ಓಲಾ, ಉಬರ್, ರಾಪಿಡೋ ನಂತಹ ಅಪ್ಲಿಕೇಷನ್ ಆಧಾರಿತ ಸೇವೆಗಳಲ್ಲಿ ಸರ್ಕಾರದ ನಿಯಮ ಪಾಲಿಸುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದ ಮರುದಿನವೇ ದರಗಳನ್ನು ತೀವ್ರ ಕುಸಿತ ಕಂಡು ಬಂದಿದೆ.
ಈ ಹಿಂದೆ ಅಪ್ಲಿಕೇಷನ್ ಆಧಾರಿತ ಆಟೋ ಸೇವೆಗಳಲ್ಲಿ ಪ್ರಯಾಣಿಕರು 2ಕಿಲೋಮೀಟರ್ಗೆ 100 ರೂಪಾಯಿ ಪಾವತಿಸಬೇಕಿ ಎಂದು ಸಾರ್ವಜನಿಕರು ಹಾಗೂ ಆಟೋ ಚಾಲಕರ ಹಾಗೂ ಮಾಲೀಕರ ಸಂಘಗಳು ದೂರಿದ್ದವು.
ಕರ್ನಾಟಕ ಹೈಕೋರ್ಟ್ ಆದೇಶದ ನಂತರ ಉಬರ್ನಲ್ಲಿ 40ರೂಪಾಯಿಗೆ ದರ ಇಳಿದರೆ, ಓಲಾದಲ್ಲಿ 60 ರೂಪಾಯಿ ಹಾಗೂ ರಾಪಿಡೋದಲ್ಲಿ 91ರೂಪಾಯಿಗಳು ಎಂದು ತೋರಿಸಲಾಗುತ್ತಿದೆ.

ಸರ್ಕಾರವು ಈ ಮೊದಲು 1.8 ಕಿಲೋಮೀಟರ್ಗೆ 35ರೂಪಾಯಿ ದರವನ್ನ ನಿಗದಿಪಡಿಸಿತ್ತು. ನಂತರ ಪ್ರತಿ ಕಿಲೋಮೀಟರ್ಗೆ 15 ರೂಪಾಯಿ ಎಂದು ದರವನ್ನು ನಿಗದಿಪಡಿಸಿತ್ತು. ಕಳೆದ ಎರಡು ವಾರಗಳಿಂದ ಅಪ್ಲಿಕೇಶನ್ ಆಧಾರಿತ ಸೇವೆಗಳಲ್ಲಿ ಬೆಲೆ ಏರಿಕೆ ಕುರಿತು ವ್ಯಾಪಕವಾಗಿ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದರಗಳಲ್ಲಿ ಇಳಿಕೆ ಕಂಡಿದೆ.
ಆಟೋ ದರದ ಮೇಲೆ 10% ಕಮಿಷನ್ ಹಾಗೂ GST ವಿಧಿಸಲು ನ್ಯಾಯಾಲಯ ಅಗ್ರಗೇಟರ್ಗಳಿಗೆ ಅನುಮತಿ ನೀಡಿದೆ. ಈ ಆದೇಶವು ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದೆ.
ಇದೇ ವೇಳೆ ಅಪ್ಲಿಕೇಷನ್ಗಳಲ್ಲಿನ ಆಟೋ ದರಗಳನ್ನು ನಿಯಂತ್ರಿಲಸು ಸಾರಿಗೆ ಇಲಾಖೆ ಹೊಸ ದರ ಹಾಗೂ ಕಾರ್ಯವಿಧಾನವನ್ನು ಜಾರಿಗೆ ತರುವಂತೆ ಆದೇಶಿಸಿದೆ.













