ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಾವು ಮಂಡಿಸುತ್ತಿರುವ ಎರಡನೇ ಬಜೆಟ್’ನಲ್ಲಿ ಎಲ್ಲ ಸಮುದಾಯದ ಮತದಾರರನ್ನು ಸೆಳೆಯುವತ್ತ ಗಮನ ಹರಿಸಿದ್ದಾರೆ.
ಅವರು ವಿಧಾನಸಭೆಯಲ್ಲಿ ಮಂಡಿಸುತ್ತಿರುವ ಬಜೆಟ್’ನ ಮುಖ್ಯಾಂಶಗಳ ಮಾಹಿತಿ ಇಲ್ಲಿದೆ.
* ರಾಜ್ಯದಲ್ಲಿ 19 ಕಾರ್ಮಿಕರ ವಿಮಾ ಆಸ್ಪತ್ರೆ ಆರಂಭ.
* ಬಿಪಿಎಲ್ ಕಾರ್ಡ್ ದಾರರಿಗೆ ಮಾಸಿಕ ಅಕ್ಕಿ 5 ರಿಂದ 6 ಕೆ.ಜಿಗೆ ಹೆಚ್ಚಳ.
* ವಸತಿ ಯೋಜನೆಯಡಿ ಘಟಕ ಸಹಾಯಧನ ₹1.5 ಲಕ್ಷದಿಂದ ₹ 2 ಲಕ್ಷಕ್ಕೆ ಹೆಚ್ಚಳ.
* ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಆರಂಭ. ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ದಾಖಲಾಗುವವರಿಗೆ ಶುಲ್ಕ ವಿನಾಯಿತಿ.
* ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಯೋಜನೆ. ತುರ್ತು ಸಂದರ್ಭದಲ್ಲಿ ರೈತರಿಗೆ ಬೀಜ, ಗೊಬ್ಬರ ವಿತರಣೆಗೆ ಸಾಧ್ಯವಾಗುತ್ತದೆ. ರೈತರಿಗೆ ₹10 ಸಾವಿರ ಸಹಾಯಧನ.
* ಸಣ್ವ, ಅತಿ ಸಣ್ಣ ರೈತರಿಗಾಗಿ ₹180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ಕಿಸಾನ್ ಯೋಜನೆ ಘೋಷಣೆ.
* ಗೃಹಿಣಿ ಶಕ್ತಿ ಯೋಜನೆ ಘೋಷಣೆ. ಗೃಹಿಣಿಯರಿಗೆ ತಿಂಗಳಿಗೆ ₹ 500 ಸಹಾಯ ಧನ
* ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
* ರೈತರಿಗೆ ನೀಡಲಾಗುತ್ತಿದ್ದ ₹3 ಲಕ್ಷ ಬಡ್ಡಿ ರಹಿತ ಸಾಲ ₹5 ಲಕ್ಷ ರೂಪಾಯಿಗೆ ಹೆಚ್ಚಳ.
* ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಯೋಜನೆ
* ಮಹಿಳಾ ಸಂಘಟಿತ ಕಾರ್ಮಿಕರಿಗೂ ಉಚಿತ ಬಸ್ ಪಾಸ್, 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್.
* ನೇತಾರ ಸಮ್ಮಾನ ಯೋಜನೆಯಡಿ ಸಹಾಯಧನ 3 ಸಾವಿರ ರೂಪಾಯಿಯಿಂದ 5 ಸಾವಿರಕ್ಕೆ ಏರಿಕೆ.
* ನೇಕಾರರು, ಮೀನುಗಾರರಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ
* 73 ಕರ್ನಾಟಕ ಪಬ್ಲಿಕ್ ಶಾಲೆ ಮತ್ತು 50 ಆದರ್ಶ ವಿದ್ಯಾಲಯ ಸ್ಥಾನೆ
* ಆರ್ಟಿಫಿಷಿಯನ್ ಇಂಟೆಲಿಜೆನ್ಸ ಮೂಲಕ ಟ್ರಾಫಿಕ್ ನಿರ್ವಹಣೆಗೆ ಯೋಜನೆ. 75 ಜಂಕ್ಷನ್ ಅಭಿವೃದ್ಧಿ.
* ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರಿನಲ್ಲಿ ₹6,000 ಕೋಟಿ ಕಾಮಗಾರಿಗಳಿಗೆ ಒತ್ತು.
* ತಾಯಿ ಮತ್ತು ಮನೆಗೆ ತಲುಪಿಸಲು ನಗು–ಮಗು ವಾಹನ.
* ಗ್ರಾಮ ಪಂಚಾಯ್ತಿ ಸದಸ್ಯರು, ಅತಿಥಿ ಶಿಕ್ಷಕರು, ಗ್ರಂಥಾಲಯ ಸಿಬ್ಬಂದಿ, ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಸಹಾಯಕರ ಗೌರವ ಧನ ₹1000 ಹೆಚ್ಚಳ.