ಬೆಂಗಳೂರು: ಗುಜರಿ ಗೋಡೌನ್’ಗಳಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು ಐದಾರು ಗೋಡೌನ್ ಏಕಕಕಾಲಕ್ಕೆ ಅಗ್ನಿಗೆ ಆಹುತಿಯಾಗಿರುವ ಘಟನೆ ನಾಯಂಡಳ್ಳಿ ಬಳಿಯ ಪ್ರಮೋದ ಲೇಔಟ್ ನಲ್ಲಿ ನಡೆದಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸಪಟ್ಟಿವೆ.
ಸುಮಾರು ಮೂರ್ನಾಲ್ಕು ಎಕರೆ ಜಾಗಕ್ಕೆ ಬೆಂಕಿ ವ್ಯಾಪಿಸಿದ್ದು, ಪ್ರಮೋಸ್ ಲೇಔಟ್ ನಲ್ಲಿ ಹೊಗೆ ಹರಡಿದೆ.
ಘಟನಾ ಸ್ಥಳದ ಪಕ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾರ್ಷಲ್ ಗಳ ಗಮನಕ್ಕೆ ಅಗ್ನಿ ಅವಘಡವಾಗಿರುವುದು ಕಂಡುಬಂದಿದ್ದು, ಸ್ಥಳಕ್ಕೆ ಆಗಮಿಸಿದ ಮಾರ್ಷಲ್ ಗಳು ಗೋಡೌನ್ ನಲ್ಲಿ ಮಲಗಿದ್ದವರನ್ನು ಎಬ್ಬಿಸಿ ಕಳುಹಿಸಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.