ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದು NOCಗೆ ನಕಲಿ ಅಧಿಕಾರಿಯ ಹೆಸರಿನಲ್ಲಿ ಸಹಿ ಮಾಡಿ ಅಕ್ರಮ ಎಸಗಲು ಮುಂದಾಗಿರುವುದು ಬೆಳಕಿಗೆ ಬಂದಿದೆ.
ನಾರಾಯಣ ಓಲಂಪಿಯಾಡ್ ಶಾಲೆ ವಿರುದ್ದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ವಂಚನೆ ಮತ್ತು ಫೋರ್ಜರಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಪ್ರಿಕ್ರಿಯಿಸಿರುವ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಕಲಿ ಎನ್ಒಸಿ ಪತ್ರ ಸೃಷ್ಟಿಸಿ ತಮ್ಮ ಪರವಾನಗಿಯನ್ನು ನವೀಕರಿಸಲು ಮುಂದಾಗಿದೆ ಈ ಕುರಿತು ದೂರು ದಾಝಲಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಶಾಲಾ ಆಡಳಿತ ಂಡಳಿಯೂ NOC ಸಲ್ಲಿಸಿದ ವೇಳೆ ಅಧಿಕಾರಿಗಳಿಗೆ ಅನುಮಾನ ಬಂದಿದ್ದು ಈ ಕುರಿತು ವಿಚಾರನೆ ನಡೆಸಿದಾಗ ಆ ಹೆಸರಿನ ಯಾವ ಅಧಿಕಾರಿಯೂ ಇಲ್ಲದಿರುವುದು ಬೆಳಕಿಗೆ ಬಂದಿರುವುದಾಗಿ ಮಹೇಶ್ ಹೇಳಿದ್ದಾರೆ. ವಾಣಿಜ್ಯ ಬಳಕೆಯ ಕಟ್ಟಡಗಳಲ್ಲಿ ಸಂಸ್ಥೆಗಳನ್ನು ನಡೆಸುವವರು ಕಡ್ಡಾಯವಾಗಿ ಅಗ್ನಿಶಾಮಕ ಇಲಾಖೆಯಿಂದ ಪರವಾನಗಿ ಪಡೆಯಬೇಕು ಮತ್ತು ಅಧಿಕಾರಿಗಳು ಕಟ್ಟಡವನ್ನ ಪರಿಶೀಲಿಸಿ ಅಗತ್ಯ ಸಲಹೆಯನ್ನ ನೀಡಲಿದ್ದಾರೆ ಎಂಧು ತಿಳಿಸಿದ್ದಾರೆ. ನಾರಾಯಣ ಒಲಂಪಿಯಾಡ್ ಶಾಲೆಯೂ ಪರವಾನಗಿಗಾಗಿ ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ ಮತ್ತು ನಿಯಮಗಳು ಉಲ್ಲಂಘನೆಯಾಗಿರುವ ಕಾರಣ ಫೋರ್ಜರಿ ಮಾಡಿರಬಹುದು ಎಂಧು ಶಂಕಿಸಲಾಗಿದೆ.






