ಮೈಸೂರು :ಮಾ.25: ಚಾಮರಾಜದಲ್ಲಿ ಟಿಕೆಟ್ ಗಾಗಿ ಭಾರೀ ಜಟಾಪಟಿ ಏರ್ಪಟ್ಟಿತ್ತು, ಮಾಜಿ ಶಾಸಕ ವಾಸು ಹಾಗು ಸಿದ್ದರಾಮಯ್ಯ ಆಪ್ತ ಹರೀಶ್ ಗೌಡ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ರು. ವಾಸು, ಮಾಜಿ ಸಿಎಂ ವೀರಪ್ಪಮೋಯ್ಲಿ ಪರಮಾಪ್ತ ರಾಗಿದ್ದು, ಯಾರಿಗೆ ಟಿಕೆಟ್ ನೀಡಿದರೂ ಬಂಡಾಯದ ಬಿಸಿ ಎದುರಾಗುವ ಭೀತಿಯಿಂದ ಟಿಕೆಟ್ ಘೋಷಣೆ ಮಾಡಿಲ್ಲ.
ಇಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಮತ್ತೊಬ್ಬರು ಬಂಡಾಯ ಭಾವುಟ ಹಾರಿಸುತ್ತಾರೆ ಎಂಬ ಆತಂಕದಿಂದ ಹೈಕಮಾಂಡ್ ಟಿಕೆಟ್ ಫೈನಲ್ ಮಾಡಿಲ್ಲ. ಇದರಿಂದ ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಕೃಷ್ಣರಾಜ ಕ್ಷೇತ್ರದಲ್ಲೂ ಟಿಕೆಟ್ ಗಾಗಿ ಭಾರಿ ಫೈಟ್ ನಡೆದಿದೆ.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಪ್ರದೀಪ್ ಕುಮಾರ್, ನವೀನ್ ಕುಮಾರ್ ನಡುವೆ ಟಿಕೆಟ್ ಗಾಗಿ ಫೈಟ್ ಏರ್ಪಟಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 13 ಮಂದಿ ಆಕಾಂಕ್ಷಿಗಳಿದ್ದರು. ಮಾವಿನಹಳ್ಳಿ ಸಿದ್ದೇಗೌಡ, ಬೀರಿಹುಂಡಿ ಬಸವಣ್ಣ, ಕೆಂಪನಾಯಕ, ರಾಕೇಶ್ ಪಾಪಣ್ಣ, ಮರೀಗೌಡ, ಡಾ.ಬಿ.ಜೆ.ವಿಜಯಕುಮಾರ್, ಮಂಜುಳ ಮಾನಸ ಸೇರಿ ಹಲವರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ರು. ಯಾರಿಗೆ ಟಿಕೆಟ್ ನೀಡಿದರೂ ಬಂಡಾಯ ಕಟ್ಟಿಟ್ಟ ಬುತ್ತಿ ಎಂದು ಅರಿತ ಹೈಕಮಾಂಡ್ ಇಲ್ಲೂ ಟಿಕೆಟ್ ಪೆಂಡಿಂಗ್ ಇಟ್ಟಿದೆ. ವಲಸಿಗ v/s ಮೂಲ ಕಾಂಗ್ರೆಸ್ಸಿಗರ ನಡುವೆ ಜಟಾಪಟಿ ಏರ್ಪ ಟ್ಟಿರುವ ಕಾರಣ ಈ ಮೂರು ಕ್ಷೇತ್ರದ ಟಿಕೆಟ್ ಘೋಷಣೆ ಕಗ್ಗಂಟಾಗಿ ಉಳಿದಿದ್ದು, ಅಭ್ಯರ್ಥಿಗಳು, ಆಕಾಂಕ್ಷಿಗಳ ಎದೆಯಲ್ಲಿ ಢವಢವ ಶುರುವಾಗಿದೆ..






