ರಾಜ್ಯದ ಜನರು ಕಾಂಗ್ರೆಸ್ ಬಂದ್ (Congress bandh) ಗೆ ಬೆಲೆ ಕೊಡಲ್ಲ ಅವರು ಆಡಳಿತ ಪಕ್ಷದಲ್ಲಿ ಇದ್ದಾಗ ಅವರ ಭ್ರಷ್ಟಾಚಾರ (Corruption) ರಾಜ್ಯದ ಜನತೆ ಗೆ ತಿಳಿದಿದೆ ಸುಮ್ಮನೆ ಯಾಕೆ ಈ ರೀತಿ ಬಂದ್ ಬಂದ್ ಅಂತಾರೆ ಭ್ರಷ್ಟಾಚಾರ (Corruption) ಕುರಿತು ಆಪಾದನೆ ಮಾಡುವವರು ಶುದ್ಧಹಸ್ತರಿರಬೇಕು. ಆದರೆ ಕಾಂಗ್ರೆಸ್‌ನವರು ಆ ರೀತಿ ಇಲ್ಲ ಎಂದು ಬೊಮ್ಮಾಯಿ (Bommai) ತಿರುಗೇಟು ನೀಡಿದರು.

ಸಿದ್ದರಾಮಯ್ಯ (Siddaramaiah) ಅವರು ಅಧಿಕಾರದಲ್ಲಿದ್ದಾಗ ಎಲ್ಲ ಸಚಿವರಿಗೆ ಟಾರ್ಗೆಟ್ (Target for minister) ಕೊಟ್ಟಿದ್ದು ಎಲ್ಲಾರಿಗೆ ತಿಳಿದು ಇರುವ ವಿಚಾರ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಸಚಿವರಾದ ಎಂ.ಬಿ.ಪಾಟೀಲ್, (MB Patil) ಮಹದೇವಪ್ಪ (Mahadevappa) ಹಾಗೂ ಕೆ,ಜೆ ಜಾರ್ಜ್ (KJ George) ಅವರನ್ನು ಬೇಕಿದ್ದರೆ ಕೇಳಿ ಎಂದರು. ಕಾಂಗ್ರೆಸ್ ಅವಧಿಯಲ್ಲಿ ‘ಕೈ’ ಸಂಪೂರ್ಣವಾಗಿ ಭ್ರಷ್ಟಾಚಾರದಿಂದ ಕೂಡಿತ್ತು ಎಂದು ಕಿಡಿಕಾರಿದ್ದಾರೆ.
ಹಾಸಿಗೆ, ತಲೆದಿಂಬು ಬಿಸುಗತ್ತು ಕಾಫಿ ವಿಚಾರದಲ್ಲಿ ಸಹ ಕಾಂಗ್ರೆಸ್ ನವರು ಭಷ್ಟಾಚಾರ ನೆಡೆಸಿದ್ದಾರೆ ಅಂತವರ ರಾಜ್ಯ ಬಂದ್ ಕರೆಗೆ ಜನರು ಬೆಲೆ ನೀಡುವುದಿಲ್ಲ. ಯಾವ ಬಂದ್ ಸಹ ಆಗಲ್ಲ ನೋಡಿ ಅಂತಾ ವ್ಯಂಗ್ಯ ಮಾಡಿದ್ದಾರೆ.