182 ಸದಸ್ಯ ಬಲದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು ಸೈದ್ದಾಂತಿಕ ಸಂಘರ್ಷದ ವಿರುದ್ದದ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಈ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಖರ್ಗೆ ಗುಜರಾತ್ ವಿಧಾನಸಭೆಯಲ್ಲಿ ಉಂಟಾದ ಸೋಲನ್ನು ನಾವು ಒಪ್ಿಕೊಳ್ಳುತ್ತೇವೆ ಮತ್ತು ವಿಜೇತರನ್ನು ಅಭಿನಂದಿಸುತ್ತೇವೆ. ಸೈದ್ದಾಂತಿಕ ಸಂಘರ್ಷದ ವಿರುದ್ದ ನಮ್ಮ ಹೋರಾಟ ನಿರಂತರವಾಗಿದ್ದು ಒಂದು ದಿನದ ದೋಲು-ಗೆಲುವು ಶಾಶ್ವತವಲ್ಲ ಪ್ರಜಾಪ್ರಭುತ್ವದಲ್ಲಿ ಇದು ಸಾಮಾನ್ಯವಾಗಿದ್ದು ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಇನ್ನು ಮಾತನಾಡುವ ವೇಳೆ ಹಿಮಾಚಲ ಪ್ರದೇಶದ ಮತದಾರರಿಗೆ ಧನ್ಯವಾದ ಸಲ್ಲಿಸಿದ ಖರ್ಗೆ ಎಲ್ಲರ ಬೆಂಬಲದಿಂದ ಈ ಫಲಿತಾಂಶ ದೊರೆತಿದೆ. ಸಂಘಟಿತ ಹೋರಾಟದ ಫಲವಾಗಿ ಗೆಲುವು ನಮಗೆ












