ಲಕ್ಕಿಮ್ಯಾನ್ ನಂತರ ಡಾರ್ಲಿಂಗ್ ಕೃಷ್ಣ ಅಭಿನಯದ ದಿಲ್ ಪಸಂದ್ ಚಿತ್ರ ಈ ವಾರ ತೆರೆಗೆ ಬಂದಿದೆ. ಮಾಮೂಲಿ ಕಥಾ ಹಂದರ ಹೊಂದಿದ್ದರೂ ಅದನ್ನು ಭಿನ್ನವಾಗಿ ತೋರಿಸುವ ಪ್ರಯತ್ನವನ್ನು ನಿರ್ದೇಶಕ ಶಿವ ತೇಜಸ್ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೌದು ಹುಲಿಯಾ ಖ್ಯಾತಿಯ ಅಭಿಮಾನಿ ಚಿತ್ರದ ಆರಂಭದಲ್ಲಿ ಕಾಣಿಸಿಕೊಂಡು ಅವರ ಧ್ವನಿಯ ಮೂಲಕ ಪಾತ್ರವರ್ಗವನ್ನು ಪರಿಚಯಿಸುವ ಮೂಲಕ ಚಿತ್ರತಂಡ ಹೊಸ ಪ್ರಯತ್ನ ಮಾಡಿದೆ.
ಚಿಕ್ಕ ವಯಸ್ಸಿನಲ್ಲಿ ತುಂಬಾ ತುಂಟನಾಗಿರುವ ನಾಯಕ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿಮಾನಿಯಾಗಿರುತ್ತಾನೆ. ಆತನ ತುಂಟಾಟವೇ ಆತನ ತಂದೆಯ ಕೋಪಕ್ಕೆ ಗುರಿಯಾಗುತ್ತಾನೆ.
ಹಾಗೆ ಸಾಗುತ್ತಾ ನಾಯಕ ಸಂತು (ಡಾರ್ಲಿಂಗ್ ಕೃಷ್ಣ) ಮತ್ತು ಮಿಂಚು (ಮೇಘಾ ಶೆಟ್ಟಿ) ಜೊತೆ ಮದುವೆ ನಿಶ್ಚಯಿಸುತ್ತಾರೆ. ಇದಾದ ಮೇಲೆ ಸಂತುಗೆ ಐಶ್ವರ್ಯ (ನಿಶ್ವಿಕಾ ನಾಯ್ಡು) ಪರಿಚಯವಾಗಿ ಪ್ರೇಮ ಅಂಕುರಿಸುತ್ತದೆ. ಸಂತು ನಿಶ್ಚಿತಾರ್ಥ ಆದ ಮಿಂಚುಳನ್ನು ಮದುವೆ ಆಗುತ್ತಾನಾ ಅಥವಾ ಕನಸಿನ ಹುಡುಗಿ ಐಶ್ವರ್ಯಗಳನ್ನು ಮದುವೆ ಆಗುತ್ತಾನಾ ಎಂಬುದು ನೋಡಬೇಕಾದರೆ ಥಿಯೇಟರ್ ಕಡೆಗೆ ಹೋಗಬೇಕು.

ಮೊದಲಾರ್ಧ ಮತ್ತು ದ್ವಿತಿಯಾರ್ಧ ಎರಡು ಭಾಗವಾಗಿ ನೋಡಿದರೆ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತದೆ ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಪೋಷಕ ಪಾತ್ರದಲ್ಲಿ ರಂಗಾಯಣ ರಘು, ಅರುಣಾ ಬಾಲರಾಜ್, ತಬಲಾ ನಾಣಿ, ಚಿತ್ಕಲಾ ಬಿರಾದರ್, ರಾಧಾ ರಾಮಚಂದ್ರ, ಸಾಧು ಕೋಕಿಲಾ, ಗಿರೀಶ್ ಶಿವಣ್ಣ, ಕಾಕ್ರೋಚ್ ಸುಧಿ, ಅತಿಥಿ ಪಾತ್ರದಲ್ಲಿ ಬಂದಿು ಹೋಗುವ ಅಜಯ್ ರಾವ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ನಿರ್ದೇಶಕ ಶಿವತೇಜಸ್ ಅಚ್ಚುಕಟ್ಟಾಗಿ ಚಿತ್ರ ಮಾಡಿದ್ದಾರೆ. ಉಳಿದಂತೆ ಬಹದ್ದೂರ್ ಚೇತನ್ ಕುಮಾರ್ ಹಾಗೂ ಕವಿರಾಜ್ ಅರಸ್ ಸಾಹಿತ್ಯ ಬರೆದಿರುವ ಹಾಡುಗಳು ಮತ್ತು ಅರ್ಜುನ ಜನ್ಯಾ ಸಂಗೀತವಿರುವ ಹಾಡುಗಳು ಕಿವಿಗೆ ಇಂಪು ನೀಡುತ್ತವೆ.