ಚಿತ್ರದುರ್ಗ ನಗರ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಅನಾಮಧೇಯ ವ್ಯಕ್ತಿಗಳು ಹನಿಟ್ರ್ಯಾಪ್ ಮಾಡಲು ಯತ್ನಿಸಿರುವುದ ಬೆಳಕಿಗಬಂದಿದೆ.
ಶಾಸಕರ ಮೊಬೈಲ್ಗೆ ವಿಡಿಯೋ ಕಾಲ್ ಮಾಡಿದ ಅನಾಮಧೇಯ ಯುವತಿ ವಿವಸ್ತ್ರಗೊಂಡು ಅಶ್ಲೀಲವಾಗಿ ಮಾತನಾಡಲು ಶುರು ಮಾಡಿದ್ದಾರೆ ಅನುಮಾನಗೊಂಡ ಶಾಸಕ ತಿಪ್ಪಾರೆಡ್ಡಿ ಕೂಡಲ್ಲೇ ಕರೆಯನ್ನು ಸ್ಥಗಿತಗೊಳಿಸಿದ್ದಾರೆ. ಇದಾದ ಬಳಿಕ ಯುವತಿ ಮೂರು ಭಾರಿ ಶಾಸಕರಿಗೆ ಕರೆ ಮಾಡಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ತಿಪ್ಪಾರೆಡ್ಡಿ ಯುವತಿ ಮೂರು ಭಾರಿ ಕರೆ ಮಾಡಿದ್ದು ಅವರ ನಂಬರನ್ನು ಬ್ಲಾಕ್ ಮಾಡಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದ ಹೇಳಿದ್ದಾರೆ.
ಸದ್ಯ ಪೊಲೀಸರು ಐಟಿ ಕಾಯ್ದೆ 66(ಎ) ಅಡಿ ಪ್ರಕರಣವನ್ನ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ವಿಡಿಯೋ ಕರೆ ರಾಜಸ್ಥಾನ ಅಥವಾ ಒಡಿಸ್ಸಾ ಇಂದ ಬಂದಿರಬಹುದು ಎಂದು ಶಂಕಿಸಿದ್ದಾರೆ.






