ಇತ್ತೀಚಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಾಸಗಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕರ್ನಾಟಕ ರತ್ನ ಪವರ್‌ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಕುರಿತು ನೀಡಿದ ಹೇಳಿಕೆ ಕಿಡಿ ಹೊತ್ತಿಸಿದ್ದು ದಾಸ ಹಾಗೂ ಅಪ್ಪು ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ.
ಖಾಸಗಿ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡುವ ವೇಳೆ ಅಭಿಮಾನ ಎಂತದ್ದು ಎಂದು ಸತ್ತ ಮೇಲೆ ತೋರಿಸುವುದಿದೆ ಉದಾಹರಣೆಗೆ ಪುನೀತ್ ರಾಜ್‌ಕುಮಾರ್ ಅವರ ಮೇಲಿನ ಅಭಿಮಾನ ನೋಡಿರಬಹುದು. ಆದರೆ, ನನ್ನಗೆ ಬದುಕಿರುವಾಗಲೇ ಅಭಿಮಾನ ಏನು ಎಂದು ಜನ ತೋರಿಸಿದ್ದಾರೆ ಸಾಕಿಷ್ಟು ಇನ್ನೇನಾಗಬೇಕು ಆ ಅಭಿಮಾನದಿಂದಲ್ಲೇ ಕ್ರಾಂತಿ ಈ ಮಟ್ಟಕ್ಕೆ ಬೆಳೆದಿದೆ ಎಂದು ದರ್ಶನ್ ಮಾತನಾಡುವ ವೇಳೆ ಹೇಳಿದ್ದರು.
ನಟ ದರ್ಶನ್ ನೀಡಿರುವ ಹೇಳಿಕೆ ಬಾಕ್ಸ್ ಆಫೀಸ್ ಕರ್ನಾಟಕ ಎಂಬ ಟ್ವಿಟರ್ ಖಾತೆಯಲ್ಲಿ ಪ್ರಕಟವಾಗಿದೆ. ಇನ್ನು ಈ ವಿಡಿಯೋ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದ್ದು ಈ ರೀತಿಯ ಸಣ್ಣ ವಿಡಿಯೋ ತುಣುಕುಗಳನ್ನು ಹರಿ ಬಿಡುವ ಮೂಲಕ ಅಭಿಮಾನಿಗಳ ನಡುವೆ ತಂದಿಡುವುದು ಬೇಡ ಎಂದಿದ್ದಾರೆ.
Cheap mentality of @dasadarshan 🚶
— Box Office Karnataka (@Karnatakaa_BO) August 6, 2022
ನಿಮ್ಮfanbase ತೋರಿಸೋಕೆ ಸತ್ತು ದೇವರಾಗಿರುವ ಅಪ್ಪು ಸರ್ ನ ಅವಮಾನಿಸುವುದು ಸರಿಯಲ್ಲ
ನಿಮ್ಮ ಅಭಿಮಾನಿಗಳ ಬಗ್ಗೆ ಹೊಗಳಿ ಅದ ಬಿಟ್ಟು ಇನ್ನೊಬ್ಬರ ಬಗ್ಗೆ ಅವಮಾನಿಯವಾಗಿ ಮಾತನಾಡುವುದು ಸರಿಯಲ್ಲ,ನಿಮ್ಮ ಹೇಳಿಕೆ ಎಷ್ಟೋ fansಗೆ ನೋವು ಮಾಡಿದೆ ನೀವು ಕ್ಷಮೆ ಕೇಳಬೇಕು#PuneethRajkumarLivesOn 🙏 pic.twitter.com/Zcl16npftk
ಇತ್ತ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ದಾಸನ ವಿರುದ್ದ ಧಿಕ್ಕಾರ ಕೂಗಿ ನಟ ದರ್ಶನ್ ಕ್ಷಮೆಯಾಚಿಸದಿದ್ದರೆ ಕ್ರಾಂತಿ ಚಿತ್ರವನ್ನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇತ್ತ ವಿವಾದ ಭುಗಿಲೇಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ನಿರ್ದೇಶಕ ದುನಿಯಾ ಸೂರಿ ಮೇಲೊಬ್ಬ ಇದ್ದಾನೆ ಅವನು ನೋಡ್ಕೋತ್ತಾನೆ ಎಂದು ಶುರು ಮಾಡುವ ಮೂಲಕ ಪುನೀತ್ ಅವರು ನಿಧನರಾದ ಸಮಯದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ದರ್ಶನ್ ಹೇಳಿದ್ದರು. ಅದರ ಬಗ್ಗೆ ಯಾರೂ ಒಂದು ಮಾತನ್ನು ಸಹ ಹೇಳಲಿಲ್ಲ.
ಪುನೀತ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಾಗ ಇಲ್ಲದಿದ್ದರು ಸರಿ ನಿಂತುಕೊಂಡು ನೋಡುತ್ತೇನೆ ಎಂದು ಸೌಜನ್ಯತೆ ತೋರಿದಾಗಲೂ ಯಾರು ಸಹ ಒಂದು ಪೋಸ್ಟ್ ಹಾಕಲಿಲ್ಲ. ಮಾತಿನ ಭರದಲ್ಲಿ ಪುನೀತ್‌ರವರಿಗೆ ನಿಧನದ ನಂತರ ದೊಡ್ಡ ಗೌರವ ಸಿಕ್ಕಿತ್ತು ನನ್ನಗೆ ಈಗಲ್ಲೇ ಸಿಕ್ಕಿದೆ ನನಗೆ ಇಷ್ಟೇ ಸಾಕು ಎಂದು ಹೇಳಿರುವ ಒಳ್ಳೆಯ ಮಾತನ್ನು ತಿರುಚಿ ಡಿ ಬಾಸ್ ಅಪ್ಪುರವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಅವರು ಕೆಟ್ಟವರು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅವರ ವೈಯಕ್ತಿಕ ಜೀವನ ಕೆದಕುತ್ತಾ ಅವರ ವಿರುದ್ದ ಪೈಪೋಟಿ ಬಿದ್ದವರಂತೆ ಪೋಸ್ಟ್ ಹಾಕುತ್ತಿದ್ದೀರಲ್ಲಾ ನಿಮ್ಮಗೆ ಆ ದೇವರು ಒಳ್ಳೆಯದು ಮಾಡಲಿ ಎಂದು ಟ್ವೀಟ್ ಮಾಡಿ ವಿಷಾದಿಸಿದ್ದಾರೆ. ಇತ್ತ ಸೂರಿ ಮಾಡಿರುವ ಟ್ವೀಟ್ ವೈರಲ್ ಆಗಿದ್ದು ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಅನೇಕರು ರಿಟ್ವೀಟ್ ಮಾಡಿದ್ದಾರೆ.
ಇತ್ತ ನಟ ದರ್ಶನ್ ಹೇಳಿಕೆಯನ್ನು ಖಂಡಿಸಿರುವ ಕಿಚ್ಚನ ಅಭಿಮಾನಿಗಳು ಕ್ರಾಂತಿ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ(ಟ್ರೋಲ್) ಮಾಡುತ್ತಿದ್ದಾರೆ.