• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಬಿಜೆಪಿಯ ಮಾಸ್ಟರ್ ಪ್ಲ್ಯಾನ್ ಒಂದೇ ಗಂಟೆಯಲ್ಲಿ ಅದಲು ಬದಲಾಗಿದ್ದು ಹೇಗೆ..?

ಪ್ರತಿಧ್ವನಿ by ಪ್ರತಿಧ್ವನಿ
January 15, 2023
in ರಾಜಕೀಯ
0
ಬಿಜೆಪಿಯ ಮಾಸ್ಟರ್ ಪ್ಲ್ಯಾನ್ ಒಂದೇ ಗಂಟೆಯಲ್ಲಿ ಅದಲು ಬದಲಾಗಿದ್ದು ಹೇಗೆ..?
Share on WhatsAppShare on FacebookShare on Telegram

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಮ್ಮೆಯೂ ಜನಾದೇಶದಿಂದ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲೂ ಆಪರೇಷನ್ ಕಮಲದ ಮೂಲಕವೇ ಬಿಜೆಪಿ ನಾಯಕರು ರಾಜ್ಯದಲ್ಲಿ‌ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಈ ಬಾರಿಯೂ‌ ಕೂಡ ಬಿಜೆಪಿ ಸರ್ಕಾರ ರಚನೆ ಆಗುತ್ತೆ, ಆದರೆ ಜನರಿಂದ ಬಿಜೆಪಿ ಆಯ್ಕೆಯಾಗುವುದಿಲ್ಲ. ಸಂಕ್ರಾಂತಿ ಬಳಿಕ ಚುನಾವಣೆಯ ಮೊದಲೇ ನಾವು ಆಪರೇಷನ್ ಕಮಲ ಮಾಡುತ್ತೇವೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿ ಹಬ್ಬದ ದಿನ ತನ್ನ ಕಾರ್ಯಕರ್ತರ ಜೊತೆಗೆ ಮಾತನಾಡಿರುವ ಆಡಿಯೋ ಹೊರ ಬಿದ್ದಿದ್ದು, ಮುಂದಿನ ಚುನಾವಣೆಯಲ್ಲಿ  ಯಾರ್ಯಾರು ಸೋಲುತ್ತಾರೆ..? ಯಾರ್ಯಾರು ಮುಂದೆ ಬಿಜೆಪಿ ಸೇರಲಿದ್ದಾರೆ ಎನ್ನುವ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಅಮಿತ್ ಷಾ ರೌಡಿ ಎಂದಿದ್ದಾರೆ.

ADVERTISEMENT

ಜೆಡಿಎಸ್‌ನಲ್ಲಿ ಘಟಾನುಘಟಿ ನಾಯಕರು ಸೋಲ್ತಾರೆ..!

ಸ್ವತಃ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ನಾನು ಸೋಲುತ್ತೇನೆ ಎಂದಿರುವ ಸಿ.ಪಿ ಯೋಗೇಶ್ವರ್, ಜೆಡಿಎಸ್‌ನ ಪ್ರಮುಖ ನಾಯಕರು ಈ ಚುನಾವಣೆಯಲ್ಲಿ ಸೋಲನ್ನಪ್ಪುತ್ತಾರೆ ಎನ್ನುವ ಭವಿಷ್ಯ ಹೇಳಿದ್ದಾರೆ. ಜೆಡಿಎಸ್‌ನ‌ ಹಾಲಿ 20 ಜನ ಶಾಸಕರು ಸೋಲಲಿದ್ದಾರೆ ಎಂದಿರುವ ಯೋಗೇಶ್ವರ್,  ಮದ್ದೂರು ಡಿ.ಸಿ ತಮ್ಮಣ್ಣ, ಮಳವಳ್ಳಿ ಅನ್ನದಾನಿ, ಕೆ.ಆರ್ ನಗರ ಸಾರಾ ಮಹೇಶ್, ನೆಲಮಂಗಲ ಶ್ರೀನಿವಾಸ ಮೂರ್ತಿ, ಗುಬ್ಬಿ ಶ್ರೀನಿವಾಸ್, ಅರಸೀಕೆರೆ ಶಿವಲಿಂಗೇಗೌಡ, ಅರಕಲಗೂಡು ಎ.ಟಿ ರಾಮಸ್ವಾಮಿ, ಬೇಲೂರು ಲಿಂಗೇಶ್, ಸಕಲೇಶಪುರ ಹೆಚ್.ಕೆ ಕುಮಾರಸ್ವಾಮಿ ಸೋಲುವುದು ಖಚಿತ ಎಂದಿದ್ದಾರೆ ಯೋಗೇಶ್ವರ್. ಜೊತೆಗೆ ರಾಮನಗರ ಮೂರು ಸ್ಥಾನಗಳ ಪೈಕಿ ಜೆಡಿಎಸ್ ಒಂದನ್ನು ಕಳೆದುಕೊಳ್ಳಲಿದೆ ಎಂದಿದ್ದಾರೆ.

ಕೋಲಾರ ಭಾಗದಲ್ಲಿ ಕೆ.ಹೆಚ್ ಮುನಿಯಪ್ಪ ಕೇಸರಿ ಪಾಳಯ ಸೇರ್ತಾರಾ..?

ಕೋಲಾರದಲ್ಲಿ ಚುನಾವಣಾ ಅಖಾಡಕ್ಕೆ ಇಳಿಯಲು ತಯಾರಿ ಮಾಡಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಕೋಲಾರದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ ಅವರ ಅಸಮಾಧಾನ ತಣಿಸುವ ಕೆಲಸ ಮಾಡಿದ್ದರು. ಮೊನ್ನೆ ಮೊನ್ನೆಯಷ್ಟೆ ಕೋಲಾರದಲ್ಲಿ ನಡೆದ ಸಮಾವೇಶದಲ್ಲಿ ಮುನಿಯಪ್ಪ ಜೊತೆಗೆ ವೇದಿಕೆಗೆ ಆಗಮಿಸಿದ್ದ ಸಿದ್ದರಾಮಯ್ಯ, ದಲಿತ ಸಮುದಾಯದ ಮತಗಳು ಕೈ ಬಿಟ್ಟು ಹೋಗದಂತೆ ತಂತ್ರಗಾರಿಕೆ ಮಾಡಿದ್ದಾರೆ. ಈ‌ ನಡುವೆ ಯೋಗೇಶ್ವರ್ ಸಿಡಿಸಿರುವ ಮಾತು ಸಿದ್ದರಾಮಯ್ಯ ಅವರಿಗೂ ಆತಂಕ ಉಂಟುಮಾಡುತ್ತದೆ. ಕೋಲಾರ ಭಾಗದ ಹಿರಿಯ ದಲಿತ ನಾಯಕರು ಬಿಜೆಪಿ ಸೇರ್ಪಡೆ ಆಗುತ್ತಾರೆ. ಕೇಂದ್ರದಲ್ಲಿ ಮಂತ್ರಿ ಆಗಿದ್ದವರು ಬಿಜೆಪಿ‌ ಸೇರುವುದರಿಂದ ದೊಡ್ಡ ಮಟ್ಟದ ಬಲ ಬರಲಿದೆ ಎಂದಿದ್ದಾರೆ. ಜೊತೆಗೆ ಚನ್ನಪಟ್ಟಣದಲ್ಲಿ ನಾನು ಕುಮಾರಸ್ವಾಮಿ ಎದುರಿಸುವ ರೀತಿಯಲ್ಲೇ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಅಶ್ವತ್ಥ ನಾರಾಯಣ ಹಾಗು ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ಸ್ಪರ್ಧೆ ಮಾಡುವ ಮೂಲಕ ವಿರೋಧಿಗಳನ್ನು ಕಟ್ಟಿ ಹಾಕಬೇಕಿದೆ ಎಂದಿದ್ದಾರೆ. ಜೊತೆಗೆ ಅಮಿತ್ ಷಾ ರೌಡಿ ರೀತಿ ವರ್ತಿಸುತ್ತಾರೆ, ಯಾರು ಯಾರೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವ ಕೆಲಸ ಮಾಡ್ತಿದ್ದಾರೆ ಎನ್ನುವುದನ್ನು ನೇರವಾಗಿ ಹೇಳಿದ್ದಾರೆ ಎಂದಿದ್ದಾರೆ. ಇಷ್ಟೆಲ್ಲಾ ಆಡಿಯೋ ವೈರಲ್ ಆಗ್ತಿದ್ದ ಹಾಗೆ ಸಿಎಂ ಬಸವರಾಜ ಬೊಮ್ಮಾಯಿ ಯೋಗೇಶ್ವರ್‌ಗೆ ಬುಲಾವ್ ಕೊಟ್ಟಿದ್ದರು.

ಆಡಿಯೋ ನನ್ನದಲ್ಲ ಎಂದ ಮಾಜಿ ಸಚಿವ ಸಿ ಪಿ ಯೋಗೇಶ್ವರ್..!

ಬಿಜೆಪಿ ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಯೋಗೇಶ್ವರ್ ಆಡಿಯೋ ಮೂಲಕ‌ ಬಯಲಾಗ್ತಿದ್ದ ಹಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯೋಗೇಶ್ವರ್‌ಗೆ ಕರೆ ಮಾಡಿದ್ರು. ಸಿಎಂ ಭೇಟಿ ಮಾಡಿಕೊಂಡು ಹೊರಕ್ಕೆ ಬಂದ ಯೋಗೇಶ್ವರ್, ಆಡಿಯೋ ನನ್ನದಲ್ಲ. ನನ್ನ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಬಿಡುಗಡೆ ಮಾಡಿದ್ದಾರೆ. ನನಗೆ ವಿಶ್ವಾಸವಿದೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಮಾತನಾಡಿದ್ದು, ಆಡಿಯೋ ವೀಡಿಯೋ ಬಗ್ಗೆ ಯಾವುದೇ ಸ್ಪಷ್ಟನೆ ಕೊಡುವುದಿಲ್ಲ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ರಾಜ್ಯದ ಜನರು ಬಿಜೆಪಿಗೆ ಅಧಿಕಾರ ಕೊಡುವುದಿಲ್ಲ ಎನ್ನುವ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ ಶೀಘ್ರದಲ್ಲೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಚ್ಚಿನ ಚರ್ಚೆ ಆಗದಂತೆ ಎಚ್ಚರಿಕೆ ನಡೆ ಅನುಸರಿಸಿದ್ದಾರೆ. ‌

Previous Post

ನಂದಿನಿಯ ತಲೆಯ ಮೇಲೆ ತುಪ್ಪ ಸವರಲು ಬಂದಿರುವ ಅಮುಲ್

Next Post

ಮಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಗೆ ಬರೆ..! ಅದಾನಿ ಕಂಪನಿಗೆ ಗುಡ್​ನ್ಯೂಸ್​.. 

Related Posts

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!
Top Story

ಸಿದ್ದರಾಮಯ್ಯನವ್ರೇ ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಮೈಸೂರು ಜಿಲ್ಲೆಗೆ ಮಾತ್ರನೋ : ಶಾಸಕ ಕಂದಕೂರ್‌ ಆಕ್ರೋಶ..!

by ಪ್ರತಿಧ್ವನಿ
April 20, 2026
0

ಬೆಂಗಳೂರು : ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು‌ ಕಳೆದ ಮಾರ್ಚ್‌ 29ರಂದು ಜಲಸಮಾಧಿಯಾಗಿರುವ ಘಟನೆಗೆ...

Read moreDetails
ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ  : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

ಹೊಸ ಪಕ್ಷವೊಂದು MGR ರೀತಿ ಆಗೋಕೆ ಹೊರಟಿದೆ, ಅದೆಲ್ಲ ಸಿನಿಮಾದಲ್ಲಿ ಕೈ ಬೀಸಲಷ್ಟೇ ಇಲ್ಲಿ ನಡೆಯಲ್ಲ : ಥಳಪತಿ ವಿಜಯ್‌ ವಿರುದ್ಧ ಡಿಕೆ ಶಿವಕುಮಾರ್‌ ವಾಗ್ದಾಳಿ

April 20, 2026
“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

“ನಮ್ಮ ಸರ್ಕಾರ ಬುದ್ಧ, ಬಸವ, ಅಂಬೇಡ್ಕರ್ ಕಂಡ ಕನಸಿನ ಸಮಾಜ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ”

April 20, 2026
ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

ಹ್ಯಾಕರ್‌ ಶ್ರೀಕಿ ನಂಟು, ನಲಪ್ಪಾಡ್‌ ಬುಡಕ್ಕೆ ಬಿಟ್‌ ಕಾಯಿನ್‌ ಬೆಂಕಿ : ಇಡಿ ರೇಡ್‌ಗೆ ಸಿಎಂ ಏನಂದ್ರು..?

April 20, 2026
ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

ಪ್ರಧಾನಿ ಕಿವಿಯಲ್ಲಿ ಏನು ಹೇಳಿದೆ ಅಂದ್ರೆ.. : ಮೋದಿ ಜೊತೆಗಿನ ಮಾತುಕತೆ ಗುಟ್ಟು ಬಿಚ್ಚಿಟ್ಟ ಸಿಎಂ..

April 20, 2026
Next Post
ಮಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಗೆ ಬರೆ..! ಅದಾನಿ ಕಂಪನಿಗೆ ಗುಡ್​ನ್ಯೂಸ್​.. 

ಮಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಗೆ ಬರೆ..! ಅದಾನಿ ಕಂಪನಿಗೆ ಗುಡ್​ನ್ಯೂಸ್​.. 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada