• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಚುನಾವಣಾ ಚಾಣಕ್ಯನಿಂದ ಹಳೇ ಮೈಸೂರು ಟಾರ್ಗೆಟ್​ ಯಾಕೆ ? ರಾತ್ರಿ ಸಭೆಯಲ್ಲಿ ಏನಾಯ್ತು

ಪ್ರತಿಧ್ವನಿ by ಪ್ರತಿಧ್ವನಿ
December 31, 2022
in ಕರ್ನಾಟಕ, ರಾಜಕೀಯ
0
ಚುನಾವಣಾ ಚಾಣಕ್ಯನಿಂದ ಹಳೇ ಮೈಸೂರು ಟಾರ್ಗೆಟ್​ ಯಾಕೆ ? ರಾತ್ರಿ ಸಭೆಯಲ್ಲಿ ಏನಾಯ್ತು
Share on WhatsAppShare on FacebookShare on Telegram

ದೇಶದಲ್ಲಿ ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಅಮಿತ್​ ಷಾ ಅವರನ್ನು ಚುನಾವಣಾ ಚಾಣಕ್ಯ ಎಂದೇ ಕರೆಯುತ್ತದೆ. ಅದರಂತೆ ಚುನಾವಣಾ ಪೂರ್ವದಲ್ಲಿ ಅಮಿತ್​ ಷಾ, ರಣತಂತ್ರಗಳನ್ನು ರೂಪಿಸುವುದು, ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಮತಗಳನ್ನು ಸೆಳೆದು ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಒಂದು ರೀತಿಯ ಪಂಟರ್​. ಇದೀಗ ಅಮಿತ್​ ಷಾ ಕಣ್ಣು ನಿದ್ದಿರುವುದು ಹಳೇ ಮೈಸೂರು ಭಾಗದ ಮೇಲೆ. ಭಾರತದ ಮೇಲೆ ಅಲೆಕ್ಸಾಂಡರ್​ ಸಾಕಷ್ಟು ಬಾರಿ ದಂಡೆತ್ತಿ ಬಂದರು ಹಿಮಾಲಯವನ್ನು ದಾಟಿ ಒಳಕ್ಕೆ ಬರಲು ಸಾಧ್ಯವೇ ಆಗಲಿಲ್ಲ ಎನ್ನುವ ಮಾತಿನಂತೆ ಕೇಸರಿ ಸೇನೆ ಹಳೇ ಮೈಸೂರು ಭಾಗದಲ್ಲಿ ಅಟ್ಟಹಾಸ ಮೆರೆಯುವುದಕ್ಕೆ ಸಾಧ್ಯವೇ ಆಗಿಲ್ಲ. ಕೇಸರಿ ಸೇನೆಗೆ ಅಡ್ಡಿಯಾಗಿ ನಿಂತಿರುವುದು ಕಾಂಗ್ರೆಸ್​ ಹಾಗು ಜೆಡಿಎಸ್​​ ಎನ್ನುವ ಎರಡು ಮಹಾ ಕೋಟೆ. ಆದರೆ ಈ ಬಾರಿ ಜೋಡಿ ಕೋಟೆಗೆ ಲಗ್ಗೆ ಹಾಕಲು ಬಿಜೆಪಿ ಅಮಿತ್​ ಷಾ ಅವರನ್ನೇ ಕರೆತಂದಿದ್ದು, ಕೋಟೆ ಛಿದ್ರ ಮಾಡುವ ಮುನ್ಸೂಚನೆ ಸಿಕ್ಕಿದೆ.

ADVERTISEMENT

ರಾತ್ರಿ ರಹಸ್ಯ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು..!

ಹಳೇ ಮೈಸೂರು ಭಾಗದಲ್ಲಿ ಈ ಭಾರಿ ಯಶಸ್ಸು ಸಾಧಿಸಬೇಕು. ಜೆಡಿಎಸ್​ ಹಾಗು ಕಾಂಗ್ರೆಸ್​ ಜೋಡಿ ಕೋಟೆಗೆ ಲಗ್ಗೆ ಹಾಕಬೇಕು ಅನ್ನೋದು ಕೇಸರಿ ಕಲಿಗಳ ಕಸರತ್ತು. ಅದೇ ಕಾರಣಕ್ಕೆ ಮಂಡ್ಯದಲ್ಲಿ ಬೃಹತ್​​ ಸಾರ್ವಜನಿಕ ಸಭೆ ಮಾಡುವ ಮೂಲಕ ಈ ಬಾರಿ ತ್ರಿಕೋನ ಸ್ಪರ್ಧೆಗೆ ರೆಡಿ ಇರುವಂತೆ ಕಾಂಗ್ರೆಸ್​ ಹಾಗು ಜೆಡಿಎಸ್​ಗೆ ಸಂದೇಶ ಕಳುಹಿಸಿ ಆಗಿದೆ. ಆ ಬಳಿಕ ಸಂಜೆ ಬೆಂಗಳೂರಿನಲ್ಲಿ ಹಳೇ ಮೈಸೂರು ಭಾಗದ ನಾಯಕರ ಜೊತೆಗೆ ಮಹತ್ವದ ಸಭೆ ಮಾಡಲಾಯ್ತು. ಈ ಸಭೆಯಲ್ಲಿ ಚುನಾವಣಾ ಚಾಣಕ್ಯ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದ್ದು, ಬಿಜೆಪಿ ನಡೆಸಿರುವ ಕಾಯಿ ಯಾರನ್ನು ಹೊಡೆದುಕೊಂಡು ಹೋಗುತ್ತೆ ಎನ್ನುವ ಕುತೂಹಲ ಮೂಡಿಸಿದೆ. ಏನು ಮಾಡ್ತೀರಿ ಅನ್ನೋದು ನನಗೆ ಗೊತ್ತಿಲ್ಲ. ಹಳೆ ಮೈಸೂರು ಭಾಗದಲ್ಲಿ 40ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎನ್ನುವ ಟಾರ್ಗೆಟ್​ ಫಿಕ್ಸ್​ ಆಗಿದೆ. ಅದಕ್ಕೆ ಬೇಕಾಗಿರುವ ತಂತ್ರಗಾರಿಕೆಯೂ ರೆಡಿಯಾಗಿದೆ ಎನ್ನಲಾಗ್ತಿದೆ.

ಹಳೇ ಮೈಸೂರು ಭಾಗದ ಸಂಘಟನೆಗೆ ಅತೃಪ್ತಿ..!

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರು ಹಾಜರಿದ್ದ ಸಭೆಯಲ್ಲಿ ಅಮಿತ್​ ಷಾ ಜಿಲ್ಲಾವಾರು ಸಂಘಟನೆ ಬಗ್ಗೆ ಚರ್ಚೆ ನಡೆಸಿದ್ದು, ಬಿಜೆಪಿ ನಾಯಕರ ಪ್ರಯತ್ನಕ್ಕೆ ಸಮಧಾನ ಇಲ್ಲ ಎಂದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಹಳೆ ಮೈಸೂರು ಭಾಗದಲ್ಲಿ ಮಾಡಿರೋ ತಂತ್ರಗಾರಿಕೆಗಳು ತೃಪ್ತಿ ಇಲ್ಲ. ಈಗಿನಿಂದಲೇ ಮತ್ತಷ್ಟು ಸುಧಾರಣೆ ಆಗಬೇಕು ಎಂದು ಅಮಿತ್ ಷಾ ಖಡಕ್ ಸೂಚನೆ ಕೊಟ್ಟಿದ್ದಾರೆ. ಮಂಡ್ಯಕ್ಕೆ ಭೇಟಿ ಕೊಟ್ಟು ಜನರ ನಾಡಿ ಮಿಡಿತ ಅಮಿತ್​ ಷಾ, ಹಳೇ ಮೈಸೂರು ಭಾಗದಲ್ಲಿ ಚುನಾವಣೆಗೆ ಹೋಗುತ್ತಿರುವ ದಿಕ್ಕು ಸರಿಯಾಗಿಲ್ಲ ಎನ್ನುವುದನ್ನು ಕಡ್ಡಿ ಮುರಿದಂತೆ ತಿಳಿಸಿದ್ದಾರೆ. ಗೆಲ್ಲಲು ಬೇಕಿರುವ ಸೂಕ್ತ ಮಾರ್ಗಗಳ ಬಗ್ಗೆಯೂ ಅಮಿತ್​ ಷಾ ಸೂಚ್ಯವಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಕೇಸರಿ ಮಯ ಮಾಡುವುದಕ್ಕೆ ಸಿದ್ಧ ಎಂದಿದ್ದಾರೆ.

ರೌಡಿ ಶೀಟರ್ಸ್​​ ಪಕ್ಷಕ್ಕೆ ಬೇಡ, ಗೆಲ್ಲುವ ಅಭ್ಯರ್ಥಿ ಹುಡುಕಿ..!

ಹಳೇ ಮೈಸೂರು ಭಾಗದಲ್ಲಿ ಗೆಲುವು ಸಿಗದೆ ಬಹುಮತ ಕಷ್ಟ ಸಾಧ್ಯ. ಎಲ್ಲಾ ಬಾರಿಯೂ ಹಳೇ ಮೈಸೂರಿನಲ್ಲಿ ಯಾರು ಪ್ರಾಬಲ್ಯ ಹೊಂದುತ್ತಾರೆಯೋ ಅವರೇ ಅಧಿಕಾರ ಹಿಡಿಯುವುದು ಖಚಿತ. ಈ ಬಾರಿ ಹಳೇ ಮೈಸೂಇನದಲ್ಲಿ ನಾವು ಕನಿಷ್ಟ 40 ಸ್ಥಾನಗಳನ್ನು ಗೆಲ್ಲಬೇಕು ಎಂದು ಬಿಜೆಪಿ ನಾಯಕರಿಗೆ ಟಾಸ್ಕ್​ ನೀಡಿದ್ದಾರೆ. ಆದರೆ ಇತ್ತೀಚಿಗೆ ರೌಡಿ ಶೀಟರ್​ಗಳಿಗೆ ಮಣೆ ಹಾಕಿದ್ದ ಬಿಜೆಪಿ ನಾಯಕರಿಗೆ ಚಾಟಿ ಬೀಸಿರುವ ಅಮಿತ್​ ಷಾ, ಪಕ್ಷಕ್ಕೆ ಡ್ಯಾಮೇಜ್​ ಆಗುವ ಯಾವುದೇ ಕೆಲಸ ಮಾಡಬೇಡಿ, ಪಕ್ಷ ಸೇರ್ಪಡೆ ವೇಳೆ ವ್ಯಕ್ತಿಯ ಹಿನ್ನೆಲೆ ಪರಿಶೀಲನೆ ಮಾಡಿ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಏನು ಬೇಕಾದರೂ ಮಾಡಿ ಎಂದಿರುವ ಅಮಿತ್​ ಷಾ, ಬೇರೆ ಪಕ್ಷದ ಅಭ್ಯರ್ಥಿಗಳನ್ನೇ ಸೆಳೆಯುವಂತೆ ಮೌಕಿಕವಾಗಿ ಸೂಚನೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.

ಬಿಜೆಪಿಯಿಂದ ನಡೆಯುತ್ತಾ ಆಪರೇಷನ್​ ಅಭ್ಯರ್ಥಿ..!

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಸಾಧ್ಯ ಎನ್ನುವುದು ರಾಜ್ಯ ಬಿಜೆಪಿ ನಾಯಕರಿಗೆ ಚೆನ್ನಾಗಿ ಗೊತ್ತಿರುವ ವಿಚಾರ. ಬಿಜೆಪಿಯಿಂದ ಗೆದ್ದಿದ್ದಾರೆ ಎಂದರೆ ಬೇರೆ ಪಕ್ಷದ ಒಡಕಿನ ಲಾಭ ಅಥವಾ ಬೇರೆ ಪಕ್ಷದ ನಾಯಕರ ಕೃಪಾಶಿರ್ವಾದ ಪಡೆದಿದ್ದಾರೆ ಎಂದು ಸಿದ್ದಂಕೋಚವಾಗಿ ಹೇಳಬಹುದು. ಇದೀಗ ಬಿಜೆಪಿ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಬಿದ್ದಿದೆ. 40 ಸ್ಥಾನಗಳ ಟಾರ್ಗೆಟ್​ ಕೂಡ ಫಿಕ್ಸ್​ ಆಗಿದೆ. ಅಮಿತ್​ ಷಾ ಸಭೆಯಲ್ಲಿ ಭಾಗಿಯಾಗಿದ್ದ ಸಚಿಒವ ಆರ್​.ಅಶೋಕ್​ ಕೂಡ ಅದನ್ನೇ ಹೇಳಿದ್ದು, ಕಾಂಗ್ರೆಸ್​, ಜೆಡಿಎಸ್​ ಸೋಲಿಸಲು ರಣತಂತ್ರ ರೆಡಿಯಾಗಿದೆ ಎಂದಿದ್ದಾರೆ. ಒಟ್ಟು 59 ಕ್ಷೇತ್ರ ಗಳ ಪೈಕಿ ಕೇವಲ 13 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿರುವ ಬಿಜೆಪಿ ಈ ಬಾರಿ ಹಳೇ ಮೈಸೂರಿನಲ್ಲಿ ಗೆಲುವಿನ ಕಹಳೆ ಊದುವುದಕ್ಕೆ ಸಿದ್ಧತೆ ಮಾಡುತ್ತಿದೆ. ಸಭೆ ಬಳಿಕ ಸಿ.ಟಿ ರವಿ ಮಾತನಾಡಿದ್ದು, ಗೆಲ್ಲುವ ಕ್ಷೇತ್ರ ಗಳಲ್ಲಿ ನಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಕೊಡ್ತೀವಿ. ಎಲ್ಲಿ ನಮ್ಮ ಅಭ್ಯರ್ಥಿಗಳು ಸ್ಟ್ರಾಂಗ್ ಇಲ್ಲವೋ, ಅಲ್ಲಿ ನಿಸ್ಸಂಕೋಚದಿಂದ ಅನ್ಯಪಕ್ಷದ ಪ್ರಬಲ ಅಭ್ಯರ್ಥಿಗಳನ್ನು ಬಿಜೆಪಿಗೆ ಕರೆದುಕೊಳ್ತೀವಿ. ಗೆಲ್ಲುವುದೊಂದೇ ಮಾನದಂಡ. ನಾವು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಈ ಮೂಲಕ ಆಪರೇಷನ್​ ಅಭ್ಯರ್ಥಿ ಎನ್ನುವ ಸುಳಿವು ಕೊಟ್ಟಂತಾಗಿದೆ.

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಹರಿದು ಬಂತು ಪ್ರವಾಸಿಗರ ದಂಡು :ಮೈಸೂರಲ್ಲಿ ಫುಲ್ ರಷ್..!

Next Post

Death : ಸಾಲಬಾದೆ ಗುತ್ತಿಗೆದಾರ ನೇಣಿಗೆ ಶರಣು | Pratidhvani

Related Posts

Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
0

ಮಿತ್ರಪಕ್ಷದ ಮುಲಾಜಿನಲ್ಲಿ ಕಾಂಗ್ರೆಸ್; ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ, ಮಂಡ್ಯಕ್ಕೆಷ್ಟು ಅನುದಾನ; ಮೊದಲು ತಿಳಿಯಲಿ ಎಂದು ಚೆಲುವರಾಯಸ್ವಾಮಿಗೆ ತಿರುಗೇಟು, RSS ಬಗ್ಗೆ ಟೀಕೆ; ಪ್ರಿಯಾಂಕ್ ಖರ್ಗೆ...

Read moreDetails

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

July 5, 2025
Next Post
Death : ಸಾಲಬಾದೆ ಗುತ್ತಿಗೆದಾರ ನೇಣಿಗೆ ಶರಣು | Pratidhvani

Death : ಸಾಲಬಾದೆ ಗುತ್ತಿಗೆದಾರ ನೇಣಿಗೆ ಶರಣು | Pratidhvani

Please login to join discussion

Recent News

Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
Top Story

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

by ಪ್ರತಿಧ್ವನಿ
July 5, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada