ಇತ್ತೀಚಿಗೆ ತಾರಕಕ್ಕೇರಿದ್ದ ಸಂಸದ ಶ್ರೀನಿವಾಸ್‌ಪ್ರಸಾದ್ ಹಾಗೂ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ನಡುವಿನ ಗುದ್ದಾಟ ಇದೀಗ ಲೋಕಾಯುಕ್ತದ ಮೆಟ್ಟಿಲೇರಿದೆ.
2019ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಹೆಚ್.ವಿಶ್ವನಾಥ್ ಅದೇ ವರ್ಷಾಂತ್ಯದಲ್ಲಿ ನಡೆದ ಹುಣಸೂರು ವಿಧಾನಸಭೆ ಉಪಚುನಾವಣೆಗೆ 15 ಕೋಟಿ ಹಣ ಪಡೆದು ಅದರಲ್ಲಿ 10 ಕೋಟಿ ತಮ್ಮ ಜೇಬಿಗಿಳಿಸಿದ್ದಾರೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಸ್ವಪಕ್ಷ ಶಾಸಕ ವಿಶ್ವನಾಥ್ ಮೇಲೆ ಆರೋಪಿಸಿದ್ದರು.
ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್ ನೀವು ಚುನಾವಣೆಗೆ ಸ್ಪರ್ದಿಸಲು ಹಣ ತೆಗೆದುಕೊಂಡಿರಲಿಲ್ವೆ ಎಂದು ಪೃಶ್ನಿಸುವ ಮೂಲಕ ತಿರುಗೇಟು ನೀಡಿದ್ದರು.

ಇನ್ನು ಆರೋಪ ಪ್ರತ್ಯಾರೋಪಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು ಇನ್ನು ಇದಕ್ಕೆ ಪೂರಕವಾಗಿ ಆರ್‌ಎಸ್‌ಎಸ್‌ನ ನೊಂದಾಯಿತ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಹನುಮೇಗೌಡ ದೂರು ದಾಖಲಿಸಿ ತನಿಖೆಗೆ ಆಗ್ರಹಿಸಿದ್ದಾರೆ.
ಈ ಕುರಿತು ರಾಷ್ಟ್ರಪತಿ, ರಾಷ್ಟ್ರೀಯ-ರಾಜ್ಯ ಚುನಾವಣಾ ಆಯೋಗ, ರಾಜ್ಯಪಾಲರು, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ, ಲೋಕಾಯುಕ್ತಗೆ ಪತ್ರ ಬರೆದು ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
