ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮ್ಯಾನ್ ಧನಂಜಯ್ ಡಿ ಸಿಲ್ವಾ ಆಕರ್ಷಕ ಅರ್ಧ ಶತಕದ ಫಲವಾಗಿ ಶ್ರೀಲಂಕಾ ತಂಡವು ಅಫ್ಘಾನಿಸ್ತಾನದ ವಿರುದ್ದ 6 ವಿಕೆಟ್ಗಳ ಜಯ ಸಾಧಿಸಿದೆ.
ಬ್ರಿಸ್ಬೇನ್ನ ದ ಗಾಬ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 8 ವಿಕೆಟ್ಗಳ ನಷ್ಟಕ್ಕೆ 144 ರನ್ಗಳನ್ನು ಗಳಿಸಿತ್ತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ಧನಂಜಯ್ ಡಿ ಸಿಲ್ವಾ(66 ರನ್, 42 ಎಸೆತ, 6 ಬೌಂಡರಿ, 2 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಫಲವಾಗಿ 18.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು ಮತ್ತು ಸೆಮೀಸ್ ಆಸೆಯನ್ನ ಜೀವಂತವಾಗಿಸಿದೆ.