ಮಂಗಳೂರು : ರಾಜ್ಯದಲ್ಲಿ ರಸ್ತೆ ಗುಂಡಿಗಳು, ಅಸಮರ್ಪಕ ಚರಂಡಿ ನಿರ್ಮಾಣಗಳಿಂದ ಬಲಿಯಾದವರು ಅದೇಷ್ಟೋ ಮಂದಿ. ಇಂದಿಗೂ ಮಳೆಗಾಲ ಶುರುವಾದರೇ ರಸ್ತೆ ಗುಂಡಿಗಳಿಗೆ ಒಬ್ಬರಲ್ಲ ಒಬ್ಬರು ಬಲಿಯಾಗುತ್ತಲೇ ಇದ್ದಾರೆ. ರಸ್ತೆ ಗುಂಡಿಗಳು, ತೆರೆದ ಚರಂಡಿಗಳು ದೊಡ್ಡ ಸಮಸ್ಯೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಮ್ಮ ಕಾರ್ಯಕರ್ತರಿಗೆ ಈ ಸಮಸ್ಯೆಗಳನ್ನು ಬಿಟ್ಟು ಲವ್ ಜಿಹಾದ್ ಬಗ್ಗೆ ಹೋರಾಡುವಂತೆ ಕರೆ ನೀಡಿದ್ದಾರೆ.
![](https://pratidhvani.com/wp-content/uploads/2023/01/images.jpg)
ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಲೋಕಸಭಾ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ವಿವಾದಿತ ಹೇಳಿಕೆ ನೀಡಿದ್ದು, ‘ ಪಕ್ಷದ ಕಾರ್ಯಕರ್ತರು ಲವ್ ಜಿಹಾದ್ ವಿಷಯದ ವಿರುದ್ಧ ಹೋರಾಡಬೇಕೇ ಹೊರತು ರಸ್ತೆ ಮತ್ತು ಚರಂಡಿ ಸಮಸ್ಯೆಗಳ ಬಗ್ಗೆ ಅಲ್ಲ’ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
ರಸ್ತೆ, ಮೋರಿ ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ. ವಿಧಾನಸೌಧದೊಳಗೆ ವೇದವ್ಯಾಸರು ಹೋದಾಗ ಕೈ ಎತ್ತಲಿಲ್ಲ ಎಂದು ಚರ್ಚೆ ಮಾಡಬೇಡಿ. ನಳಿನ್ ಕುಮಾರ್ ಅವರಿಗೆ ವಿಷಯ ಎತ್ತುವ ಹಕ್ಕು ಇಲ್ಲ ಎಂದು ಹೇಳಬೇಡಿ. ನಳಿನ್ ಕುಮಾರ್ ಕಟೀಲ್ ಅವರ ಹಕ್ಕುಗಳಿಂದ ನಿಮಗೆ ಬಂಗಾರ ಸಿಗುವುದಿಲ್ಲ. ನೀವು ನಿಮ್ಮ ಮಕ್ಕಳ ಬದುಕಿನ ಪ್ರರ್ಶನೆ ಲವ್ ಜಿಹಾದ್. ಅದನ್ನು ನಿಲ್ಲಿಸಬೇಕಿದ್ದರೇ ಭಾರತೀಯ ಜನತಾ ಪಕ್ಷ ಬೇಕು. ಲವ್ ಜಿಹಾದ್ ತೊಲಗಲು ಭಾರತೀಯ ಜನತಾ ಪಕ್ಷ ಬೇಕು” ಎಂದು ಆಕ್ರೋಶ ಭರಿತ ಭಾಷಣ ಮಾಡಿದ್ದಾರೆ.