• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯೋದು ಫಿಕ್ಸ್‌..! ಕಾರಣ ಗೊತ್ತಾ..? Siddaramaiah Withdrawing From Kolar Constituency..?

ಕೃಷ್ಣ ಮಣಿ by ಕೃಷ್ಣ ಮಣಿ
March 18, 2023
in Top Story, ಇದೀಗ, ಕರ್ನಾಟಕ, ರಾಜಕೀಯ
0
ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಹಿಂದೆ ಸರಿಯೋದು ಫಿಕ್ಸ್‌..! ಕಾರಣ ಗೊತ್ತಾ..? Siddaramaiah Withdrawing From Kolar Constituency..?
Share on WhatsAppShare on FacebookShare on Telegram

ADVERTISEMENT

ಕೋಲಾರ:ಮಾ.18: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸುವ ಸಿದ್ಧತೆಯಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಕೋಲಾರ ಸೇಫ್‌ ಅಲ್ಲ ಅನ್ನೋ ಮಾಹಿತಿ ರವಾನೆ ಆಗಿದೆ. ಕೋಲಾರ ಜೆಡಿಎಸ್‌ ಭದ್ರಕೋಟೆ ಆಗಿದ್ದು, ಸಿದ್ದರಾಮಯ್ಯ ವಿರುದ್ಧ ಈಗಾಗಲೇ ಕೋಲಾರ ಕ್ಷೇತ್ರದಲ್ಲಿ ಈಗಾಗಲೇ ದಲಿತ ನಾಯಕ ಕೆ.ಹೆಚ್‌ ಮುನಿಯಪ್ಪ ಅವರ ಸೋಲಿಸುವ ಸಂಚಿನ ರೂವಾರಿ, ತನ್ನ ಆಪ್ತ ರಮೇಶ್‌ ಕುಮಾರ್‌ ಹಾಗು ನಂಜೇಗೌಡರನ್ನು ಬಳಸಿಕೊಂಡು ಕೆ.ಹೆಚ್‌ ಮುನಿಯಪ್ಪ ಅವರನ್ನು ಸೋಲಿಸಿದ್ರು ಅನ್ನೋದನ್ನು ಮನವರಿಕೆ ಮಾಡಿಕೊಡಲಾಗ್ತಿದೆ. ಅದೂ ಅಲ್ಲದೆ ಸ್ಥಳೀಯ ವ್ಯಕ್ತಿ ಸಿಎಂಆರ್‌ ಶ್ರೀನಾಥ್‌, ಪರ ಕೋಲಾರದಲ್ಲಿ ಅಲೆ ಇದ್ದು, ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿದ್ದ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್‌ ಸೇರಿದ್ದು ಜನರಲ್ಲಿ ಅಸಹನೆ ಮೂಡುವಂತೆ ಮಾಡಿದೆ. ಈಗಾಗಲೇ ಆಕ್ರೋಶದಿಂದ ಕುದಿಯುತ್ತಿರುವ ಜೆಡಿಎಸ್‌ ಕಾರ್ಯಕರ್ತರು ಹಾಲಿ ಶಾಸಕರನ್ನೇ ಆಪರೇಷನ್‌ ಮಾಡಿದ ಕಾಂಗ್ರೆಸ್‌ಗೆ ಬುದ್ಧಿ ಕಲಿಸಬೇಕು ಅನ್ನೋ ಉದ್ದೇಶ ಹೊಂದಿದ್ದಾರೆ. ಇದೀಗ ಸಿದ್ದರಾಮಯ್ಯ ಅನಿವಾರ್ಯವಾಗಿ ಜೆಡಿಎಸ್‌ ಬಲೆಯಲ್ಲಿ ಸಿಲುಕಿ ಸೋಲುವ ಭೀತಿ ಸೃಷ್ಟಿಯಾಗಿದೆ.

ರಾಹುಲ್‌ ಗಾಂಧಿ ಸ್ಪಷ್ಟ ಸಂದೇಶ, ಸಿದ್ದರಾಮಯ್ಯ ಮೌನ..

ಶುಕ್ರವಾರ ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಸಂದೇಶ ನೀಡಿದ್ದಾರೆ. ವಿರೋಧಿಗಳು ನಿಮ್ಮನ್ನು ಕಟ್ಟಿ ಹಾಕುವ ಪ್ರಯತ್ನಕ್ಕೆ ಕೋಲಾರದಲ್ಲಿ ಹೆಚ್ಚು ಯಶಸ್ಸು ಸಿಗುವ ಅವಕಾಶಗಳಿವೆ. ವಿರೋಧಿಗಳಿಗೆ ಅವಕಾಶ ಕೊಡದಂತೆ ನೀವು ವಿಧಾನಸಭೆ ಪ್ರವೇಶ ಮಾಡಬೇಕು. ಇದಕ್ಕಾಗಿ ಹೆಚ್ಚು ಸೂಕ್ತ ಎನಿಸುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನೀವು ಕೋಲಾರದಿಂದಲೇ ಗೆದ್ದು ಬರುತ್ತೇನೆ ಎನ್ನುವ ಇಚ್ಛೆ ವ್ಯಕ್ತಪಡಿಸಿದರೆ ಕೋಲಾರದಿಂದಲೇ ಸ್ಪರ್ಧೆ ಮಾಡಿ. ಇನ್ನು ಒಂದು ಬಾರಿ ಈ ಬಗ್ಗೆ ಆಪ್ತರೊಂದಿಗೆ ಸಮಾಲೋಚನೆ ನಡೆಸುವುದು ಸೂಕ್ತ ಎಂದಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಕೋಲಾರ ಹಾಗು ಮೈಸೂರು ಬೆಂಬಲಿಗರೊಂದಿಗೆ ಚರ್ಚೆ ನಡೆಸಿ ನಿರ್ಧಾರ ತಿಳಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗ್ತಿದೆ. ಇದರ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಡಾ ಯತೀಂದ್ರ, ಅಪ್ಪ ವರುಣಾಗೆ ಬರುವುದಾದರೆ ಕ್ಷೇತ್ರ ಬಿಟ್ಟು ಕೊಡಲು ನಾನು ಸಿದ್ಧವಿದ್ದೇನೆ ಎಂದಿದ್ದಾರೆ. ಅಂದರೆ ಕಾಂಗ್ರೆಸ್‌ ಹೈಕಮಾಂಡ್‌ ಸಂದೇಶ ಸತ್ಯ ಎನ್ನುವುದು ಈ ಮಾತಿನಿಂದ ತಿಳಿದು ಬರ್ತಿದೆ.

ಕೋಲಾರ ಇಲ್ಲ ಎನ್ನುವ ಸುಳಿವು ಕೊಟ್ಟ ಸಿದ್ದರಾಮಯ್ಯ..!

ದೆಹಲಿಯಿಂದ ವಾಪಸ್‌ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಇಲ್ಲ ಅನ್ನೋ ಸುಳಿವು ನೀಡಿದ್ದಾರೆ. ಹೈಕಮಾಂಡ್‌ ಹೇಳಿದ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನೆ ಎಂದು ಈಗಾಗಲೇ ಹೇಳಿದ್ದೇನೆ. ನಾನು ಯಾವುದೇ ಕ್ಷೇತ್ರದಿಂದ ಟಿಕೆಟ್‌ ಬಯಸಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿಲ್ಲ. ಕೋಲಾರದಲ್ಲಿ ನಾನಿನ್ನೂ ಮನೆ ಮಾಡಿಲ್ಲ. ನಾನು ಬೆಳಗಾವಿಗೆ ಹೋಗಬೇಕಿದೆ. ಹೀಗಾಗಿ ನಾನು ಕೋಲಾರ ಪ್ರವಾಸ ರದ್ದು ಮಾಡಿದ್ದೇನೆ. ಬಾದಾಮಿ, ವರುಣಾ, ಕೋಲಾರ ಸೇರಿದಂತೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸೂಚಿಸಿದರೂ ನಾನು ಸ್ಪರ್ಧೆಗೆ ಸಿದ್ಧವಿದ್ದೇನೆ. ಮಾರ್ಚ್‌ 22 ರಂದು ಮೊದಲ ಪಟ್ಟಿ ಬಿಡುಗಡೆ ಆಗಲಿದೆ. ಎಲ್ಲಾ ಶಾಸಕರ ಕ್ಷೇತ್ರದ ಬಗ್ಗೆಯೂ ಚರ್ಚೆ ಮಾಡಿಲ್ಲ, ಒಂದೊಂದೇ ಆಕಾಂಕ್ಷಿಗಳು ಇರುವ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ, ವರುಣಾದಲ್ಲಿ ಡಾ ಯತೀಂದ್ರ ಹೆಸರು ಒಂದೇ ಇರೋದು, ಅಂದ್ರೆ ಕ್ಲಿಯರ್‌ ಆಗಬೇಕು ಅಲ್ವಾ ಅನ್ನೋ ಮೂಲಕ ಯತೀಂದ್ರ ಕೂಡ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ ಅನ್ನೋ ಮಾತನ್ನು ಹೇಳಿದ್ದಾರೆ. ಕೋಲಾರ ಪ್ರವಾಸ ರದ್ದು ಮೂಲಕ ಕೋಲಾರ ಕ್ಷೇತ್ರದಿಂದ ವಾಪಸ್‌, ಇನ್ನು ಯತೀಂದ್ರ ವರುಣಾದಲ್ಲಿ ಸ್ಪರ್ಧೆ ಅನ್ನೋ ಮೂಲಕ ವರುಣಾದಿಂದಲೂ ವಾಪಸ್‌ ಉಳಿದಿದ್ದು ಕೇವಲ ಬಾದಾಮಿ ಎನ್ನುವಂತಾಗಿದೆ.

ಕೋಲಾರದಲ್ಲಿ ಸಿದ್ದರಾಮಯ್ಯಗೆ ಬಲೆ ಹೆಣೆದಿದ್ದು ಯಾರು..?

ಕೋಲಾರದಲ್ಲಿ ಬಿಜೆಪಿಯಿಂದ ಅಭ್ಯರ್ಥಿ ಎನ್ನಲಾಗುತ್ತಿರುವ ವರ್ತೂರು ಪ್ರಕಾಶ್‌ ಈ ಬಗ್ಗೆ ಮಾತನಾಡಿದ್ದು, ಸಿದ್ದರಾಮಯ್ಯ ಮೈಸೂರು ಹುಲಿ, ನಾನು ಕೋಲಾರದ ಹುಲಿ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಿದರೆ ಸೋಲುವುದು ಕಟ್ಟಿಟ್ಟ ಬುತ್ತಿ. ಸ್ವತಃ ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಿಸಲು ರಮೇಶ್‌ ಕುಮಾರ್‌ ಸಂಚು ರೂಪಿಸಿದ್ದಾರೆ. ಡಿಕೆ ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಲು ರಮೇಶ್‌ ಕುಮಾರ್‌ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಕೆ.ಹೆಚ್‌ ಮುನಿಯಪ್ಪ ಕೂಡ ಸಿದ್ದರಾಮಯ್ಯ ಬಂದು ಸ್ಪರ್ಧೆ ಮಾಡಲಿ ಎನ್ನುತ್ತಿರುವುದು ಕೂಡ ಈ ಹಿಂದಿನ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಹೊರತು ಮತ್ತೇನೆ ಇಲ್ಲ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಸಿದ್ದರಾಮಯ್ಯನನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಕೋಲಾರ ಮುಖಂಡರ ಸಭೆ ನಡೆಸುತ್ತಿದ್ದು, ಮೊದಲ ಪಟ್ಟಿ ಬಿಡುಗಡೆ ಆಗುವ ಮೊದಲೇ ಸಿದ್ದರಾಮಯ್ಯ ಕ್ಷೇತ್ರವನ್ನು ಫೈನಲ್‌ ಮಾಡಲಿದ್ದಾರೆ. ಮೊದಲ ಪಟ್ಟಿಯಲ್ಲೇ ಸಿದ್ದರಾಮಯ್ಯ ಹೆಸರು ಅಂತಿಮ ಆಗಲಿದೆ ಎನ್ನುವ ಮಾಹಿತಿ ಕಾಂಗ್ರೆಸ್‌ ಮೂಲಗಳಿಂದ ತಿಳಿದು ಬಂದಿದೆ.

ಕೃಷ್ಣಮಣಿ

Tags: BJPBJP GovernmentBJP High CommandBJP PartyBjpKaranatakaCongress PartydkahivakumarKolarakolarnewsKPCCrahulgandhisiddaramaiahvarthurprakashvarturprakashನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕೋಲಾರದಿಂದ ಹಿಂದೆ ಸರಿದ ಸಿದ್ದರಾಮಯ್ಯ? ರಾಹುಲ್‌ ಸಲಹೆಯೇನು?

Next Post

ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿದ ʻಕಬ್ಜʼ.. ಮೊದಲ ದಿನದ ಕಲೆಕ್ಷನ್‌ ಎಷ್ಟು ಗೊತ್ತಾ..?

Related Posts

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?
Top Story

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

by ಪ್ರತಿಧ್ವನಿ
April 14, 2026
0

ಬೆಂಗಳೂರು : ಪಂಚಮಸಾಲಿ ಸಮಾಜದ ಎರಡು ಟ್ರಸ್ಟ್ ಸ್ವಂತ ಆಸ್ತಿಯಾಗಿವೆ, ಇದರಿಂದ ಸಮಾಜ ಹಾಗೂ ಜನರಿಂದ ನಂಬಿಕೆಗೆ ಅನರ್ಹವಾಗಿವೆ. ವಚನಾನಂದ ಶ್ರೀಗಳ ಉಚ್ಚಾಟನೆ ಅಷ್ಟೇನೂ ವಿಶೇಷ ಎಂದು...

Read moreDetails
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಆದಿಚುಂಚನಗಿರಿ ಕಟ್ಟು ನಿಟ್ಟಿನ ಭದ್ರತೆ: ಸಿದ್ಧತೆ-ಭದ್ರತೆ ಹೀಗಿದೆ!

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಆದಿಚುಂಚನಗಿರಿ ಕಟ್ಟು ನಿಟ್ಟಿನ ಭದ್ರತೆ: ಸಿದ್ಧತೆ-ಭದ್ರತೆ ಹೀಗಿದೆ!

April 14, 2026
ಮಂತ್ರಾಲಯ ರಾಯರ ಜಪದ ಕಟ್ಟೆ ಸಮೀಪ ಭೂ ವಿವಾದ ತೀವ್ರ; ಸರ್ವೆ ವೇಳೆ ಗಲಾಟೆ

ಮಂತ್ರಾಲಯ ರಾಯರ ಜಪದ ಕಟ್ಟೆ ಸಮೀಪ ಭೂ ವಿವಾದ ತೀವ್ರ; ಸರ್ವೆ ವೇಳೆ ಗಲಾಟೆ

April 14, 2026
Next Post
ʼಕೆ ಜಿ ಎಫ್ʼ ,  ʼಕಾಂತಾರ ʼ ಚಿತ್ರಗಳ ನಂತರ ಭಾರತದಾದ್ಯಂತ ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದ “ಕಬ್ಜ”..  KABZAA ‘Box Office’ Collection..!

ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿದ ʻಕಬ್ಜʼ.. ಮೊದಲ ದಿನದ ಕಲೆಕ್ಷನ್‌ ಎಷ್ಟು ಗೊತ್ತಾ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada