ಶಿವಮೊಗ್ಗ : ಮಾ.18: ಶಿವಮೊಗ್ಗ ಕುವೆಂಪು ರಸ್ತೆಯಲ್ಲಿನ ಕ್ಲಿಫ್ ಎಂಬಸ್ಸಿ ಎಂಬ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ, ಮಹಿಳೆಯರಿಗಾಗಿ ಡಿಜೆ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಉಚಿತ ಪ್ರವೇಶದ ಜೊತೆ ಮದ್ಯ ಕಾಂಪ್ಲಿಮೆಂಟರಿ ಎಂದು ಪೋಸ್ಟರ್ ಲ್ಲಿ ಹಾಕಲಾಗಿತ್ತು. ಸಹಜವಾಗಿ ಹೆಚ್ಚು ಜನ ಸೇರಿಕೊಂಡಿದ್ದರು. ಈ ಬಗ್ಗೆ ಶಿವಮೊಗ್ಗ ಭಜರಂಗದಳ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಇಂಥಹದನ್ನ ತಡೆಯಬೇಕು ಎಂದು ಮನವಿ ಸಲ್ಲಿಸಿತ್ತು. ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು, ನೇರವಾಗಿ ಭಜರಂಗದಳ ಕಾರ್ಯಕರ್ತರು ಹೋಟೆಲ್ ಗೆ ರಾತ್ರಿ ಭೇಟಿ ನೀಡಿದ್ದರು. ಪೊಲೀಸರೂ ಸಹ ಸ್ಥಳಕ್ಕೆ ಆಗಮಿಸಿ ಮಹಿಳೆಯರನ್ನ ಹೊರಗೆ ಕಳಿಸಿದ್ದಾರೆ. ಈ ವೇಳೆ ಮಾತನಾಡಿಡ ಭಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್, ಬಾರ್ ಅಂಡ್ ರೆಸ್ಟೋರೆಂಟ್ ಗೆ ಅನುಮತಿ ನೀಡಿದ್ದಾರೆ ಅದಷ್ಟೇ ಮಾಡಲಿ, ಮಹಿಳೆಯರಿಗೆ ಮದ್ಯದ ಪಾರ್ಟಿ ಆಯೋಜನೆ ಅದೂ ತಡ ರಾತ್ರಿವರೆಗೆ ಆಘಾತಕಾರಿ ಬೆಳವಣಿಗೆ. ಮಲೆನಾಡಿನಲ್ಲಿ ಈ ಸಂಸ್ಕೃತಿ ಇಲ್ಲ. ಈ ತರಹದಕ್ಕೆ ನಾವು ಬಿಡೋದಿಲ್ಲ ಎಂದರು.
ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಫೋನ್ ನಲ್ಲಿ ಮಾತನಾಡಿ, ಅವರು ಪರ್ಮಿಷನ್ ತಗೊಂಡಿದ್ದಾರೆ, ಅಲ್ಲಿ ಮಾದಕ ವಸ್ತುಗಳೇನಾದರೂ ಕಂಡು ಬಂದರೆ, ಅಥವಾ ಬೇರೇನಾದರೂ ಚಟುವಟಿಕೆ ಆರೋಪ ಬಂದರೆ ಕ್ರಮ ಕೈಗೊಳ್ಳಬಹುದು, ರೇಡ್ ಯಾರೂ ಮಾಡಿಲ್ಲ, ಪೊಲಿಸರ ಜೊತೆಗೆ ಪರಿಶೀಲನೆ ಮಾಡಿ ಮಹಿಳೆಯರನ್ನ ಹೊರ ಕಳಿಸಲಾಗಿದೆ ಎಂದರು.