ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬ್ಯಾಟ್ಸ್ಮ್ಯಾನ್ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ತಾವು ಉಳಿದುಕೊಂಡಿರುವ ಹೋಟೆಲ್ ಕೊಠಡಿಯ ವಿಡಿಯೋ ಲೀಕ್ ಆಗಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಇದು Absolute Invasion Of Privacy ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಕೊಹ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನನು ನೋಡಲು ಮತ್ತು ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಹೆಚ್ಚು ಉತ್ಸುಕರಾಗಿರುತ್ತಾರೆ. ಆದರೆ, ಸದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ನನ್ನನು ಹೆಚ್ಚು ಚಿಂತೆಗೀಡು ಮಾಡಿದ್ದು ಇದು ಖಾಸಗಿತನಕ್ಕೆ ಧಕ್ಕೆ ಉಂಟು ಮಾಡಿದೆ ನಾನು ತಂಗಿರುವ ಹೋಟೆಲ್ನಲ್ಲಿ ಈಗಾದರೆ ಬೇರೆಯವರ ಕಥೆಯೇನು ದಯವಿಟ್ಟು ಗೌಪತ್ಯೆಯನ್ನು ಕಾಪಾಡಿ ಎಂದು ಬರೆದುಕೊಂಡಿದ್ದಾರೆ.
ಕೊಹ್ಲಿ ಜೊತೆ ದನಿಗೂಡಿಸಿರುವ ಆಸ್ಟ್ರೇಲಿಯಾದ ಬ್ಯಾಟ್ಸ್ಮ್ಯಾನ್ ಡೇವಿಡ್ ವಾರ್ನರ್ ಇದು ಖಂಡರ್ನಾಹ ಎಂದು ಹೇಳಿದ್ದಾರೆ ಮತ್ತು ಒಹ್ಲಿ ಸಹೋದರ ವಿಕಾಸ್ ಹಾಗೂ ಪತ್ನಿ ಅನುಷ್ಕಾ ಶರ್ಮಾ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿಡಿಯೋದಲ್ಲಿ ಹೋಟೆಲ್ ಸಿಬ್ಬಂದಿಯೊಬ್ಬರು ಕೊಹಲಿ ರೂಮಿಗೆ ಪ್ರವೇಶಿಸಿದ ನಟನ ಬೆಲೆ ಬಾಳುವ ವಸ್ತುಗೂ ಹಾಗೂ ಅವರ ರೂಮಿನಲ್ಲಿ ವಿಡಿಯೋ ಮಾಡಿರುವುದು ಕಂಡು ಬರುತ್ತದೆ.






