ಸ್ಯಾಂಡಲ್‌ವುಡ್ ನಿರ್ದೇಶಕ ಕಿರಣ್ ಗೋವಿ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಿರಣ್ ತಮ್ಮ ಕಚೇರಿಯಲ್ಲಿದ್ದಾಗ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಕಿರಣ್ ಗೋವಿ ಇಹಲೋಕ ತ್ಯಜಿಸಿದ್ದಾರೆ. ಕಿರಣ್ ಗೋವಿ ಅವರಿಗೆ 40 ವರ್ಷ ವಯಸ್ಸಾಗಿತ್ತು. ಯಾರಿಗುಂಟು ಯಾರಿಗಿಲ್ಲ, ಸಂಚಾರಿ, ಪಾರು w/o ದೇವದಾಸ್, ಪಯಣ ಸಿನಿಮಾಗಳನ್ನ ಕಿರಣ್ ಗೋವಿ ನಿರ್ದೇಶಿಸಿದ್ದರು. ಸದ್ಯ ಕಿರಣ್ ಗೋವಿ ನಿಧನಕ್ಕೆ ಚಂದನವನ ಕಂಬನಿ ಮಿಡಿದಿದೆ
ಒಟಿಟಿಗೆ ಎಂಟ್ರಿ ಕೊಟ್ಟ ಸೈಕಲಾಜಿಕಲ್ ಥ್ರಿಲ್ಲರ್ ‘ಗ್ರೀನ್’
ಕನ್ನಡ ಸೈಕಲಾಜಿಕಲ್ ಥ್ರಿಲ್ಲರ್ ಗ್ರೀನ್(Green) ಸಿನಿಮಾ ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ನಾಳೆಯಿಂದ zee5 ಒಟಿಟಿಯಲ್ಲಿ ಈ ಚಿತ್ರ ಸ್ಟ್ರೀಮಿಂಗ್ ಆಗಲಿದೆ. https://youtu.be/v2kOW8m5SWg?si=_pISA5B40rv2ey9a ರಾಜ್ ವಿಜಯ್ ನಿರ್ದೇಶನದಲ್ಲಿ ಮೂಡಿಬಂದ...
Read moreDetails













