ಬ್ರಿಸ್ಬೇನ್(ಆಸ್ಟ್ರೇಲಿಯಾ) : ಆಸ್ಟ್ರೇಲಿಯಾದಲ್ಲಿ ಮತ್ತೊಂದು ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದೆ. ಬ್ರಿಸ್ಬೇನ್ನಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯವನ್ನು ಖಲಿಸ್ತಾನ ಪರ ಬೆಂಬಲಿಗತು ಇಂದು ಧ್ವಂಸಗೊಳಿಸಿದ್ದಾರೆ . ಈ ವಿಚಾರವಾಗಿ ಪ್ರತಿಕ್ರಿಯಿಸಿದ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರತಿಕ್ರಿಯಿಸಿದ್ದು ದೇವಸ್ಥಾನದ ಅರ್ಚಕರು ಹಾಗೂ ಭಕ್ತರು ಬೆಳಗ್ಗೆ ಕರೆ ಮಾಡಿ ದೇವಾಲಯದ ಮೇಲೆ ನಡೆದ ದಾಳಿಯ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ಹಿಂದೂ ಮಾನವ ಹಕ್ಕುಗಳ ನಿರ್ದೇಶಕಿ ಸಾರಾ ಗೇಟ್ಸ್ ಕೂಡ ಈ ವಿಚಾರವಾಗಿ ಮಾತನಾಡಿದ್ದು ಇತ್ತೀಚಿಗೆ ನಡೆಯುತ್ತಿರುವ ದೇಷದ ಅಪರಾಧಗಳು ಜಾಗತಿಕವಾಗಿ ಸಿಖ್ಸ್ ಫಾರ್ ಜಸ್ಟೀಸ್ ಮಾದರಿಯಾಗಿದ್ದು, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಹಿಂದೂಗಳನ್ನು ಭಯಭೀತಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಜನವರಿ ತಿಂಗಳಲ್ಲಿ ಆಸ್ಟ್ರೇಲಿಯಾದ ಕ್ಯಾರಮ್ ಡೌನ್ಸ್ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯದ ಗೋಡೆಗಳ ಮೇಲೆ ಹಿಂದೂ ವಿರೋಧಿ ಬರಹಗಳನ್ನು ಬರೆಯುವ ಮೂಲಕ ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು.
ಆಸ್ಟ್ರೇಲಿಯಾದ ತಮಿಳು ಹಿಂದೂ ಸಮುದಾಯವು ತೈ ಪೊಂಗಲ್ ಹಬ್ಬವನ್ನು ಆಚರಿಸಲೆಂದು ಜನವರಿ 16ರಂದು ದೇಗುಲದ ದರ್ಶನಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ದೇಗುಲ ಧ್ವಂಸಗೊಳಿಸಿದ್ದ ವಿಚಾರವು ಬೆಳಕಿಗೆ ಬಂದಿತ್ತು. ಜನವರಿ 15ರ ಸಂಜೆ ಸುಮಾರಿಗೆ ಖಲಿಸ್ತಾನ ಬೆಂಬಲಿಗರು ಮೆಲ್ಬೋರ್ನ್ನಲ್ಲಿ ಕಾರು ರ್ಯಾಲಿಯ ಮೂಲಕ ಜನಾಭಿಪ್ರಾಯ ಸಂಗ್ರಹಕ್ಕೆ ಬೆಂಬಲವನ್ನು ಪಡೆಯಲು ಯತ್ನಿಸಿದ್ದರು.
ಜನವರಿ 12ರಂದು ಆಸ್ಟ್ರೇಲಿಯಾದ ಮಿಲ್ ಪಾರ್ಕ್ನಲ್ಲಿರುವ ಸ್ವಾಮಿ ನಾರಾಯಣ ಮಂದಿರದ ಮೇಲೆ ಭಾರತ ವಿರೋಧಿ ಹಾಗೂ ಹಿಂದೂ ಹಿಂದೂ ವಿರೋಧಿ ಬರಹಗಳನ್ನು ಗೀಚಲಾಗಿತ್ತು. ಮಿಲ್ ಪಾರ್ಕ್ ಉಪನಗರದಲ್ಲಿರುವ ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿತ್ತು.





