ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಕ್ರಾಂತಿ ಜನವರಿ 26, 2033ರಂದು ವಿಶ್ವದಾಯಂತ ತೆರೆ ಕಾಣಲಿದೆ.
ಇನ್ನು ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ಮಾಡಿರುವ ಚಿತ್ರ ಭಾನುವಾರ ಹೊಸಪೇಟೆಯ ಅಪ್ಪು ಸರ್ಕಲ್‌ನಲ್ಲಿ ಚಿತ್ರದ ಎರಡನೇ ಹಾಡು ಬೊಂಬೆಯನ್ನು ಬಿಡುಗಡೆ ಮಾಡಲು ಯೋಜಿಸಿತ್ತು. ಆದರೆ, ಕಳೆದ ಕೆಲವು ತಿಂಗಳ ಹಿಂದೆ ಡಿ ಬಾಸ್ ಖಾಸಗಿ ವಾಹಿನಿ ಒಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ಅಪ್ಪು ಬಗ್ಗೆ ಮಾತನಾಡಿದ್ದು ತೀವ್ರ ವಿವಾದಕ್ಕೆ ಈಡಾಗಿತ್ತು.
ಇನ್ನು ಭಾನುವಾರ ಅಪ್ಪು ಅಭಿಮಾನಿಗಳ ಆಕ್ರೋಶದ ನಡುವೆ ಕಾರ್ಯಕ್ರಮ ನಡೆದಿದ್ದು ನಟ ದರ್ಶನ ಮೇಲೆ ಯಾರೋ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದು ನಗರದಾದ್ಯಂತ ಹಾಕಲಾಗಿದ್ದ ಪ್ಲೆಕ್ಸ್‌ಗಳನ್ನ ಹರಿದು ಆಕ್ರೋಶ ಹೊರಹಾಕಿದ್ದರು.

ಕಾರ್ಯಕ್ರಮದ ನಿರೂಪಕರು ಸ್ಟಾರ್ ವಾರ್ ಬೇಡ ಎಂದು ಅಪ್ಪು ಅವರೇ ಹೇಳಿದ್ದಾರೆ ದಯವಿಟ್ಟು ಕಾರ್ಯಕ್ರಮ ನಡೆಸಲು ಸಹಕಾರ ಕೊಡಿ ಎಂದು ವಿನಂತಿಸಿದ್ದರು ಸಹ ಅಪ್ಪು ಭಾವಚಿತ್ರವನ್ನ ಹಿಡಿದು ಕುಣಿಯುತ್ತ ಜಯಘೋಷ ಹಾಕಿದ್ದರು ಇದನ್ನು ಗಮನಿಸಿದ ಚಿತ್ರತಂಡ ವೇದಿಕೆಯಿಂದ ನಿರ್ಗಮಿಸಿದೆ.
ಇನ್ನು ಅಪ್ಪು ಪುತ್ಥಳಿಗೆ ನಮಸ್ಕರಿಸುವ ವೇಳೆ ಕೆಲವು ಕಿಡಿಗೇಡಿಗಳು ನಟ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದು ನೆರೆದಿದ್ದವರ ಪೋನಿನಲ್ಲಿ ಸೆರೆಯಾಗಿದ್ದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಇನ್ನು ಕಾರ್ಯಕ್ರಮ ನೋಡಲು ಬಂದಿದ್ದ ಅಭಿಮಾನಿಯೋರ್ವನ ಕಾಲಿನ ಮೇಲೆ ಲಾರಿ ಹರಿದಿದ್ದು ಗಂಭೀರವಾಗಿ ಗಾಯಗೊಂಡಿರುವ ಯುಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.