ಪಂಡಿತ್ ನೆಹರೂ ಅವರು ಅಪರೂಪದ ಅದ್ಭುತ ರಾಜಕಾರಣಿ. ಬ್ರಿಟೀಷ್ರ ವಿರುದ್ಧ ಹೋರಾಟ ಮಾಡಿ 13 ವರ್ಷಗಳ ಕಾಲ ಸೆರೆವಾಸ ಅನುಭವಿಸಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಶವನ್ನು 16 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದೂರ ದೃಷ್ಟಿಯ ನಾಯಕರು ನೆಹರೂ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಪಂಚವಾರ್ಷಿಕ ಯೋಜನೆಗಳ ಮಹಾನ್ ನಾಯಕರು ನೆಹರೂ ಅವರು. ಅವರು ಹಲವು ಸಂಸ್ಥೆಗಳನ್ನು ಹುಟ್ಟುಹಾಕಿ ಇಸ್ರೋ, ಡಿಆರ್ ಡಿಒ ಸಂಸ್ಥೆ ಸ್ಥಾಪಿಸಿ ದೇಶ ನಿರ್ಮಾಣಕ್ಕೆ ಕಾರಣವಾದರು. ಅವರ ಆಡಳಿತದಲ್ಲಿ ಸಮಾಜದ ಎಲ್ಲ ವರ್ಗದ ಜನರ ಕಷ್ಟಕ್ಕೆ ಸ್ಪಂದಿಸಿದರು.
ಯುವಕರು ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಓದಬೇಕು. ಈಗ ನಮ್ಮ ನಿಮ್ಮ ಮೇಲೆ ಬಹಳ ದೊಡ್ಡ ಜವಬ್ದಾರಿ ಇದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೆಹರೂ ಅವರು ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ಅವರ ಯೋಗ್ಯತೆಗೂ ನೆಹರೂ ಅವರ ಯೋಗ್ಯತೆ ತಿಳಿದು ಮಾತನಾಬೇಕು. ಅವರಿಗೆ ಇತಿಹಾಸ, ಹೋರಾಟ ಗೊತ್ತಿಲ್ಲ. ನೆಹರೂ ಬಗ್ಗೆ ಟೀಕೆ ಮಾಡುವ ಯೋಗ್ಯತೆ ನಿಮಗಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ನೆಹರೂ ಅವರು ಅನೇಕ ಸಂಸ್ಥೆ ಕಟ್ಟಿದ್ದಾರೆ. ಬಿಜೆಪಿ ಅವರು ಕಾಂಗ್ರೆಸ್ 70 ವರ್ಷ ಏನು ಮಾಡಿದೆ ಎಂದು ಕೇಳುತ್ತಾರೆ. ದೇಶದ ಅಭಿವೃದ್ಧಿ ಮಾಡಿರುವುದು ಕಾಂಗ್ರೆಸ್ ಪಕ್ಷದಿಂದ. ಇಂದು ದೇಶದಲ್ಲಿ ಕರ್ನಾಟಕ ರಾಜ್ಯದ ಬಗ್ಗೆ 40% ಸರ್ಕಾರ ಎಂದು ಮಾತನಾಡುತ್ತಾರೆ. ನೆಹರೂ ಅವರು ಹಗರಣ ಮುಕ್ತ ಆಡಳಿತ ನೀಡಿದ್ದರು. ಆದರೆ ಇಂದು ಮೋದಿ ಅವರನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟವಾಗಿದೆ. ಅಭಿವೃದ್ಧಿ ಇಲ್ಲ, ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಈ ಸರ್ಕಾರದಿಂದ ಜನ ಭ್ರಮನಿರಸನರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಜನ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡಿದ್ದಾರೆ. ರಾಹುಲ್ ಗಾಂಧಿ ಅವರು ಯಾವುದೇ ಅಧಿಕಾರ, ಹುದ್ದೆಯ ಆಸೆ ಇಲ್ಲದೆ ದೇಶದುದ್ದ 3570 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ದೇಶ ಒಡೆಯುವ ಕೆಲಸ ಮಾಡಿದರೆ, ರಾಹುಲ್ ಗಾಂಧಿ ಅವರು ದೇಶ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂದು ಸರ್ವಜನಾಂಗದ ಶಾಂತಿಯ ತೋಟವಾಗಿ ರಾಜ್ಯದಲ್ಲಿ ಎಲ್ಲರೂ ಸಾಮರಸ್ಯದಿಂದ ಬಾಳಲು ದೇಶದ ಐಕ್ಯತೆ, ಸಮಗ್ರತೆ ಕಾಪಾಡಲು ಶ್ರಮಿಸುತ್ತಿದ್ದಾರೆ. ಆಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ರಾಜ್ಯದಲ್ಲಿ 511 ಕಿ.ಮೀ ಪಾದಯಾತ್ರೆ ಮಾಡಿ ಸಂದೇಶ ರವಾನಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿದಂ ಜನ ಬೇಸತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಗುತ್ತಿಗೆದಾರ ಸಂತೋಷ ಪಾಟೀಲ್ ಸತ್ತಿದ್ದಾರೆ, ಹುಬ್ಬಳ್ಳಿ ಗುತ್ತಿಗೆದಾರ ದಯಾ ಮರಣಕ್ಕೆ ಪತ್ರ ಬರೆದಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ರಾಜ್ಯದಲ್ಲಿ ಯಾವಾಗಲೇ ಚುನಾವಣೆ ನಡೆದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಾವೆಲ್ಲರೂ ನೆಹರೂ ಅವರ ಮಾರ್ಗದರ್ಶನದಂತೆ ಕಕೆಲಸ ಮಾಡೋಣ ಎಂಧು ಆಶಿಸಿದ್ದಾರೆ.