ದೇಶದ ಅತಿ ದೊಡ್ಡ ವೋಲ್ಸೇಲ್-ರೀಟೇಲ್ ಮಾರಾಟ ಸಂಸ್ಥೆ ಮೆಟ್ರೋವನ್ನ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹ ಸಂಸ್ಥೆ 2850 ಕೋಟಿ ರೂಪಾಯಿಗೆ ಖರೀದಿಸಿದೆ.
ರಿಲಯನ್ಸ್ ರಿಟೈಲ್ ವೆಂಚರ್ಸ್ ಲಿಮಿಟೆಡ್(RRVL) ಭಾರತದಲ್ಲಿನ ಮೆಟ್ರೋ ಸ್ಟೋರ್ಗಳನ್ನ ಖರೀದಿ ಮಾಡಿದೆ ಮತ್ತು ಮೆಟ್ರೋ ಇಂಡಿಯಾದ ಶೇ.100 ರಷ್ಟ ಶೇರುಗಳನ್ನು ರಿಲಯನ್ಸ್ ರನ್ನ ತೆಕ್ಕೆಗೆ ಹಾಕಿಕೊಂಡಿದೆ.
ಬೆಂಗಳೂರು ಸೇರಿದಂತೆ ಒಟ್ಟು 21 ನಗರಗಳಲ್ಲಿ 31 ಮಳಿಗಗಳನ್ನ ಹೊಂದಿರುವ ಮೆಟ್ರೋದಲ್ಲಿ ಸುಮಾರು 3,500 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದು 2003ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನ ಪ್ರಾರಂಭಿಸಿತ್ತು.







