎತ್ತರಕ್ಕೆ ಬೆಳೆಯುವ ಅವಕಾಶ ಇತ್ತು. ವಿಧಿ ಬಹಳ ಕ್ರೂರಿ. ಅವರು ಮಾಡಿದ ಕೆಲಸಗಳು, ಆದರ್ಶಗಳನ್ನ ನಮ್ಮೊಡನೆ ಬಿಟ್ಟು ಹೋಗಿದ್ದಾರೆ. ಧ್ರುವನಾರಾಯಣ ಇಡೀ ಜೀವನವನ್ನ ತಮ್ಮ ರಾಜಕಾರಣಕ್ಕೆ ಅರ್ಪಿಸಿಕೊಂಡಿದ್ದರು. ಇಂತಹ ರಾಜಕಾರಣಿ ನಮ್ಮ ದೇಶದಲ್ಲಿ ಸಿಗಲ್ಲ. ಶಾಸಕರು, ಮಂತ್ರಿಗಳು ವೈಭವ ಜೀವನಕ್ಕೆ ಮಾರು ಹೋಗುತ್ತಾರೆ. ಶಾಸಕ, ಸಂಸದರಾಗಿದ್ದಾಗ ವಯಕ್ತಿಕ ಸುಖ ಹಾಗೂ ವೈಭವದ ಜೀವನಕ್ಕೆ ಆಸೆ ಪಟ್ಟವರಲ್ಲ ಎಂದು ಹೇಳಿದರು.

ಧ್ರುವನಾರಾಯಣ ಸೋಲಿನಿಂದ ಚಾಮರಾಜನಗರ ಕ್ಷೇತ್ರಕ್ಕೆ ನಷ್ಟ: ನಾನು ಮೊದಲಿನಿಂದ ಕಾಂಗ್ರೆಸ್‌ನಲ್ಲಿ ಇರಲಿಲ್ಲ. 2006ರಲ್ಲಿ ಕಾಂಗ್ರೆಸ್ ಪಕ್ಷದ ಸೇರಿದೆ. ಅಂದಿನಿಂದ ಅವರ ಜೊತೆ ಸ್ನೇಹ ಆರಂಭವಾಯ್ತು. ಧ್ರುವನಾರಾಯಣ 1 ಮತದಿಂದ ಗೆದ್ದು, ಲೋಕಸಭಾ ಸದಸ್ಯರಾಗಿ ಶಾಸಕ ರೀತಿ ಕೆಲಸ ಮಾಡಿದರು. ಪ್ರತಿ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನ ಬಗೆ ಹರಿಸುತ್ತಿದ್ದರು. ಚಾಮರಾಜನಗರ ಜಿಲ್ಲೆ ಅಭಿವೃದ್ಧಿಯಾಗಿದ್ರೆ ಧ್ರುವನಾರಾಯಣ ಕಾರಣ. ಯಾವಗ ಭೇಟಿಯಾದ್ರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ನಾನು ಸಿಎಂ ಆಗಿದ್ರು ನನ್ನ ಕ್ಷೇತ್ರದ ಕೆಲಸವನ್ನ ಅವರೇ ಮಾಡುತ್ತಿದ್ದರು. ರಾಜಕಾರಣದಲ್ಲಿ ಕೆಲಸ ಮಾಡುವವರು ಸೋಲುತ್ತಾರೆ. ಕೆಲಸ ಮಾಡದೆ ಇದ್ದವರು ಗೆಲ್ಲುತ್ತಾರೆ. ಅವರು ಸೋಲಿನಿಂದ ಅವರಿಗೆ ನಷ್ಟ ಆಗಲಿಲ್ಲ. ಅವರ ಸೋಲಿನಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದರು.


ದರ್ಶನ್‌ನನ್ನು ವಿಧಾನಸೌಧಕ್ಕೆ ಕಳುಹಿಸಿ: ಧ್ರುವನಾರಾಯಣ ಸಾವಿಗೆ ಇಡೀ ರಾಜ್ಯದ ಜನ ಕಣ್ಣೀರಿಟ್ಟಿದೆ‌. ಧ್ರುವನಾರಾಯಣ ಅವರಿಗೆ ಅವರೇ ಸಾಟಿ. ಅವರ ದಾರಿಯಲ್ಲಿ ದರ್ಶನ ನಡೆಸುವ ನಂಬಕೆ ವಿಶ್ವಾಸ ಇದೆ. ಕಾಂಗ್ರೆಸ್ ಪಕ್ಷ ನಂಜನಗೂಡಿಗೆ ಅಭ್ಯರ್ಥಿಯಾಗಿ ಮಾಡಿದೆ. ಸದ್ಯ ಅವರ ಜಯ, ಅಪಜಯ ನಿಮ್ಮ ಕೈಯಲ್ಲಿದೆ. ನಿಮ್ಮ ಒತ್ತಾಯ ನೋವನ್ನ ಪರಿಗಣಿಸಿ ದರ್ಶನ ಅವರನ್ನ ಅಭ್ಯರ್ಥಿಯಾಗಿ ಮಾಡಿದೆ. ಅವರ ಗೆಲುವು ನಿಮ್ಮಗೆಲುವು‌. ಅವರನ್ನ ಗೆಲ್ಲಿಸಿ ಕಳುಹಿಸಿ. ಚುನಾವಣಾ ಪ್ರಚಾರಕ್ಕೆ ನಾನು ಬರುತ್ತೇನೆ. ಅವರನ್ನ ಗೆಲ್ಲಿಸ್ತೀರಾ ಎಂಬ ನಂಬಿಕೆ ಇದೆ. ದರ್ಶನ ಅವರನ್ನ ವಿಧಾನಸೌಧಕ್ಕೆ ಕಳುಹಿಸಿ ಎಂದು ಮನವಿ ಮಾಡಿದರು.

Tags: Congress PartydarshandruvanarayanaDK ShivakumarDKSureshdruvanarayannudinamanakaryakramasatishajarkiholisiddaramaiah
Previous Post

ಸುದ್ದಿಗೋಷ್ಠಿ ಕರೆದ ಕೇಂದ್ರ ಚುನಾವಣಾ ಆಯೋಗ : ಇಂದೇ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ

Next Post

ಸಿದ್ದರಾಮಯ್ಯ ವರುಣ ಕ್ಷೇತ್ರದ ಕಾರ್ಯಕ್ರಮಕ್ಕೆ ತಟ್ಟಲಿದ್ಯಾ ನೀತಿ ಸಂಹಿತೆ ಬಿಸಿ..?

Related Posts

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ
Top Story

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

by ಪ್ರತಿಧ್ವನಿ
April 27, 2026
0

ಮಂಗಳೂರು ನಗರದಲ್ಲಿ 2022ರಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವು ರಾಜ್ಯದ ಭದ್ರತಾ ವ್ಯವಸ್ಥೆಯನ್ನು ಎಚ್ಚರಿಸಿದ ಪ್ರಮುಖ ಉಗ್ರ ಕೃತ್ಯಗಳಲ್ಲಿ ಒಂದಾಗಿದೆ. ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದ...

Read moreDetails
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

April 26, 2026
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
Next Post
ಸಿದ್ದರಾಮಯ್ಯ ವರುಣ ಕ್ಷೇತ್ರದ ಕಾರ್ಯಕ್ರಮಕ್ಕೆ ತಟ್ಟಲಿದ್ಯಾ ನೀತಿ ಸಂಹಿತೆ ಬಿಸಿ..?

ಸಿದ್ದರಾಮಯ್ಯ ವರುಣ ಕ್ಷೇತ್ರದ ಕಾರ್ಯಕ್ರಮಕ್ಕೆ ತಟ್ಟಲಿದ್ಯಾ ನೀತಿ ಸಂಹಿತೆ ಬಿಸಿ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada