ನಾವು ಬೇರೆಯವರ ತರಹ ಕುಟುಂಬ ರಾಜಕಾರಣ ಮಾಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ಈ ಕುರಿತು ಮಾತನಾಡಿದ ಸಂಸದೆ ಹಾಲಹಳ್ಲಿ ಸ್ಲಂ ನಿವಾಸ ಹಲವು ವರ್ಷಗಳ ಹೋರಾಟ ಅಂಬರೀಶ್ ಅವರು ವಸತಿ ಸಚಿವರಿದ್ದಾಗ ಶಂಕುಸ್ಥಾಪನೆ ಆಗಿತ್ತು. ಇಲ್ಲಿನ ನಿವಾಸಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿದ್ದಾರೆ ಕೆಲವು ವರ್ಷಗಳಿಂದ ನಿಂತು ಹೋಗಿತ್ತು.
ನಾನು ಸಂಸದೆಯಾಗಿ ಅವರ ಕನಸನ್ನು ಈಡೇರಿಸಿದ್ದೇನೆ ನಮಗೆ ಸಹಕರಿಸಿದ ವಸತಿ ಸಚಿವ ಸೋಮಣ್ಣ ವರಿಗೆ ಧನ್ಯವಾದಗಳು ಗುದ್ದಲಿ ಪೂಜೆ ಮಾಡಿದ ಜಾಗದಲ್ಲಿ ಗೊಂದಲ ಇತ್ತು ಸರಿಪಡಿಸಿ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪುತ್ರ ಅಭಿಷೇಕ್ ರಾಜಕೀಯ ಪ್ರವೇಶ ಕುರಿತು ಪ್ರತಿಕ್ರಿಯಿಸಿದ ಸಂಸದೆ ಸುಮಲತಾ ಅಮ್ಮ-ಮಗ ಇಬ್ಬರೂ ಒಟ್ಟಿಗೆ ರಾಜಕೀಯದಲ್ಲಿ ಇರಲ್ಲ ಡೈನಸ್ಟಿಕ್ ಪಾಲಿಟಿಕ್ಸ್ (ವಂಶದ ರಾಜಕಾರಣ)ನಾವು ಮಾಡಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಅಭಿಷೇಕ್‌ನನ್ನು ನಾನು ರಾಜಕೀಯದಲ್ಲಿ ಇಂಟರ್‌ಪೈ ಮಾಡುವುದಿಲ್ಲ ಮನಸ್ಸಿದ್ದರೆ ಬರ್ತಾರೆ, ಇಲ್ಲ ಬರಲ್ಲ ನಾನು ಒಂದು ವಿಷಯ ಮೊದಲಿಂದ ಹೇಳ್ತಿದ್ದೇನೆ. ಇದ್ರೆ ರಾಜಕೀಯದಲ್ಲಿ ನಾನು ಇರ್ತೇನೆ, ಇಲ್ಲ ಅಭಿಷೇಕ್ ಇರಬೇಕು ಇಬ್ಬರೂ ಒಟ್ಟಿಗೆ ರಾಜಕೀಯದಲ್ಲಿ ಇರಲ್ಲ.
ಜನರ ಕೂಗು ಕೇಳ್ತಿದೆ, ಮೂರು ವರ್ಷದಿಂದ ಕೇಳ್ತಿದ್ದಾರೆ ಮುಂದೇ ನೋಡೋಣಾ ಏನಾಗುತ್ತೆ ಅಂತಾ ರಾಜಕೀಯಕ್ಕೆ ಬರೋದನ್ನ ಅವನು ಡಿಸೈಡ್ ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.