ಸಾಂಸ್ಕೃತಿಕ ನಗರಿ ಮೈಸೂರು ಸಿಲಿಕಾನ್ ಸಿಟಿ ಬೆಂಗಳೂರು ನಂತ್ರ ಕರ್ನಾಟಕದ ಅತಿ ದೊಡ್ಡ ಬ್ಯುಸಿನಿಸ್ ಹಬ್ ಆಗಿ ಹೊರಹೊಮ್ಮುತ್ತಿದೆ. ಕಳೆದ 5 ವರ್ಷಗಳಲ್ಲಿ ಎಲ್ಲಾ ಕ್ಷೇತ್ರದಲ್ಲೂ ಗಣನೀಯವಾಗಿ ಬೆಳೆದಿದೆ. ವಹಿವಾಟು ಬೆಳೆದಂತೆ ನಗರ ಕೂಡ ದೊಡ್ಡದಾಗುತ್ತಿದೆ . ವಿಮಾನಯಾನ ಸೇವೆ ಚುರುಕುಗೊಂಡ ನಂತ್ರ ವ್ಯಾಪರ-ವಹಿವಾಟು ಹೆಚ್ಚಿದ್ದು, ಏರ್ಪೋರ್ಟ್ ಸಿಕ್ಕಾಪಟ್ಟೆ ರಷ್ ಆಗ್ತಿದೆ . ಜೊತೆಗೆ ಪ್ರಯಾಣಿಕರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.
ಪ್ರಯಾಣಿಕರ ಸಂಖ್ಯೆ ದ್ವಿಗುಣ
ಮೈಸೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರ ಸಂಖ್ಯೆ ದ್ವಿಗುಣವಾಗಿದೆ. ತ್ವರಿತ ಪ್ರಯಾಣಕ್ಕೆ ಉದ್ಯಮಿಗಳು, ಪ್ರವಾಸಿಗರಿಂದ ವಿಮಾನ ಬಳಕೆಯಾಗ್ತಿದೆ. 2021ರ ಆಗಸ್ಟ್ ನಲ್ಲಿ 8,474 ಮಂದಿ ಏರ್ ಪೋರ್ಟ್ ನಿಂದ ಪ್ರಯಾಣ ಬೆಳೆಸಿದ್ರು. ಈ ವರ್ಷ ಆಗಸ್ಟ್ ನಲ್ಲಿ 16,181 ಮಂದಿ ವಿಮಾನ ಪ್ರಯಾಣ ಮಾಡಿದ್ದಾರೆ 2021ರ ಸೆಪ್ಟೆಂಬರ್ನಲ್ಲಿ 8330 ಮಂದಿ ವಿಮಾನದಲ್ಲಿ ಪ್ರಯಾಣ ಮಾಡಿದ್ರು . 2022ರ ಸೆಪ್ಟೆಂಬರ್ ನಲ್ಲಿ 16,539 ಜನ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ವಿಮಾನ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಂಡಿದ್ದು, ಏರೋಪ್ಲೇನ್ ಸಂಸ್ಥೆಗಳು ಭರ್ಜರಿ ಲಾಭಮಾಡಿವೆ.
ಜುಲೈನಲ್ಲಿ 23,199 ಮಂದಿ ಪ್ರಯಾಣ
ಜುಲೈ ತಿಂಗಳಲ್ಲಿ ಬರೋಬ್ಬರಿ 23199 ಮಂದಿ ಏರೋಪ್ಲೇನ್ ಬಳಸಿ ವಿವಿಧೆಡೆ ತೆರಳಿದ್ದಾರೆ . ಹಿಂದಿನ ವರ್ಷ ಅಂದ್ರೆ 2021ರ ಜುಲೈನಲ್ಲಿ 7,060 ಮಂದಿ ಮಾತ್ರ ವಿಮಾನ ಬಳಸಿದ್ರು , ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಅಂದಾಜು ಪ್ರತಿನಿತ್ಯ 700 ಮಂದಿ ಪ್ರಯಾಣಿಸುತ್ತಿದ್ದು, ದಿನ ಕಳೆದಂತೆ ರಸ್ತೆ, ರೈಲು ಸಂಚಾರಕ್ಕಿಂತ ವಿಮಾನ ಪ್ರಯಾಣಕ್ಕೆ ಜನರು ಹೆಚ್ಚು ಒಲವು ತೋರುತ್ತಿದ್ದಾರೆ.

ದಸರಾ ಎಫೆಕ್ಟ್
ಕಳೆದ 2 ವರ್ಷದ ಬಳಿಕ ಸರ್ಕಾರ ದಸರಾವನ್ನ ಈ ಬಾರಿ ಅದ್ಧೂರಿಯಾಗಿ ಆಚರಿಸಿತು. ಲಕ್ಷಾಂತರ ಮಂದಿ ಜನ ದಸರಾ ಸಂಭ್ರಮದಲ್ಲಿ ಭಾಗಿಯಾಗಿದ್ರು. ಈ ವೇಳೆ ಹೊರರಾಜ್ಯದ ಪ್ರಯಾಣಿಕರು ಏರೋಪ್ಲೇನ್ ಮೂಲಕವೇ ತಮ್ಮ ಊರುಗಳಿಗೆ ತೆರಳಿದ್ದಾರೆ . ಹೀಗಾಗಿ ಏರ್ಪೋರ್ಟ್ ಬಳಕೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ರನ್ ವೇ ವಿಸ್ತರಣೆ.. ಶೀಘ್ರ ಇಂಟರ್ ನ್ಯಾಷನಲ್ ಏರ್ ಪೋರ್ಟ್
ರನ್ ವೇ ಸದ್ಯಕ್ಕೆ 1,740 ಮೀಟರ್ ಮಾತ್ರ ಇದೆ. ಇದರಿಂದಾಗಿ ಪುಟ್ಟ ವಿಮಾನಗಳಿಗೆ ಮಾತ್ರ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿದೆ. ದೆಹಲಿ, ಕೋಲ್ಕತ್ತಾ ಮಾತ್ರವಲ್ಲದೆ ವಿದೇಶಗಳಿಗೂ ವಿಮಾನದ ಬೇಡಿಕೆ ಇದೆ. ಆದರೆ, ರನ್ ವೇ ಚಿಕ್ಕದಾಗಿರುವುದರಿಂದ ಏರ್ ಬಸ್, ಬೋಯಿಂಗ್ನಂತಹ ವಿಮಾನಗಳು ಬಂದಿಳಿಯಲು ಅಥವಾ ಹಾರಾಟ ನಡೆಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ವರ್ಷಗಳಿಂದ ನಿಲ್ದಾಣ ಹಾಗೂ ರನ್ ವೇಯನ್ನು 2,750 ಮೀಟರ್ಗೆ ವಿಸ್ತರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಮಾನ ಹಾರಾಟ ಕನಸು ನನಸಾಗುವ ಸಮಯ ಸಮೀಪಿಸುತ್ತಿದೆ.






