ಇಡೀ ದೇಶವೇ ಬೆಚ್ಚಿಬೀಳಿಸಿದ ಶ್ರದ್ಧಾ ವಾಲ್ಕರ್(26) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ವಿಚಾರಣೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ವಕೀಲ ಜೋಗಿಂದರ್ ಟುಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ವಿಚಾರನೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದರ್ ಶರ್ಮಾ ಹಾಗೂ ಸುಬ್ರಮಣಿಯನ್ ಪ್ರಸಾದ್ ಅವರಿದ್ದ ದ್ವಿಸದಸ್ಯ ಪೀಠವು ಸಲ್ಲಿಸಲಾಗಿರುವ ಅರ್ಜಿಯಲ್ಲಿ ಪುರಸ್ಕರಿಸುವಂತಹ ಯಾವುದೇ ಅಂಶ ಕಂಡು ಬಂದಿಲ್ಲ ಎಂದು ಹೇಳಿದೆ.

ಸಾರ್ವಜನಿಕ ಹಿತಾಸಕ್ತಿಯೂ ಒಂದು ರೀತಿಯ ಪ್ರಚಾರದ ಹಿತಾಸಕ್ತಿಯಾಗಿದೆ ಮೃತ ಯುವತಿಯ ಪೋಷಕರಿಗೆ ದೆಹಲಿ ಪೊಲೀಸರ ತನಿಖೆಯ ವಿರುದ್ದ ಯಾವುದೇ ಆಕ್ಷೇಪವಿಲ್ಲ. ಆದರೆ, ತನಿಖೆ ಕುರಿತು ನಿಮ್ಮ ಆಕ್ಷೇಪವೇಕೆ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದ ತನಿಖೆಯೂ ಶೇ.80ರಷ್ಟು ಮುಗಿದಿದ್ದು ಎಸಿಪಿ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಮಂದಿ ಪೊಲೀಸರ ತಂಡ ತನಿಖೆ ನಡೆಸುತ್ತಿದೆ ಮತ್ತು ಈ ರೀತಿ ಪ್ರಕರಣ ವರ್ಗಾವಣೆಗೆ ನಾವು ತನಿಖೆ ನಿಯಂತ್ರಣ ಸಂಸ್ಥೆಯಲ್ಲ ಎಂದು ಅರ್ಜಿದಾರರಿಗೆ ಚಾಟಿ ಬೀಸಿದೆ.