ಭಾರತ-ಚೀನಾ ಉದ್ವಿಗ್ನತೆಗಳು
ಭಾರತ ಚೀನಾ ನಡುವಿನ 2020ರ ರಕ್ತಸಿಕ್ತ ಗಡಿಘರ್ಷಣೆಯ ನಂತರ ಇತ್ತೀಚೆಗಷ್ಟೇ ಸಾಮಾನ್ಯ ಸಂಬಂಧಗಳಿಗೆ ಎರಡೂ ದೇಶಗಳು ತೆರೆದುಕೊಂಡಿವೆ. ಆದರೆ ಇದಕ್ಕೆ ವಿರುದ್ಧವಾಗಿ ಎರಡೂ ದೇಶಗಳು ತಮ್ಮ ಗಡಿಗಳಲ್ಲಿ ಸೇನೆಯ ನಿಯೋಜನೆಯನ್ನು ಹೆಚ್ಚಿಸಿವೆ. 2020ಕ್ಕೂ ಮೊದಲು ಎರಡೂ ದೇಶಗಳ ಸಣ್ಣ ಪ್ರಮಾಣದ ಸೈನಿಕರು ಮಾತ್ರ ಗಡಿಯಲ್ಲಿ ಗಸ್ತು ತಿರುಗುತ್ತಿದ್ದರು. ಈ ಸೇನಾ ಜಮಾವನೆಯು ಗಂಭೀರ ಮಿಲಿಟರಿ ಎನ್ಕೌಂಟರ್ ಆಗಿ ಬದಲಾಗುತ್ತದೆ ಎಂದು ಹೇಳಲಾಗದಿದ್ದರೂ ಇದು ಅಪಾಯಕಾರಿಯೇ.
ಯುದ್ಧ ಮತ್ತು ಪರಮಾಣು ಬಿಕ್ಕಟ್ಟು ಬಹುದೂರದಲ್ಲಿದ್ದರೂ ಸಹ ಎರಡೂ ಕಡೆಗಳಲ್ಲಿ ಹೆಚ್ಚುತ್ತಿರುವ ಸೇನೆಯ ನಿಯೋಜನೆಯು ಹೆಚ್ಚು ಹಿಂಸಾತ್ಮಕವಾದ ಭವಿಷ್ಯವನ್ನೇ ಸೂಚಿಸುತ್ತದೆ. ಜೊತೆಗೆ ಅರಬ್ಬೀ ಸಮುದ್ರದಲ್ಲಿ ಹೆಚ್ಚುತ್ತಿರುವ ಚೀನಾದ ನೌಕಾಪಡೆಯ ಬಲ ಭಾರತದಲ್ಲಿ ಅಭದ್ರತೆ ಮೂಡಿಸಿ ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಅಮೆರಿಕ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಮಾಡುತ್ತಿದೆ.
ಜೊತೆಗೆ ಚೀನಾದ ಬೆಳೆಯುತ್ತಿರುವ ಕ್ಷಿಪಣಿ, ಪರಮಾಣು ಮತ್ತು ಕಣ್ಗಾವಲು ಸಾಮರ್ಥ್ಯಗಳು ಭಾರತೀಯ ಪರಮಾಣು ರಕ್ಷಣಾ ಕ್ಷೇತ್ರಕ್ಕೆ ದೊಡ್ಡ ಬೆದರಿಕೆಯಂತೆ ತೋರುತ್ತದೆ. ಚೀನಾದ ತಂತ್ರಕ್ಕೆ ಪ್ರತಿ ತಂತ್ರವಾಗಿ ಭಾರತ ಚೀನಾದ ಆಕ್ರಮಣವನ್ನು ಎದುರಿಸುವ ಸಾಮರ್ಥ್ಯವಿರುವ ಪರಮಾಣು ಜಲಾಂತರ್ಗಾಮಿಗಳನ್ನೂ ಮತ್ತು ಪರಮಾಣು ಜಲಾಂತರ್ಗಾಮಿಗಳನ್ನು ನಾಶಪಡಿಸುವ ಅಸ್ತ್ರಗಳನ್ನು ತಯಾರಿಸಬಹದು.
ಅನಾರೋಗ್ಯಕರ ಪರಮಾಣು ಸ್ಪರ್ಧೆ
ಈ ರೀತಿಯ ಬೆಳವಣಿಗೆಗಳು ಭದ್ರತಾ ನಿಯಮಗಳಿಗೆ ಗಂಭೀರ ಬೆದರಿಕೆ ಒಡ್ಡುವುದು ಮಾತ್ರವಲ್ಲದೆ ಈ ಪ್ರದೇಶದಲ್ಲಿ ಇನ್ನೊಂದು ದೇಶದ ಮೇಲಿನ ಅಭದ್ರತೆಯ ಕಾರಣದಿಂದ ತಮ್ಮ ತಮ್ಮ ದೇಶಗಳ ಶಸ್ತ್ರಾಸ್ತ್ರಗಳನ್ನು ಹೆಚ್ಚು ಮಾಡುವಂಥ ಅಪಾಯವೂ ತಲೆದೋರುತ್ತದೆ. ಚೀನಾದ ಮೇಲಿನ ಅಭದ್ರತೆಯಿಂದ ಭಾರತ, ಭಾರತದ ಮೇಲಿನ ಅಭದ್ರತೆಯಿಂದ ಪಾಕಿಸ್ತಾನ… ಈ ರೀತಿ ದಕ್ಷಿಣ ಏಷ್ಯಾ ನಿಧಾನವಾಗಿ ಅನಾರೋಗ್ಯಕರ ಪರಮಾಣು ಸ್ಪರ್ಧೆಗೆ ಬಿದ್ದಂತಾಗುತ್ತದೆ. ಅಲ್ಲದೆ ಸಾಮರ್ಥ್ಯಗಳು ಮತ್ತು ವಿತರಣಾ ವ್ಯವಸ್ಥೆಗಳಲ್ಲಿ ಹೊಸ ಹೂಡಿಕೆಗಳ ಅಸಮ ಅಲೆಗಳು ಅಪಾಯಕಾರಿ ಮತ್ತು ಅನಿರೀಕ್ಷಿತ ರೀತಿಯಲ್ಲಿ ಅಪಾಯ ಮತ್ತು ಸ್ಥಿರತೆಯ ಗ್ರಹಿಕೆಗಳನ್ನು ಬದಲಾಯಿಸುತ್ತವೆ.
ಅಮೆರಿಕದ ನೀರಿ ನಿರೂಪಕರು ಕಳೆದ ಬಾರಿಯ ತಮ್ಮ ವರದಿಯಲ್ಲೇ ದಕ್ಷಿಣ ಏಷ್ಯಾದ ಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅದಕ್ಕೂ ಹಿಂದಿನ ವರದಿ ಹೇಳಿರುವಂತೆ ವಾಷಿಂಗ್ಟನ್ ಒಂದಕ್ಕೇ ದಕ್ಷಿಣ ಏಷ್ಯಾದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ ಅದು ಈ ಸಮಸ್ಯೆಯಿಂದ ದೂರ ಇರಲು ಮತ್ತು ಅದರ ಗಂಭೀರತೆಯನ್ನು ಕೀಳಂದಾಜಿಸಲೂ ಸಾಧ್ಯವಿಲ್ಲ.
ವೇಸ್. ಡಾ ಹೇಳಿದರು, ಯುಎಸ್ ಪಾಲಿಸಿಕರ್ಸ್ ಕಳೆದ ವಸಂತ ಋತುವಿನ ತನ್ನ ವರದಿಯನ್ನು ಪ್ರಾರಂಭಿಸಿದಾಗ ದಕ್ಷಿಣ ಏಷ್ಯಾದಲ್ಲಿ ಕಾರ್ಯತಂತ್ರದ ಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಉಲ್ಬಣಕ್ಕೆ ಹಳೆಯ ಟ್ರಿಗ್ಗರ್ಗಳು ಭಾರತ ವಿರುದ್ಧ ಭಯೋತ್ಪಾದಕ ದಾಳಿಯಂತೆ, ಇರುತ್ತವೆ, ಹೊಸ ಬಿರುಗಾಳಿಗಳು ಕುದಿಸುತ್ತಿವೆ. ಹಿಂದಿನ ವರದಿ ವಿವರಿಸಿದಂತೆ, ವಾಷಿಂಗ್ಟನ್ ದಕ್ಷಿಣದ ಏಷ್ಯಾದ ತೊಂದರೆಗಳನ್ನು ಮಾತ್ರ ಪರಿಹರಿಸಲು ಸಾಧ್ಯವಿಲ್ಲ, ಆದರೆ ಅದು ಪ್ರತ್ಯೇಕವಾಗಿ ನಿಲ್ಲುವ ಅಥವಾ ಅವರ ಗಂಭೀರತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.
ಮೂಲ: Daniel Markey, thewire news
(ಡೇನಿಯಲ್ ಮಾರ್ಕಿ ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ನಲ್ಲಿನ ದಕ್ಷಿಣ ಏಷ್ಯಾ ಕಾರ್ಯಕ್ರಮಗಳ ಹಿರಿಯ ಸಲಹೆಗಾರ.)