ಭಾರೀ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭೆಗೆ ಸಂಬಂಧಿಸಿದಂತೆ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಇತಿಹಾಸ ಬರೆಯುವ ಉಮೇದಿನಲ್ಲಿದೆ.
ಸತತ ಆರು ಚುನಾವಣೆಗಳನ್ನು ಗೆದ್ದು 27 ವರ್ಷಗಳ ಕಾಲ ಆಡಳಿತ ನಡೆಸಿದ್ದ ಬಿಜೆಪಿ ಈ ಬಾರೀ ಗುಜರಾತ್‌ನಲ್ಲಿ ಗೆದ್ದು ಸರ್ಕಾರ ರಚಿಸಿದರೆ ಪಶ್ಚಿಮ ಬಂಗಾಳದಲ್ಲಿ ಎಡರಂಗ ಸರ್ಕಾರ ನಿರ್ಮಿಸಿದ ದಾಖಲೆಯನ್ನ ಸರಿಗಟ್ಟುತ್ತದೆ.
ಈಗಾಗಲೇ ಮತದಾನೋತ್ತರ ಸಮೀಕ್ಷೆಗಳು ಹೇಳಿರುವ ಪ್ರಕಾರ ಬಿಜೆಪಿ ಗೆಲುವನ್ನ ಸಾಧಿಸಲಿದ್ದು ಕಾಂಗ್ರೆಸ್-ಎಎಪಿ ನೆಲ ಕಚ್ಚಲಿವೆ ಎಂದು ಹೇಳಲಾಗಿದೆ.

ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಹಾಗೂ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ 63.31 ಹಾಗೂ ಎರಡನೇ ಹಂತದಲ್ಲಿ 59.19ರಷ್ಟು ಮತದಾನವಾಗಿತ್ತು.
ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ನೇತೃತ್ವದ ಎಡರಂಗ ಪಕ್ಷಗಳು ಸತತ ಏಳು ಭಾರಿ ಅಧಿಕಾರದ ಗದ್ದುಗೆ ಏರುವ ಮೂಲಕ ಇತಿಹಾಸ ನಿರ್ಮಿಸಿದ್ದವು. ಗುಜರಾತ್‌ನಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ 2002, 2007, 2012, 2012, 2022ರಲ್ಲಿ ಚುನಾವಣೆ ಎದುರಿಸಿದೆ.
2017ರಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು ಮತ್ತು ಬಿಜೆಪಿ ತಿಣುಕಾಡಿ 99 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅಂದಿನ ದಿನ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದ ಕಾಂಗ್ರೆಸ್‌ನ ಯುವ ನಾಯಕರಾದ ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್ ಸೇರಿದಂತೆ ಅನೇಕರು ಬಿಜೆಪಿ ಪಾಳಯದಲ್ಲಿದ್ದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿದೆ.


