ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಅಂತಾನೆ ಕರೆಸಿಕೊಳ್ಳುವ ದ್ವಿತೀಯ ಪಿಯು ಪರೀಕ್ಷೆ ಗುರುವಾರ ಆರಂಭವಾಗಲಿದೆ.
ಮೈಸೂರು ಜಿಲ್ಲೆಯಲ್ಲಿ ಸುಗಮವಾಗಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಕಲ ರೀತಿಯಲ್ಲೂ ತಯಾರಿ ಮಾಡಿಕೊಳ್ಳುತ್ತಿದೆ. ಗುರುವಾರ ದಿಂದ ದ್ವಿತೀಯ ಪರೀಕ್ಷೆ ಆರಂಭವಾಗಲಿರುವ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಸರ್ವ ರೀತಿಯಲ್ಲೂ ತಯಾರಿಯಾಗಿದ್ದು,ಮೈಸೂರು ಜಿಲ್ಲೆಯಾದ್ಯಂತ 50 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ.
ಮೈಸೂರು ನಗರದಲ್ಲಿ 26 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ,ಕೆ ಆರ್ ನಗರ ತಾಲ್ಲೂಕಿನಲ್ಲಿ 3, ಹುಣಸೂರಿನಲ್ಲಿ 4, ನಂಜನಗೂಡಿನಲ್ಲಿ 5, ಪಿರಿಯಾಪಟ್ಟಣದಲ್ಲಿ 4, ಹೆಚ್ ಡಿ ಕೋಟೆಯಲ್ಲಿ 3 ಮತ್ತು ಟಿ ನರಸೀಪುರ ತಾಲ್ಲೂಕಿನಲ್ಲಿ 5 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ.
35020 ಮಂದಿ ಹಾಜರ್..
ಮೈಸೂರು ಜಿಲ್ಲೆಯಾದ್ಯಂತ ಒಟ್ಟಾರೆಯಾಗಿ 35,020 ಮಂದಿ ವಿದ್ಯಾರ್ಥಿಗಳು ದ್ವೀತಿಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ.ಈ ಕುರಿತು ಮೈಸೂರು ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗಮಲ್ಲೇಶ್ ಮಾಹಿತಿ ನೀಡಿಡ್ದಾರೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಯಾವುದೇ ರೀತಿಯ ಅನೈತಿಕ ಚಟುವಟಿಕೆ ನಡೆಯದಂತೆ ನಿಗಾವಹಿಸಲಾಗಿದೆ.
ನಕಲು ತಡೆಯಲು ಕ್ರಮ..
ಜಿಲ್ಲೆಯಲ್ಲಿ ಈ ಬಾರಿ ನಕಲು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು , ಸ್ಪೆಷಲ್ ಸ್ಕ್ವಾಡ್ ಗಳನ್ನ ನಿಯೋಜನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ ಜೆರಾಕ್ಸ್ ಸೆಂಟರ್ ಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಕೇಂದ್ರದ 200ಮೀ ವ್ಯಾಪ್ತಿಯಲ್ಲಿ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು , ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅಗತ್ಯ ಪೂರಕ ವಾತಾವರಣ ನಿರ್ಮಾಣ ಮಾಡಿಕೊಡಲಾಗಿದೆ.
ಮಾರ್ಚ್ 9 ರಿಂದ 29ರವರೆಗೆ ಪರೀಕ್ಷೆ..
ಮಾರ್ಚ್ ತಿಂಗಳ 29ರವರೆಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಯಾವುದೇ ಅಳುಕಿಲ್ಲದೆ ಪರೀಕ್ಷೆ ಬರೆಯಬೇಕಿದ್ದು , ಶಾಂತ ಚಿತ್ತ ಮನಸ್ಥಿತಿ ಮೈಗೂಡಿಸಿಕೊಂಡು ಪರೀಕ್ಷಾ ಕೇಂದ್ರಗಳಿಗೆ ಅಗಮಿಸಬೇಕಾಗಿದೆ. ಕಳೆದ ಬಾರಿಯ ರಿಸಲ್ಟ್ ನಲ್ಲಿ ಮೈಸೂರು 17ನೇ ಸ್ಥಾನದಲ್ಲಿತ್ತು. ಈ ಬಾರಿಯ ಪರೀಕ್ಷೆ ಫಲಿತಾಂಶದಲ್ಲಿ ಸುಧಾರಣೆ ಕಂಡುಕೊಳ್ಳುವ ನಿರೀಕ್ಷೆ ಇದೆ.