• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಇವತ್ತು ವರ್ಷದ ಕೊನೆಯ ದಿನ.. ನೀವು ಏನ್​ ಮಾಡ್ಬೇಕು..? ಏನ್​ ಮಾಡ್ಬಾರ್ದು..?

ಪ್ರತಿಧ್ವನಿ by ಪ್ರತಿಧ್ವನಿ
December 31, 2022
in ಕರ್ನಾಟಕ
0
ಇವತ್ತು ವರ್ಷದ ಕೊನೆಯ ದಿನ.. ನೀವು ಏನ್​ ಮಾಡ್ಬೇಕು..? ಏನ್​ ಮಾಡ್ಬಾರ್ದು..?
Share on WhatsAppShare on FacebookShare on Telegram

ಕೊರೊನಾ ಕಾರಣಕ್ಕೆ ಕಳೆದ 2 ವರ್ಷಗಳಿಂದ ಹೊಸ ವರ್ಷ ಆಚರಣೆಯ ಸಂಭ್ರಮ ಕಣ್ಮರೆ ಆಗಿತ್ತು. ಈ ವರ್ಷ ಮತ್ತೊಮ್ಮೆ ಕೊರೊನಾ ಹೊಸ ತಳಿ BF.7 ಆತಂಕದಲ್ಲೇ ಹೊಸ ವರ್ಷ ಆಚರಣೆಗೆ ಯುವ ಜನತೆ ಸಜ್ಜಾಗಿದ್ದಾರೆ. ರಾಜ್ಯ ಸರ್ಕಾರ ಕೂಡ ಮಧ್ಯರಾತ್ರಿ 1 ಗಂಟೆ ತನಕ ಮೋಜು ಮಸ್ತಿ ಮಾಡಲು ಅಸ್ತು ಎಂದಿದೆ. ಆದರೆ ಎಂದೆಂದೂ ಕಾಣದ ರೀತಿಯಲ್ಲಿ ಪೊಲೀಸ್​ ಇಲಾಖೆ ಭದ್ರತೆ ಕೈಗೊಂಡಿದ್ದು, ಯಾವುದೇ ಅಹಿಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ತೆಗೆದುಕೊಳ್ಳಲಾಗಿದೆ. ಅದರ ಜೊತೆಗೆ ಪ್ರತಿ ವರ್ಷವೂ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಬೆಂಗಳೂರಿನ ಎಂಜಿ ರಸ್ತೆ ಹಾಗು ಬ್ರಿಗೇಡ್​ ರಸ್ತೆಯಲ್ಲಿ ವಿದ್ಯುತ್​​ ಬಂದ್​ ಮಾಡುವ ಮೂಲಕ ಕಗ್ಗತ್ತಲೇ ಮಾಡಲಾಗ್ತಿತ್ತು. ಆದರೀವರ್ಷ ಲೈಟ್ಸ್​​ ಬಂದ್​ ಆಗ್ತಿಲ್ಲ. ಇದೇ ಕಾರಣಕ್ಕಾಗಿ ಎಂಜಿ ರಸ್ತೆ, ಬ್ರಿಗೇಡ್​​ ರಸ್ತೆಗೆ ಹೋಗುವವುದಿದ್ದರೆ ನಿಮ್ಮ ಪ್ಲ್ಯಾನ್​ ಚೇಂಜ್​ ಮಾಡಿ. ಲೈಟ್ಸ್​ ಆನ್​ ಅಂಡ್​ ಆಫ್​ ಇರಲ್ಲ.

ADVERTISEMENT

ಗೆಳತಿ ಜೊತೆ ಗುಟ್ಟಾಗಿ ಪಬ್​ಗೆ ಹೋಗುವುದಿದ್ದರೆ ಇಲ್ನೋಡಿ..

ಹೊಸ ವರ್ಷ ಆಚರಣೆ, ಪ್ರೇಮಿಗಳ ದಿನಾಚರಣೆ ವೇಳೆ ಪ್ರೇಮಿಗಳು ಸ್ವಚ್ಛಂದ ಆಕಾಶದಲ್ಲಿ ವಿಹರಿಸುವ ಮನಸ್ಸು ಮಾಡುತ್ತದೆ. ಹೊಸ ವರ್ಷ ಆಚರಣೆ ನೆಪದಲ್ಲಿ ಗೆಳಯ ಗೆಳತಿ ಜೊತೆಗೆ ಮೋಜು ಮಸ್ತಿ ಮಾಡಲು ಹೋಗುವುದು ಸಾಮಾನ್ಯ. ಆದರೆ ಈ ಬಾರಿ ಎಲ್ಲಾ ಬಾರ್​ ಅಂಡ್​ ರೆಸ್ಟೋರೆಂಟ್​​, ಪಬ್​​ಗಳಲ್ಲೂ ನಿಮ್ಮ ಫೋಟೋ ತೆಗೆಯುವುದಕ್ಕೆ ಜನರು ನಿಂತಿರುತ್ತಾರೆ. ಮಾಸ್ಕ್​ ಕಡ್ಡಾಯ ಇದ್ದರೂ ನೀವು ಮಾಸ್ಕ್​ ತೆಗೆದು ನಿಮ್ಮ ಮುಖಗಳನ್ನು ಕ್ಯಾಮೆರಾಗೆ ತೋರಿಸಲೇಬೇಕು. ಇದು ಪೊಲೀಸ್​ ಇಲಾಖೆ ಕೈಗೊಂಡಿರುವ ಭದ್ರತಾ ಕ್ರಮಗಳಲ್ಲಿ ಪ್ರಮುಖ ಆದ್ದದ್ದು. ಹೀಗಾಗಿ ನೀವು ಕದ್ದು ಮುಚ್ಚಿ ಬಾರ್​, ಪಬ್​ಗಳಿಗೆ ಹೋಗುವುದಿದ್ದರೆ ಪ್ಲ್ಯಾನ್​ ಚೇಂಜ್​ ಮಾಡುವುದು ಒಳಿತು. ಇಲ್ಲದಿದ್ದರೆ ಎಂದಾದರೂ ತಾವು ಇಕ್ಕಟ್ಟಿಗೆ ಸಿಲುಕುವ ಸಂಭವ ಇರುತ್ತದೆ.

ಅಪ್ಪಿ ತಪ್ಪಿ ಕುಡಿದ ನಶೆಯಲ್ಲಿ ಮೈಮುಟ್ಟಿದ್ರೆ ಕೇಸ್​..!

ಬೆಂಗಳೂರಿನ ಪ್ರಮುಖ ರಸ್ತೆಗಳಾದ ಎಂಜಿ ರಸ್ತೆ, ಬ್ರಿಗೇಡ್​ ರಸ್ತೆಯಲ್ಲಿ ಯುವಕ ಯುವತಿಯರು ಕೈಕೈ ಹಿಡಿದುಕೊಂಡು ಮೋಜು ಮಸ್ತಿ ಮಾಡುತ್ತಾ ಹೋಗುವುದು ಸಾಮಾನ್ಯ. ಎಲ್ಲರೂ ನಶೆಯಲ್ಲೇ ಇರ್ತಾರೆ ಎನ್ನುವುದು ಕೂಡ ಅಷ್ಟೇ ಸತ್ಯ. ಇನ್ನು ಕುಡಿದ ಮತ್ತಿನಲ್ಲಿ ಕೈ ಕೈ ಹಿಡಿದು ಡ್ಯಾನ್ಸ್​ ಮಾಡುವಾಗ ಅವರಿವರ ಮೇಲೆ ಬಿದ್ದು ರಂಪಾಟ ಮಾಡಿಕೊಳ್ಳಬೇಡಿ. ಯಾಕಂದ್ರೆ 200ಕ್ಕೂ ಹೆಚ್ಚು ಸಿಸಿಟಿವಿ, ಡ್ರೋಣ್​ ಕ್ಯಾಮೆರಾ, ವಾಚ್​ ಟವರ್ಸ್​ ಜೊತೆಗೆ ಪೊಲೀಸ್​ ಇಲಾಖೆ ಸಜ್ಜಾಗಿದೆ. ಈ ಬಾರಿ ಲೇಡಿ ಬೌನರ್ಸ್​ ಕೂಡ ಇರ್ತಾರೆ. ಸಣ್ಣಪುಟ್ಟ ಸಮಸ್ಯೆಗೂ ಪೆಟ್ಟು ತಿನ್ನುವ ಪರಿಸ್ಥಿತಿ ಎದುರಾಗಬಹುದು. ಗುಡ್​ ಆರ್​ ಬ್ಯಾಡ್​ ಟಚ್​ ಏನೇ ಇರಲಿ, ನೀವು ಟಚ್​ ಮಾಡಿದ್ರಿ ಅನ್ನೋದಷ್ಟೇ ಕ್ಯಾಮೆರಾದಲ್ಲಿ ಸೆರೆಯಾಗುತ್ತೆ. ನೀವು ಕಂಬಿ ಹಿಂದೆ ಹೋಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಬೀ ಕೇರ್​ ಫುಲ್​.

ಬೆಂಗಳೂರಲ್ಲಿ ಮೇಲ್ಸೇತುವೆಗಳು ಬಂದ್​, ಡಿಡಿ ಕೇಸ್​ ಫಿಕ್ಸ್​..!

ಸರ್ಕಾರದ ಕೆಲಸವೇ ಡಬಲ್​ ಗೇಮ್​. ಮಧ್ಯಾರಾತ್ರಿ 1 ಗಂಟೆ ತನಕ ಬಾರ್​ ಅಂಡ್​ ರೆಸ್ಟೋರೆಂಟ್​ ಓಪನ್​ ಮಾಡೋದಕ್ಕೆ ಅವಕಾಶ ಕೊಟ್ಟಿದೆ. ಜನರು ಮೋಜು ಮಸ್ತಿ ಮಾಡಬಹುದು ಅಂತಾ ಹೇಳಿದೆ. ಅದರ ಜೊತೆಗೆ ರಸ್ತೆ ರಸ್ತೆಯಲ್ಲೂ ಟ್ರಾಫಿಕ್​ ಪೊಲೀಸ್ರು, ಡ್ರಂಕ್​ ಅಂಡ್​ ಡ್ರೈವ್​ ತಪಾಸಣೆ ಮಾಡಲಿದ್ದಾರೆ. ಕುಡಿದು ಹೋಗುತ್ತಿದ್ರೆ ಯರಽಬಿರಿಽ ಫೈನ್​ ಹಾಕೋದಂತೂ ಸತ್ಯ. ಇನ್ನು ಮೇಲ್ಸೇತುವೆಗಳ ಮೇಲೆ ಹೋಗಿ ಅಪಘಾತ ಮಾಡ್ಕೊಬಾರ್ದು ಅನ್ನೋ ಕಾರಣಕ್ಕೆ ಸಂಜೆಯಿಂದಲೇ ಮೇಲ್ಸೇತುವೆಗಳು ಬಂದ್​ ಆಗಿರುತ್ತವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಮೇಲ್ಸೇತುವೆಗಳು ಓಪನ್​ ಇರುತ್ತವೆ. ಆದರೆ ಬೈಕ್​ ಸವಾರರಿಗೆ ಅವಕಾಶ ನಿಷಿದ್ಧ. ಹೊಸ ವರ್ಷವನ್ನು ಸ್ವಾಗತ ಮಾಡಲು ಸಾಕಷ್ಟು ಕಟ್ಟುಪಾಡುಗಳಿವೆ. ಯಾವುದಕ್ಕೂ ನೀವು ಹುಷಾರ್ ಅನ್ನೋದಷ್ಟೇ ನಮ್ಮ ಕಳಕಳಿ.

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

2022 ರ ಹಿನ್ನೋಟ: ಕೋಮು ರಾಜಕಾರಣ, ಧ್ವೇಷದ ಆಡಳಿತ, ಲೂಟಿಕೋರ ಸರ್ಕಾರಕ್ಕೆ ನಲುಗಿದ ಕರ್ನಾಟಕ

Next Post

ಕೋಲಾರ : ಮುಳಬಾಗಿಲು ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ – ಕೊತ್ತೂರು ಮಂಜುನಾಥ್ . #pratidhvaninews #siddaramaiah

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

May 20, 2026
Next Post
ಕೋಲಾರ : ಮುಳಬಾಗಿಲು ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ – ಕೊತ್ತೂರು ಮಂಜುನಾಥ್ . #pratidhvaninews #siddaramaiah

ಕೋಲಾರ : ಮುಳಬಾಗಿಲು ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ - ಕೊತ್ತೂರು ಮಂಜುನಾಥ್ . #pratidhvaninews #siddaramaiah

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada