• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪುನೀತ್‌ಗೆ ಪ್ರಶಸ್ತಿ ಕೊಟ್ಟದ್ದಕ್ಕೆ ಇಡೀ ಕರ್ನಾಟಕ ಸಂಭ್ರಮಿಸಿದೆ : ಸಿಎಂ ಬೊಮ್ಮಾಯಿ

ಪ್ರತಿಧ್ವನಿ by ಪ್ರತಿಧ್ವನಿ
November 2, 2022
in ಕರ್ನಾಟಕ, ರಾಜಕೀಯ
0
ಚಿತ್ರದುರ್ಗದಲ್ಲಿ 1000 ಎಕರೆ ಪ್ರದೇಶದ ಕೈಗಾರಿಕಾ ಟೌನ್‌ಶಿಫ್‌ ನಿರ್ಮಾಣ: ಸಿಎಂ ಬಸವರಾಜ ಬೊಮ್ಮಾಯಿ
Share on WhatsAppShare on FacebookShare on Telegram

ಸಾಧನೆ ಮಾಡಿ ಪ್ರಶಸ್ತಿಗಾಗಿ ಪ್ರಯತ್ನ ಮಾಡದೇ ಇರುವವರಿಗೆ ಪ್ರಶಸ್ತಿ ದೊರೆಯುತ್ತದೆ. ಕೆಲವರು ಸಾಧನೆ ಮಾಡಿ ಪ್ರಶಸ್ತಿಗಾಗಿ ಸಾಕಷ್ಟು ಪ್ರಯತ್ನ‌ ಮಾಡುತ್ತಾರೆ. ಕೆಲವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಸುಮ್ಮನಿರುತ್ತಾರೆ. ಅವರಿಗೆ ನೊಬೆಲ್ ಪ್ರಶಸ್ತಿ ಹುಡುಕಿಕೊಂಡು ಬರುತ್ತದೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.

ADVERTISEMENT

ಕನ್ನಡ ರಾಜ್ಯೋತ್ಸವದ ನಿಮಿತ್ತ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿತರಿಸಿ ಮಾತನಾಡಿದ ಸಿಎಂ ನಾನಾ ರೀತಿಯಲ್ಲಿ ಪ್ರಶಸ್ತಿ ಇದೆ. ನಾವು ಚಿಕ್ಕವಯಸ್ಸಿನವರಾಗಿದ್ದಾಗ ನಾವು ಮಾತು ಉಚ್ಛರಿಸಿದಾಗ ನಮ್ಮ ತಾಯಿ ಪ್ರೀತಿಯಿಂದ ಮುತ್ತಿನ ಪ್ರಶಸ್ತಿ ಕೊಟ್ಟಾಗ ಆ ಪ್ರಶಸ್ತಿಯನ್ನು ಎಂದೂ ಮರೆಯಲು ಆಗುವುದಿಲ್ಲ. ಶಾಲೆಯಲ್ಲಿ ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿದಾಗ, ಯೌವನದಲ್ಲಿ ಮಿತ್ರರು ನಮ್ಮ ಸಾಧನೆ ಹಾಗೂ ನಾಯಕತ್ವ ಮೆಚ್ಚಿ ಹೊಗಳಿದಾಗ ಅದೊಂದು ರೀತಿಯ ರೋಮಾಂಚಕ ಪ್ರಶಸ್ತಿ. ಬದುಕಿನ ಎಲ್ಲ ಸ್ಥರಗಳಲ್ಲಿ ಹಲವು ರೀತಿಯ ಪ್ರಶಸ್ತಿಗಳು ದೊರೆಯುತ್ತವೆ ಎಂದು ಹೇಳಿದ್ದಾರೆ.

ಡೈನಮೈಟ್ ತಯಾರಕ‌ ಆಲ್‌ಫ್ರೆಡ್‌ ನೊಬೆಲ್‌ ಸಾಕಷ್ಟು ಹಣ ಮಾಡಿದ್ದರು. ಅಕಸ್ಮಾತ್ ಆಗಿ ಒಂದು ದಿನ ಅವರು ಜೀವಂತವಾಗಿದ್ದಾಗಲೇ ಪತ್ರಿಕೆಯೊಂದರಲ್ಲಿ ಅವರ ಸಾವಿನ‌ಸುದ್ದಿ ಬಂತು. ಅವರ ವಿರುದ್ದ ಕೆಟ್ಟ ಹೆಡ್ಲೈನ್ ಬಂದಿದ್ದು ನೋಡಿ ದುಃಖದಿಂದ ನನ್ನ ಹೆಸರನ್ನು‌ ಜನರು‌ ಈ ರೀತಿ‌ ನೆನಪಿಡುತ್ತಾರಾ ಎಂದು ಬೇಸರ ಪಟ್ಟುಕೊಂಡು ಪರಿವರ್ತನೆಗೊಂಡು ಡೈನಮೆಟ್‌ ತಯಾರಿಸುವುದನ್ನು‌ ನಿಲ್ಲಿಸಿದ. ಅದರಿಂದ ಬಂದ ಅಪಾರ ಹಣ ಮತ್ತು ಆಸ್ತಿಯನ್ನು ಉತ್ತಮ ಸಾಧನೆ ಮಾಡಿದವರಿಗೆ ನೊಬೆಲ್‌ ಪ್ರಶಸ್ತಿ ಕೊಡಲು ಮಿಸಲಿಟ್ಟರು. ಇದು ಉತ್ತಮ ಬದಲಾವಣೆ ಎಂದಿದ್ದಾರೆ.

ಇಲ್ಲಿ ಪ್ರಶಸ್ತಿ ಪಡೆದವರು ತಮ್ಮ ಜೀವನದುದ್ದಕ್ಕೂ ಪ್ರಶಸ್ತಿ ಪಡೆಯಲು ಪ್ರಯತ್ನ ಮಾಡಿಲ್ಲ. ತಮ್ಮ ಪಾಡಿಗೆ ಅವರು ಸಾಧನೆ ಮಾಡಿಕೊಂಡು ಬಂದಿದ್ದಾರೆ. ಇವರುಗಳನ್ನು ನಮ್ಮ ಆಯ್ಕೆ ಸಮಿತಿ ಗುರುತಿಸಿದೆ ಹೀಗೆ ಕೇಳದೇ ಪ್ರಶಸ್ತಿ ಪಡೆಯುವುದರಿಂದ ಆ ಪ್ರಶಸ್ತಿಗೆ ಮೆರುಗು ತಂದಿದೆ, ಗೌರವ ಬಂದಿದೆ. ಹಣ ಕೊಟ್ಟರೆ ಪ್ರಶಸ್ತಿ ಸಿಗುತ್ತದೆ. ಆದರೆ ಬದುಕಿನಲ್ಲಿ ಸಾಧಕರಾಗಿ ಯಶಸ್ವಿ ಜೀವನವನ್ನು ನಡೆಸುವುದೇ ದೊಡ್ಡ ಪ್ರಶಸ್ತಿ ಎಂದು ಹೇಳಿದ್ದಾರೆ.

ಬದುಕು ದೊಡ್ಡ ಪರೀಕ್ಷೆ. ನಾವು ಅಂದುಕೊಂಡದ್ದು ಯಾವುದೂ ಆಗುವುದಿಲ್ಲ. ಬದುಕಿನಲ್ಲಿ ಮುಗ್ಧತೆ ಕಾಪಾಡಿಕೊಳ್ಳುವುದು ಕಷ್ಟ. ನಮ್ಮಲ್ಲಿರುವ ಕುತೂಹಲ ನಮ್ಮ ಮುಗ್ಧತೆಯನ್ನು ಕಡಿಮೆಗೊಳಿಸುತ್ತದೆ. ಜತೆಗೆ ನಮ್ಮ ಆತ್ಮಸಾಕ್ಷಿಗಾಗಿ ಬುದುಕುವುದೂ ಬಹಳ ಕಷ್ಟ. ಇವೆರಡರಲ್ಲೂ ಜಯಶಾಲಿಗಳಾಗುವರು ದೊಡ್ಡ ಸಾಧಕರಾಗುತ್ತಾರೆ. ಕೆಲವು ಕ್ಷೇತ್ರಗಳಲ್ಲಿ ಕೆಲವರು ಅಸಮಾನ್ಯ ಸಾಧನೆ ಮಾಡುತ್ತಾರೆ. ಅದು ಸಮಾಜಕ್ಕೆ ತಿಳಿದು, ಇತರರಿಗೆ ಪ್ರೇರಣೆ ಆಗಬೇಕು. ಅದಕ್ಕಾಗಿ ಸಂಸ್ಥೆಗಳು ಸರ್ಕಾರಗಳು ಪ್ರಶಸ್ತಿಯನ್ನು ಕೊಡುತ್ತದೆ. ಜತೆಗೆ ಪ್ರಶಸ್ತಿ ಪಡೆದ ವ್ಯಕ್ತಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆಯಾಗುತ್ತದೆ. ಸಮಾಜದಲ್ಲಿ ಸರಿಯಾದವರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಾಗ ಪ್ರಶಸ್ತಿಗೂ ಗೌರವ ಬರುತ್ತದೆ, ಪ್ರಶಸ್ತಿ ಪಡೆದವರಿಗೂ ಗೌರವ ಹೆಚ್ಚುತ್ತದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಪುನೀತ್‌ಗೆ ಪ್ರಶಸ್ತಿ ಕೊಟ್ಟದ್ದಕ್ಕೆ ಇಡೀ ಕರ್ನಾಟಕ ಸಂಭ್ರಮಿಸಿದೆ

ಪುನೀತ್ ರಾಜ್‌ಕುಮಾರ್ ಸಣ್ಣ‌ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ‌. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಮನದಾಳದಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲೇ ಹೋದರೂ ಪುನೀತ್ ರಾಜ್ ಕುಮಾರ್ ಫೋಟೋ ಇಟ್ಟು ಪೂಜೆ ಮಾಡಿರುವುದನ್ನು ನಾವು ನೋಡ್ತೀವಿ. ಮಾನವೀಯತೆ ಇರುವ ವ್ಯಕ್ತಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದಾಗ ಅದರ ಪ್ರಭಾವ ಜನರ ಮೇಲೆ ಇರುತ್ತದೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದಕ್ಕೆ ಇಡೀ ಕರ್ನಾಟಕ ಸಂಭ್ರಮಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸಣ್ಣ ವಯಸ್ಸಿನ ಸಾಧಕರಿಗೂ ರಾಜ್ಯೋತ್ಸವ ಪ್ರಶಸ್ತಿ

ವಯಸ್ಸು ಮತ್ತು ಸಾಧನೆಗೆ ಸಂಬಂಧ ಇಲ್ಲ. ಯಾವುದೇ ವಯಸ್ಸಿನಲ್ಲೂ ಸಾಧನೆ ಮಾಡಬಹುದು. ಎಲ್ಲ ದೊಡ್ಡ ಸಾಧಕರೂ ಸಣ್ಣ ವಯಸ್ಸಲ್ಲೇ ಜಗತ್ತು ಬಿಟ್ಟು ಹೋಗಿದ್ದಾರೆ. 60 ವರ್ಷ ಮೀರಿರುವವರಿಗೆ ಮಾತ್ರ ಪ್ರಶಸ್ತಿ ಎನ್ನುವುದು ತಪ್ಪು ನಿರ್ಧಾರ. ಸಣ್ಣ ವಯಸ್ಸಿನ ಸಾಧಕರಿಗೂ ಪ್ರಶಸ್ತಿ ಕೊಟ್ಟರೆ ಅವರು ಮುಂದೆ ಇನ್ನೂ ದೊಡ್ಡ ಸಾಧನೆ ಮಾಡಬಹುದು. ಇದು ಇತರ ಯುವಕರಿಗೂ ಪ್ರೇರಣೆ ಆಗುತ್ತದೆ. ಮುಂದಿನ ವರ್ಷ ಈ ಬಗ್ಗೆ ಬದಲಾವಣೆ ಆಗುತ್ತದೆ. ವಯಸ್ಸಿನ ಗಡಿ ಇಲ್ಲದೇ ನಿಜವಾದ ಸಾಧಕರಿಗೆ ಪ್ರಶಸ್ತಿ ಕೊಡುವ ವ್ಯವಸ್ಥೆ ಆಗುತ್ತದೆ. ಈ ಬಗ್ಗೆ ಕೊರ್ಟ್‌ಗೆ ಅಫಿಡವಿಟ್‌ ನೀಡಿ ನಿಯಮ ಬದಲಾಯಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಾಡು ಕಟ್ಟುವ ಕೆಲಸದಲ್ಲಿ ಜನರು ಪಾಲುದಾರರಾಗಬೇಕು

ಇದುವರೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವವರನ್ನು ಸಂಪರ್ಕ ಮಾಡಿ ಕನ್ನಡ ನಾಡನ್ನು ಹೇಗೆಲ್ಲಾ ಕಟ್ಟಬಹುದು ಎನ್ನುವ ಅವರ ಅಭಿಪ್ರಾಯ ಪಡೆದುಕೊಳ್ಳುವ ಕೆಲಸ ಆಗಬೇಕು. ವ್ಯತಿರಿಕ್ತ ಪಡಿಸ್ಥಿತಿಯಲ್ಲೂ ಅವರು ಗಟ್ಟಿಯಾಗಿ ನಿಂತು ಸಾಧನೆ ಮಾಡಿದ್ದರ ಅವರ ಅನುಭವ ಮತ್ತು ಸಂದೇಶದ ಒಂದು ಮಾರ್ಗದರ್ಶಿ ಕೃತಿ ಹೊರತರಲಾಗುವುದು. ನಾಡು ಕಟ್ಟಲು ಅಭಿಪ್ರಾಯದ ಸಾಮ್ಯತೆ ಬರುವ ಅವಶ್ಯಕತೆ ಇದೆ. ನಾಡು ಕಟ್ಟುವ ವಿಚಾರದಲ್ಲಿ ಒಂದಾಗಬೇಕು. ಜನರನ್ಮು ಫಲಾನುಭವಿಗಳಾಗಿ ಮಾಡದೇ ಅವರನ್ನು ಪಾಲುದಾರರನ್ನಾಗಿ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ

ನಾಳೆಯಿಂದ ಮೂರು ದಿನ ರಾಜ್ಯ ದಲ್ಲಿ ಬಂಡವಾಳ ಹೂಡಿಕೆಯ ದೊಡ್ಡ‌ ಮೇಳ ನಡೆಯುತ್ತಿದೆ. ಇದರಿಂದ ಮುಂದಿನ 2-3 ವರ್ಷಗಳಲ್ಲಿ 5 ಲಕ್ಷ ಕೋಟಿ ಬಂಡವಾಳ ಹರಿದುಬರಲಿದೆ. ಎಲ್ಲ ರಂಗದಲ್ಲಿ ಕರ್ನಾಟಕ ಮುಂದೆ ತರಬೇಕು. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಆಗುವ ಕೆಲಸ ಆಗಬೇಕು. ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಆತ್ಮನಿರ್ಭರ‌ ಭಾರತ‌ ನಿರ್ಮಾಣ ಮಾಡುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಸಮಸ್ತ ಕನ್ನಡ ನಾಡಿನ ಜನರ ಆಶೀರ್ವಾದ ಅಗತ್ಯ ಇದೆ. ಕನ್ನಡ ನಾಡಿನಲ್ಲಿ ಹುಟ್ಡಿರುವ ನಾವು ಪುಣ್ಯವಂತರು. ಮತ್ತೊಂದು ಜನ್ಮ ಇದ್ದರೆ ಅದು ಕನ್ನಡ ನಾಡಿನಲ್ಲೇ ಇರಲಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರುಗಳಾದ ಆರ್ ಅಶೋಕ್, ಸುನಿಲ್ ಕುಮಾರ್, ಶಾಸಕರಾದ ಉದಯ ಗರುಡಾಚಾರ್, ಸಂಸದರಾದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯ ಟಿ ಎ ಸರವಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

T-20 ವಿಶ್ವಕಪ್‌; ಪುಟಿದೇಳುವ ವಿಶ್ವಾಸದಲ್ಲಿ ಭಾರತ

Next Post

Neha Gowda : ಬಿಗ್‌ ಬಾಸ್‌ ಮನೆಯಿಂದ ಹೊರಬಂದ ನೇಹಾ ಹೇಳಿದ್ದೇನು ಗೊತ್ತಾ? | Kannada Bigg Boss Season 9

Related Posts

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?
ರಾಜಕೀಯ

‘ಮೆಲೋಡಿ’ ಸ್ನೇಹದಿಂದ ಯುರೋಪ್ ರಾಜತಾಂತ್ರಿಕತೆಗೆ ಬಲ: ಮೋದಿ-ಮೆಲೋನಿ ಬಾಂಧವ್ಯ ಭಾರತಕ್ಕೆ ಹೇಗೆ ಗೇಮ್ ಚೇಂಜರ್?

by ಪ್ರತಿಧ್ವನಿ
May 22, 2026
0

ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಆತ್ಮೀಯ ಬಾಂಧವ್ಯ ಇದೀಗ ಜಾಗತಿಕ ರಾಜತಾಂತ್ರಿಕ ವಲಯದಲ್ಲೇ ಭಾರಿ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ...

Read moreDetails
“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

“Cockroach Janata Party” : ರಾಜಕೀಯ ವ್ಯಂಗ್ಯವೇ? ಸಾಮಾಜಿಕ ಅಸಮಾಧಾನದ ಪ್ರತೀಕವೇ?

May 21, 2026
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
Next Post
Neha Gowda : ಬಿಗ್‌ ಬಾಸ್‌ ಮನೆಯಿಂದ ಹೊರಬಂದ ನೇಹಾ ಹೇಳಿದ್ದೇನು ಗೊತ್ತಾ? | Kannada Bigg Boss Season 9

Neha Gowda : ಬಿಗ್‌ ಬಾಸ್‌ ಮನೆಯಿಂದ ಹೊರಬಂದ ನೇಹಾ ಹೇಳಿದ್ದೇನು ಗೊತ್ತಾ? | Kannada Bigg Boss Season 9

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada