ಕರ್ನಾಟಕ ಸರ್ಕಾರ 13 ನೀರಾವರಿ ಯೋಜನೆಗಳಿಗೆ ಒಪ್ಪಿಗೆ ನೀಡಿದೆ. 5701.38 ಕೋಟಿ ವೆಚ್ಚದ ನೀರಾವರಿ ಯೋಜನೆಗಳನ್ನು ಜಾರಿ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮುಂಬೈ ಕರ್ನಾಟಕದ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಉತ್ತರ ಕನ್ನಡ ಹಾವೇರಿ ಜಿಲ್ಲೆಗಳನ್ನು ಒಳಗೊಂಡಂತೆ ಓಈ ಯೋಜನೆ ಜಾರಿ ಆಗಲಿದೆ.
ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಹಿತಿಯಂತೆ ಮಲ್ಲಿಗೆರೆ -ಹಲಗಲಿ ಏತ ನೀರಾವರಿ, ಯೋಜನೆಗೆ 197 ಕೋಟಿ ರೂಪಾಯಿ ನಿಗದಿ ಮಾಡಿದ್ದು, 2 ಹಂತದಲ್ಲಿ ಕಾಮಗಾರಿ ಮಾಡಲಾಗುತ್ತದೆ. ಬಾಗಲಕೋಟೆ ಜಿಲ್ಲೆ ಮುಧೋಳ ಹಾಗು ಬೀಳಗಿ ಕ್ಷೇತ್ರದ 3535 ಹೆಕ್ಟೇರು ಪ್ರದೇಶಕ್ಕೆ ಕೃಷ್ಣ ನದಿಯಿಂದ ನೀರು ಪೂರೂಕೆ ಮಾಡಲಾಗುತ್ತದೆ.
1486.41 ಕೋಟಿ ವೆಚ್ಚದಲ್ಲಿ ಅಮ್ಮಾಜೇಶ್ವರಿ (ಕೊತ್ತಲಗಿ) ಏತ ನೀರಾವರಿ ಯೋಜನೆಗೆ ಒಪ್ಪಿಗೆ ಸಿಕ್ಕಿಗೆ ಸಿಕ್ಕಿದೆ. ಈ ಯೋಜನೆಯಿಂದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ 9,950 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತದೆ. ಈ ಯೋಜನೆಯನ್ನು ಎರಡು ಹಂತದಲ್ಲಿ ಪೂರೈಸಲು ನಿರ್ಧಾರ ಮಾಡಿದ್ದು, ಮೊದಲ ಹಂತದ 325.31 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ.
ಇಷ್ಟು ಮಾತ್ರವಲ್ಲದೆ ಬೆಳಗಾವಿ ಜಿಲ್ಲೆ ಅರಭಾವಿಯ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೂ 323.87 ಕೋಟಿ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಚಿಕ್ಕೋಡಿ ತಾಲೂಕಿನ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ 382.30 ಕೋಟಿ, ಕಿತ್ತೂರು ವಿಧಾನಸಭಾ ಕ್ಷೇತ್ರದ ಶ್ರೀ ಚನ್ನವೃಷುಭೇಂದ್ರ ಏತ ನೀರಾವರಿಗೆ 520 ಕೋಟಿ, ಸೌದತಿಯ ತಾಲೂಕಿನ ಶ್ರೀ ಶೆಟ್ಟಿಗೇರಿ ಏತನೀರಾವರಿ ಯೋಜನೆಗೆ 546 ಕೋಟಿ, ಬೀದರ್ ಜಿಲ್ಲೆ ಹೌರಾದ್ ತಾಲೂಕಿನ 36 ಕೆರೆಗಳನ್ನು ತುಂಬಿಸುವ ಯೋಜನೆಗೆ 560.7 ಕೋಟಿ, ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮೆಹಕರ್ ಏತ ನೀರಾವರಿ ಯೋಜನೆಗೆ 762 ಕೋಟಿ, ಕಲಬುರಗಿ ಕುಡಿಯುವ ನೀರು ಯೋಜನೆಗೆ 365 ಕೋಟಿ, ಧಾರವಾಡ ಲೋಕಸಭಾ ಕ್ಷೇತ್ರದ ಅಮೃತ್ ಸರೋವರ್ ಕುಡಿಯುವ ನೀರು ಯೋಜನೆಗೆ 30 ಕೋಟಿ, ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ 100 ಕೆರೆಗಳನ್ನು ತುಂಬಿಸುವ ಯೋಜನೆಗೆ 274.50 ಕೋಟಿ, ಕಲಬುರಗಿ ಜಿಲ್ಲೆ ಅಳಂದ ತಾಲೂಕಿನಲ್ಲಿ 8 ಕೆರೆಗಳನ್ನು ತುಂಬಿಸುವ ಯೋಜನೆಗೆ 49.5 ಕೋಟಿ, ಚಿಂಚೋಳಿ ತಾಲೂಕಿನ ಇನಾಪುರ ಲಿಫ್ಟ್ ಇರಿಗೇಷನ್ ಯೋಜನೆಗೆ 204.1 ಕೋಟಿ ನೀಡಲಾಗಿದೆ.
ರಾಜ್ಯ ಸಚಿವ ಸಂಪುಟ ಕೇಂದ್ರ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ 475 ಕೋಟಿ ರೂಪಾಯಿಯನ್ನು ಬೆಳಗಾವಿಯ ಜಿಲ್ಲೆಗೆ ನೀಡಲು ನಿರ್ಧಾರ ಮಾಡಲಾಗಿದೆ. ಜೊತೆಗೆ 100 ಕೋಟಿ ರೂಪಾಯಿ ಹಣವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ಪೀಠೋಪಕರ ನೀಡಲು ಒಪ್ಪಿಗೆ ನೀಡಲಾಗಿದೆ.