ರಾಜ್ಯದಲ್ಲಿ 2023 ರ ಚುನಾವಣಿ ಗೆ ಸುಮಾರು ೩ ತಿಂಗಳಿಂದ ಚುನಾವಣಿ ಪ್ರಚಾರ (Election campaign) ಕೆಲಸಗಳಲ್ಲಿ ಪುಲ್ ಆಕ್ಟಿವ್ ಆಗಿ ಚುನಾವಣಿ ಎದರಿಸಲು ನಾವು ಸಿದ್ದ ಎಂದು ಕೈ ,ದಳಪತಿಗಳು ಸಿದ್ದರಾಗಿದ್ದಾರೆ ಅದ್ರೆ ಡಬಲ್ ಇಂಜಿನ್ ಸರ್ಕಾರ (Double engine Govt) ಮಾತ್ರ ಸ್ವಲ ತಡವಾಗಿ ಜನರ ಮುಂದೆ ಬರುತ್ತಿದೆ ಎಂದೇ ಹೇಳುಬಹುದು.
ಪಕ್ಷದ ಮಹತ್ವದ ಚುನಾವಣಾ ಪ್ರಚಾರ ಅಭಿಯಾನವಾಗಿರುವ ವಿಜಯ ಸಂಕಲ್ಪ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಡ್ರಮ್ ಬಾರಿಸುವ ಮೂಲಕ ಅವರು ಯಾತ್ರೆಗೆ ಚಾಲನೆ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, (Chief Minister Basavaraja Bommai,) ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, (Union Minister Shobha Karandlaje,) ಗೃಹಸಚಿವ ಆರಗ ಜ್ಞಾನೇಂದ್ರ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಕಾರ್ಯಕ್ರಮದಲ್ಲಿ ಹಾಜರಿದ್ದರು. ಮೈಸೂರಿಗೆ ವಿಮಾನದಲ್ಲಿ ಬಂದ ನಡ್ಡಾ ಅಲ್ಲಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ನಂತರ ಮಲೆಮಹದೇಶ್ವರನ ದರ್ಶನ ಪಡೆದರು ಬಳಿಕ ಯಾತ್ರೆಗೆ ಚಾಲನೆ ನೀಡಲಾಯಿತು.
ಆದ್ರೆ ವಿಜಯಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಚಿವ ವಿ. ಸೋಮಣ್ಣ ಭಾಗವಹಿಸಲಿಲ್ಲ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅವರು ಕಾರ್ಯಕ್ರಮದಲ್ಲಿ ಭಾಗವಹಿಸದೆ ಅಚ್ಚರಿ ಮೂಡಿಸಿದರು. ವಿಜಯ ಸಂಕಲ್ಪ ರಥ ಯಾತ್ರೆಯ ಈಶ್ವರಪ್ಪ ನೇತೃತ್ವದ ತಂಡದಲ್ಲಿರುವ ವಿ. ಸೋಮಣ್ಣ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ತಾವು ಉಸ್ತುವಾರಿ ಹೊಂದಿರುವ ಜಿಲ್ಲೆಯಲ್ಲಿ ಭಾಗಿಯಾದ ಕಾರ್ಯಕ್ರಮಕ್ಕೆ ಗೈರಾಗಿರುವುದು ಕುತೂಹಲ ಮೂಡಿಸಿದೆ.